ದೆಹಲಿ: ಕೃಷಿ ಕಾನೂನುಗಳ ವಿರುದ್ಧ ಜನವರಿ 26ರಂದು ನಡೆಯುವ ಟ್ರಾಕ್ಟರ್ ಮೆರವಣಿಗೆಯನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ.
ರೈತರ ಬೇಡಿಕೆಗಳು ಈಡೇರದ ಕಾರಣ ಗಣರಾಜ್ಯೋತ್ಸವದ ದಿನದಂದು ದೆಹಲಿಯಲ್ಲಿ ಬೃಹತ್ ಮೆರವಣಿಗೆ ಮಾಡುವುದಾಗಿ ರೈತರು ಮುಂದಾಗಿದ್ದಾರೆ. ಹರಿಯಾಣ ರೈತರು ಮೆರವಣಿಗೆಗೆ ತಯಾರಿಗಳು ನಡೆಸಿಕೊಂಡಿದ್ದು, ಸುಮಾರು 20,000 ಟ್ರಾಕ್ಟರ್ಗಳಲ್ಲಿ ಮೆರವಣಿಗೆ ಮಾಡುವ ನಿರೀಕ್ಷೆಯಿದೆ.
ಈ ಕುರಿತು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ನೀಡಿದ ಅಫಿಡವಿಟ್ನಲ್ಲಿ, ಗಣರಾಜ್ಯೋತ್ಸವ ಸಾಂವಿಧಾನಿಕವಾಗಿ ಮತ್ತು ಐತಿಹಾಸಿವಾಗಿ ಹೆಚ್ಚು ಮಹತ್ವನ್ನು ಪಡೆದುಕೊಂಡಿದೆ. ಈ ದಿನ ಹಲವು ಕಾರ್ಯಕ್ರಮಗಳು ನಡೆಯುತ್ತದೆ. ಜನವರಿ 23 ರಂದು ನಡೆಯುವ ತಾಲೀಮು, ಎನ್ಸಿಸಿ ಪಥ ಸಂಚಲನ, 29ರಂದು ಬೀಟಿಂಗ್ ರಿಟ್ರೀಟ್ ಸೇರಿದಂತೆ ಜನವರಿ 30 ರ ಹುತಾತ್ಮದ ದಿನ ಹೆಚ್ಚು ಮಹತ್ವದ್ದಾಗಿದೆ. ಈ ವೇಳೆ ಯಾವುದೇ ಸಮಸ್ಯೆಗಳು ಕಂಡುಬಂದರೂ ಕಾನೂನು ಸುವ್ಯವಸ್ಥೆಗೆ ಭಂಗವಾಗುತ್ತದೆ. ಇದರಿಂದ ದೇಶಕ್ಕೆ ಮುಜುಗರವುಂಟಾಗುತ್ತದೆ ಎಂದು ತಿಳಿಸಿದೆ.
ಕೃಷಿ ಕಾನೂನುಗಳನ್ನು ಅವಸರದಿಂದ ಜಾರಿಗೆ ತಂದಿಲ್ಲ. ಇದು ಎರಡು ದಶಕಗಳ ಚರ್ಚೆಯ ಫಲಿತಾಂಶವಾಗಿದೆ ಎಂದು ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ತಿಳಿಸಿದೆ. ರೈತರಿಗೆ ಇರುವ ಅನುಮಾನಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಹೆಚ್ಚಿನ ಪ್ರಯತ್ನ ನಡೆಸಿದೆ ಎಂದು ನ್ಯಾಯಾಲಯಕ್ಕೆ ನೀಡಿದ ಅಫಿಡವಿಟ್ನಲ್ಲಿ ಸ್ಪಷ್ಟಪಡಿಸಿದೆ.
ಕೇಂದ್ರ ಬಜೆಟ್‌ನಲ್ಲಿ ಕೊರೊನಾ ಸೆಸ್ ಅಥವಾ ಸರ್ ಚಾರ್ಜ್ ವಿಧಿಸುವ ಸಾಧ್ಯತೆ
Published On - 11:22 am, Tue, 12 January 21