ಕೊರೊನಾ ನಿಯಂತ್ರಣದ ಬಗ್ಗೆ ಸೆಂಟ್ರಲ್ ಟೀಂ ಮೀಟಿಂಗ್, ರಾಜ್ಯ ಸರ್ಕಾರಕ್ಕೆ ‘ತ್ರಿ’ಸೂತ್ರ ಸಲಹೆ!
ಬೆಂಗಳೂರು: ಕರ್ನಾಟಕದ ಕೊರೊನಾ ಪರಿಸ್ಥಿತಿಯನ್ನ ಕೇಂದ್ರ ಸರ್ಕಾರ ಹದ್ದಿನ ಕಣ್ಣಿಟ್ಟು ನೋಡ್ತಿದೆ. ಇದಕ್ಕೆ ಕೊವಿಡ್ ಸೆಂಟ್ರಲ್ ಟೀಂ ಮೀಟಿಂಗ್ ನಡೆಸಿದ್ದೇ ಸಾಕ್ಷಿ. ಯಾಕಂದ್ರೆ ಸಿಎಂ ಬಿಎಸ್ವೈ ಸೇರಿದಂತೆ ಸಚಿವರು, ಅಧಿಕಾರಿಗಳ ಜೊತೆ ಕೇಂದ್ರದ ತಂಡ ಇಂಪಾರ್ಟೆಂಟ್ ಮೀಟಿಂಗ್ ನಡೆಸಿದೆ. ಈ ವೇಳೆ ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿ ಬಗ್ಗೆ ಸರ್ಕಾರದಿಂದಲೂ ಮಾಹಿತಿ ಪಡೆದಿದೆ. ತನ್ನದೇ ಆಧ್ಯಯನದ ಆಧಾರದ ಅಡಿ ಮಹತ್ತರ ಸಲಹೆ, ಸೂಚನೆಗಳನ್ನೂ ಸರ್ಕಾರ ಕೊಟ್ಟಿದೆ. ಇಷ್ಟೇ ಅಲ್ಲ, SARI, ILI ಕೇಸ್‌ಗಳ ಮೇಲೆ ಹೆಚ್ಚಿನ ನಿಗಾ ಇಡುವಂತೆ […]
ಬೆಂಗಳೂರು: ಕರ್ನಾಟಕದ ಕೊರೊನಾ ಪರಿಸ್ಥಿತಿಯನ್ನ ಕೇಂದ್ರ ಸರ್ಕಾರ ಹದ್ದಿನ ಕಣ್ಣಿಟ್ಟು ನೋಡ್ತಿದೆ. ಇದಕ್ಕೆ ಕೊವಿಡ್ ಸೆಂಟ್ರಲ್ ಟೀಂ ಮೀಟಿಂಗ್ ನಡೆಸಿದ್ದೇ ಸಾಕ್ಷಿ. ಯಾಕಂದ್ರೆ ಸಿಎಂ ಬಿಎಸ್ವೈ ಸೇರಿದಂತೆ ಸಚಿವರು, ಅಧಿಕಾರಿಗಳ ಜೊತೆ ಕೇಂದ್ರದ ತಂಡ ಇಂಪಾರ್ಟೆಂಟ್ ಮೀಟಿಂಗ್ ನಡೆಸಿದೆ.
ಈ ವೇಳೆ ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿ ಬಗ್ಗೆ ಸರ್ಕಾರದಿಂದಲೂ ಮಾಹಿತಿ ಪಡೆದಿದೆ. ತನ್ನದೇ ಆಧ್ಯಯನದ ಆಧಾರದ ಅಡಿ ಮಹತ್ತರ ಸಲಹೆ, ಸೂಚನೆಗಳನ್ನೂ ಸರ್ಕಾರ ಕೊಟ್ಟಿದೆ. ಇಷ್ಟೇ ಅಲ್ಲ, SARI, ILI ಕೇಸ್‌ಗಳ ಮೇಲೆ ಹೆಚ್ಚಿನ ನಿಗಾ ಇಡುವಂತೆ ಕೇಂದ್ರದ ತಂಡ ರಾಜ್ಯ ಸರ್ಕಾರಕ್ಕೆ ವಾರ್ನಿಂಗ್ ಕೊಟ್ಟಿದೆ.
ಕೇಂದ್ರದ ‘ತ್ರಿ’ಸೂತ್ರ ನಿಜ.. ರಾಜ್ಯ ಸರ್ಕಾರದ ಜೊತೆಗಿನ ಸಭೆ ವೇಳೆ ಸೆಂಟ್ರಲ್ ಕೊವಿಡ್ ಟೀಂ ರಾಜ್ಯ ಸರ್ಕಾರಕ್ಕೆ ಮೂರು ಕ್ರೂಶಿಯಲ್ ಸಲಹೆಗಳನ್ನ ನೀಡಿದೆ. ಆ ಮೂರು ಸಲಹೆಗಳೇನು ಅಂತಾ ನೋಡೋದಾದ್ರೆ. ಸೋಂಕು ಹೆಚ್ಚಾದರೆ ಆತಂಕ ಬೇಡ, ಜೀವ ಉಳಿಸುವತ್ತ ಹೆಚ್ಚಿನ ಗಮನ ಕೊಡಿ. 50 ವರ್ಷ ಮೇಲ್ಪಟ್ಟ, SARI, ILI ಕೇಸ್ ಗಳ ಜೀವ ಉಳಿಸುವತ್ತ ಗಮನಹರಿಸಿ. ಕಂಟೇನ್ಮೆಂಟ್ ಜೋನ್ಗಳಲ್ಲಿ ಹೆಚ್ಚು ಟೆಸ್ಟ್ ನಡೆಸುವಂತೆ ಸೇಂಟ್ರಲ್ ಟೀಂ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಇದಿಷ್ಟೇ ಅಲ್ಲ, ಸಭೆ ವೇಳೆ ಇನ್ನೂ ಮಹತ್ತರ ಸಲಹೆ, ಸೂಚನೆಗಳನ್ನೂ ಕೇಂದ್ರದ ತಂಡ ರಾಜ್ಯ ಸರ್ಕಾರ ನೀಡಿದೆ. ಅವೇನು ಅನ್ನೋದನ್ನ ನೋಡೋದಾದ್ರೆ.
ಸೆಂಟ್ರಲ್ ಟೀಂ ಸಲಹೆಗಳೇನು? ಕಂಟೇನ್ಮೆಂಟ್ ಜೋನ್ಗಳಲ್ಲಿ ನಿಯಮ ಬಿಗಿಗೊಳಿಸಿ. ಕಂಟೇನ್ಮೆಂಟ್ ಜೋನ್ಗಳಿಂದ ಗ್ರೀನ್ ಜೋನ್ಗಳಿಗೆ ಸೋಂಕು ಹರಡುತ್ತಿದೆ. ಹೀಗಾಗಿ ಕಂಟೇನ್ಮೆಂಟ್ ಜೋನ್ಗಳನ್ನ ಸಂಪೂರ್ಣ ಸೀಲ್ಡೌನ್ ಮಾಡಿ ಅಂತ ಕೇಂದ್ರದ ಟೀಂ ಖಡಕ್ ಸಲಹೆ ನೀಡಿದೆ. ಇಷ್ಟೇ ಅಲ್ಲ ಕಂಟೇನ್ಮೆಂಟ್ ಜೋನ್ಗಳಲ್ಲಿ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಿಸಿ. ಸ್ಲಂ, ಮಾರ್ಕೆಟ್ನಂತಹ ಜನಸಂದಣಿ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.
ಅಲ್ಲದೇ ಎಲ್ಲ ಪ್ರಯೋಗಾಲಯಗಳು ಸಂಪೂರ್ಣ ಸಾಮರ್ಥ್ಯ ಬಳಸಿ ಟೆಸ್ಟಿಂಗ್ ಮಾಡಲಿ. ಸಾವಿನ ಪ್ರಮಾಣವನ್ನು ಮತ್ತಷ್ಟು ಕಡಿಮೆ ಮಾಡಬೇಕು. ಸದ್ಯ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇಕಡಾ 1.56ರಷ್ಟಿದ್ದು ಶೇ.1ಕ್ಕೆ ಇಳಿಸಲು ಯತ್ನಿಸಿ ಅಂತಲೂ ಹೇಳಿದೆ. ಇನ್ನು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಬಗ್ಗೆ ತೀವ್ರ ಅಲರ್ಟ್ ಆಗಬೇಕು ಅಂತಾ ಕೇಂದ್ರದ ತಂಡ ರಾಜ್ಯ ಸರ್ಕಾರ ಸಲಹೆ, ಸೂಚನೆಗಳನ್ನ ಕೊಟ್ಟಿದೆ.
ಸರ್ಕಾರದ ಬೆನ್ನು ತಟ್ಟುತ್ತಲೇ ಖಡಕ್ ಸೂಚನೆ! ಕೇಂದ್ರ ಸರ್ಕಾರದ ಟೀಂ ಎಷ್ಟು ಖಡಕ್ ಆಗಿತ್ತು ಅಂದ್ರೆ, ಸಿಎಂ ಸಭೆಯಲ್ಲಿ ರಾಜ್ಯದ ಪರಿಸ್ಥಿತಿ ಬಗ್ಗೆ ಸ್ವತಃ ಕೇಂದ್ರದ ಅಧಿಕಾರಿಗಳೇ ಪ್ರಸೆಂಟೇ಼ಷನ್ ಮಾಡೋ ಮೂಲಕ ಸಚಿವರನ್ನೂ ಅಚ್ಚರಿಗೊಳಿಸಿದ್ರು. ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಕೇಸ್ ಇದೆ. ಎಲ್ಲೆಲ್ಲಿ ಕಂಟೇನ್ಮೆಂಟ್ ಜೋನ್ ಇದೆ ಅನ್ನೋ ಇಂಚಿಂಚೂ ಮಾಹಿತಿಯನ್ನ ಸೆಂಟ್ರಲ್ ಟೀಂ ಮೊದಲೇ ಸಂಗ್ರಹಿಸಿತ್ತು. ರಾಜ್ಯ ಸರ್ಕಾರದ ಬೆನ್ನು ತಟ್ಟುತ್ತಲೇ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನ ಸೆಂಟ್ರಲ್ ಟೀಂ ಸಿಎಂ ಬಿಎಸ್ ಹಾಗೂ ಸಚಿವರ ಮುಂದಿಟ್ಟಿದೆ.
ಇನ್ನು, ಎರಡು ದಿನಗಳ ಕಾಲ ರಾಜ್ಯದಲ್ಲೇ ಠಿಕಾಣಿ ಹೂಡಲಿರುವ ಆರ್ತಿ ಅಹುಜಾ ನೇತೃತ್ವದ ಸೆಂಟ್ರಲ್ ಟೀಂ, ರಾಜ್ಯ ಸರ್ಕಾರ ಹೇಳಿದ್ದನ್ನಷ್ಟೇ ಕೇಳಿಕೊಂಡು ವಾಪಸ್ ಹೀಗೋದಕ್ಕೆ ಸಿದ್ಧ ಇಲ್ಲ. ರಾಜ್ಯದಲ್ಲಿ ಕಂಟೇನ್ಮೆಂಟ್ ಜೋನ್, ಕೊವಿಡ್ ಕೇರ್ ಸೆಂಟರ್ಗಳಿಗೂ ತಾವೇ ಖುದ್ದಾಗಿ ಭೇಟಿ ನೀಡಲಿದ್ದಾರೆ. ಇನ್ನೊಂದ್ಕಡೆ ಕರುನಾಡಲ್ಲಿ SARI, ILI ಕೇಸ್‌ಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸೆಂಟ್ರಲ್ ಟೀಂ ವಾರ್ನಿಂಗ್ ಮಾಡಿದೆ. ಇದರ ಜೊತೆಗೆ ರಾಜ್ಯದ ಸ್ಥಿತಿಗತಿಯನ್ನ ಮತ್ತಷ್ಟು ಆಳವಾಗಿ ಅಧ್ಯಯನ ಮಾಡಿ ಬಳಿಕ ಮಾರ್ಗಸೂಚಿಗಳನ್ನ ಕೂಡ ನೀಡೋ ಸಾಧ್ಯತೆ ಇದೆ.
Published On - 6:57 am, Wed, 8 July 20