ಬೆಂಗಳೂರು: ಎಲ್ಲರಿಗೂ ರಕ್ಷಣೆ ನೀಡಲು ಆಗಲ್ಲ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi surya) ಹೇಳಿಕೆಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy sulibele) ತಿರುಗೇಟು ನೀಡಿದ್ದಾರೆ.
ನಮ್ಮ ರಕ್ಷಣೆ ನಾವೇ ಮಾಡೋದಾದರೆ ಸರ್ಕಾರ ಯಾಕೆ ಬೇಕು? ನಮ್ಮನ್ನು ರಕ್ಷಿಸಲು ಆಗಲ್ಲ ಎಂದಾದರೆ ಸರ್ಕಾರ ಏನು ಮಾಡುತ್ತದೆ ಎಂದು ತೇಜಸ್ವಿ ಸೂರ್ಯ ಹೇಳಿಕೆಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಟೌನ್ ಹಾಲ್ ಬಳಿ ಪ್ರತಿಭಟನೆ ವೇಳೆ ಗರಂ ಆಗಿದ್ದಾರೆ. ಮಂಗಳೂರಿನಲ್ಲಿ ನಡೆದ ಪ್ರವೀಣ್ ಹತ್ಯೆ ಖಂಡಿಸಿ ಬೆಂಗಳೂರಿನ ಟೌನ್ಹಾಲ್ ಬಳಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಭಾಗಿಯಾಗಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಧರಣಿ ನಡೆಸಲಾಗುತ್ತಿದೆ. ಹಾಗೂ ಪಿಎಫ್ಐ, ಎಸ್ಡಿಪಿಐ ಸಂಘಟನೆಗಳ ನಿಷೇಧ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ.
ಈ ಸರ್ಕಾರ ನಿರ್ವೀರ್ಯ ಸರ್ಕಾರ -ಕೊನೆಗೆ ನರೇಂದ್ರ ಮೋದಿ ಏನಾದ್ರು ಮಾಡ್ತಾರೆ ಅಂತ ಕಾಯೋದಾ?: ಸೂಲಿಬೆಲೆ ಗರಂ
ಬಿಜೆಪಿಗೆ ಮಾತಿನ ಆರಂಭದಲ್ಲಿ ಚಾಟಿ ಬೀಸಿದ ಸೂಲಿಬೆಲೆ ನಮ್ಮ ರಕ್ಷಣೆ ನಾವೇ ಮಾಡ್ಬೇಕು ಅಂದ್ರೆ ಸರ್ಕಾರ ಏನಕ್ಕೆ ಬೇಕು..? ನಮ್ಮ ಕಾರ್ಯಕರ್ತರ ಮೇಲೆ ಲಾಟಿಯಿಂದ ಹೊಡೆದಿದ್ದಾರೆ. ಈ ಸರ್ಕಾರ ನಿರ್ವೀರ್ಯ ಸರ್ಕಾರ. ಬಿಜೆಪಿ ಕಾರ್ಯಕರ್ತರ ಹತ್ಯೆ ಇಲ್ಲಿಗೆ ನಿಲ್ಲುವುದಿಲ್ಲ. ನಾವು ಒಗ್ಗಟ್ಟಾಗಿಲ್ಲ ಅಂದ್ರೆ ಇನ್ನೂ ಇದು ಮುಂದುವರೆಯುತ್ತೆ. ಮುಸ್ಲಿಮರು 15 ದಿನ ಸುಮ್ಮನಿದ್ದಾರೆ ಅಂದ್ರೆ ಕೊಲ್ಲಲ್ಲಾ ಅಂತ ಅನ್ಕೊಬೇಡಿ. 2012ರಲ್ಲಿ ಮಾಡಿದ ಕಮೆಂಟ್ ಗೆ 2019ರಲ್ಲಿ ಹುಡುಕಿ ಹತ್ಯ ಮಾಡ್ತಾರೆ. ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕ್ತಾರೆ ಅಂತ ಹತ್ಯೆ ಮಾಡ್ತಾರೆ. ಸರ್ ತನ್ಸೆ ಜುದಾ ಅನ್ನೋರನ್ನ ನಡು ರಸ್ತೆಯಲ್ಲೇ ಶೂಟ್ ಮಾಡಬೇಕು. ಸರ್ ತಮ್ಮ ಜುದಾ ಅಂದ್ರೆ ತಲೆ ಕಡಿತೀನಿ ಅಂತರ್ಥ. ಇವರಿಂದ ಏನೂ ಆಗಲ್ಲ, ಕೊನೆಗೆ ನರೇಂದ್ರ ಮೋದಿ ಏನಾದ್ರು ಮಾಡ್ತಾರೆ ಅಂತ ಕಾಯೋದಾ..? ಹರ್ಷನ ಹಂತಕರನ್ನು ಎನ್ ಕೌಂಟರ್ ಮಾಡಿದ್ರೆ ಪ್ರವೀಣ್ ಹತ್ಯೆ ಆಗ್ತಿರ್ಲಿಲ್ಲ. ಮುಸ್ಲಿಮರು ಮೊದಲು ಬಾಂಬ್ ಕಟ್ಕೊಂಡು ಬಂದು ಸಾಯಿಸ್ತಿದ್ರು. ಈಗ ಕೈಯಲ್ಲೊಂದು ಕತ್ತಿ ಇಟ್ಕೊಂದು ದಾರಿಯಲ್ಲಿ ಹಿಂದೂಗಳನ್ನು ಕೊಲ್ತಾರೆ. ಜುಬೇರ್ ಎನ್ನುವ ಅಯೋಗ್ಯನಿಗೆ ಜೈಲಿನಲ್ಲಿ ರಾಜಾತಿಥ್ಯ ಕೊಡ್ತಾರೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಹೇಳಿಕೆ ಪೂರ್ಣ ಪಾಠ ಹೀಗಿದೆ:
ಈ ಕೊಲೆ ಯಾರೇ ಮಾಡರಲಿ ಅವರಿಗೆ ಶಿಕ್ಷೆಯಾಗಬೇಕು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಯಾರೇ ಮಾಡಿರಲಿ ಅವರಿಗೆ ತಕ್ಕ ಶಿಕ್ಷೆಯಾಗಲೇ ಬೇಕು. ಮಸೂದ್ ಕೊಲೆಗೂ ಇದಕ್ಕೂ ಸಂಬಂಧವಿದೆಯಾ ಎಂದು ತನಿಖೆಯಾಗಬೇಕು. ಕೇರಳದ ನೋಂದಣಿ ಇರುವ ಬೈಕ್ ನಲ್ಲಿ ಬಂದು ಹತ್ಯೆ ಮಾಡಿದ್ದಾರೆ ಎಂದು ಗೊತ್ತಾಗಿದೆ. ಅವರನ್ನು ಬಂಧನಗೊಳಿಸಿ ರಾಜಾತಿಥ್ಯ ಕೊಟ್ಟು ಬೆಳೆಸಬೇಡಿ. ಹಂತಕರಿಗೆ ಸರ್ಕಾರ ಅತ್ಯಂತ ಕಠಿಣ ಶಿಕ್ಷೆ ಕೊಡಬೇಕು. ನಮ್ಮ ರಾಜ್ಯದಲ್ಲಿ ಯುಪಿ ಪರಿಸ್ಥಿತಿ ಇರ್ಲಿಲ್ಲ ಎಂದುಕೊಂಡಿದ್ದೆ. ಆದರೆ ಈ ಹತ್ಯೆಗಳು ನೋಡ್ತಿರ್ಬೇಕಾದರೆ ಪರಿಸ್ಥಿತಿ ಕೈ ಮೀರಿದೆ ಎಂದೆನಿಸುತ್ತಿದೆ. ಹೀಗಾಗಿ ಯುಪಿ ಮಾದರಿಯ ಶಿಕ್ಷೆಗಳು ಹಂತಕರಿಗೆ ಆಗಬೇಕು. ಅವರ ಮೂರು ತಲೆಮಾರಿಗೆ ಆಗುವಷ್ಟು ಶಿಕ್ಷೆ ಅವರಿಗೆ ಸಿಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು (Praveen Nettaru) ಬರ್ಬರ ಹತ್ಯೆಯಿಂದಾಗಿ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದರ ಮಧ್ಯೆ… ಸರ್ಕಾರ ನಮ್ಮದೆ ಇದೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರದಲ್ಲಿ ಹತ್ಯೆಯಾಗಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದು ಸಂದೀಪ್ ಜೊತೆ ಫೋನ್ನಲ್ಲಿ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ವೈರಲ್ ಆಗಿದೆ.
ಪ್ರವೀಣ್ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದು, ಜಿಲ್ಲೆಯ ಯುವ ಮೋರ್ಚಾದ ನಿರ್ಧಾರಕ್ಕೆ ತೇಜಸ್ವಿ ಸೂರ್ಯ ತಬ್ಬಿಬ್ಬಾಗಿದ್ದಾರೆ. ರಾಜೀನಾಮೆ ವಿಚಾರ ಕಿವಿಗೆ ಬೀಳುತ್ತಿದ್ದಂತೆ ತೇಜಸ್ವಿ ಸೂರ್ಯ ಸಂದೀಪ್ಗೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಹತ್ಯೆಯಾಗಿದ್ರೆ ಕಲ್ಲು ಹೊಡೆಯಬಹುದಿತ್ತು ಎಂದಿರುವ ತೇಜಸ್ವಿ ಸೂರ್ಯ ಹೇಳಿಕೆ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.
Published On - 6:20 pm, Thu, 28 July 22