ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಿತಿ ಶಾಂತಿಯುತವಾಗಿದ್ದರೂ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ: ಅಲೋಕ್ ಕುಮಾರ, ಎಡಿಜಿಪಿ
ಮುಖ್ಯಮಂತ್ರಿಗಳು ಶುಕ್ರವಾರ ಪ್ರವೀಣ್ ಕುಟುಂಬದ ಸದಸ್ಯರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಿದ ಅಲೋಕ್ ಕುಮಾರ ಜಿಲ್ಲೆಯ ಕೆಲಭಾಗಗಳಲ್ಲಿ ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಬೇರೆ ನಾಯಕರು ಈಗ ಬೆಳ್ಳಾರೆಗೆ ಬರೋದು ಸಮಂಜಸವಲ್ಲ ಎಂದು ಹೇಳಿದರು.
ಮಂಗಳೂರು: ಬುಧವಾರದಿಂದ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ (Alok Kumar, ADGP) ಅವರು ಗುರುವಾರ ಬೆಳಗ್ಗೆ ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿ, ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ನಡೆದ ಎರಡು ದಿನಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (South Canara) ಪರಿಸ್ಥಿತಿ ಶಾಂತಿಯುತವಾಗಿದೆಯಾದರೂ, ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿಗಳು ಶುಕ್ರವಾರ ಪ್ರವೀಣ್ ಕುಟುಂಬದ ಸದಸ್ಯರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಿದ ಅಲೋಕ್ ಕುಮಾರ ಜಿಲ್ಲೆಯ ಕೆಲಭಾಗಗಳಲ್ಲಿ ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಬೇರೆ ನಾಯಕರು ಈಗ ಬೆಳ್ಳಾರೆಗೆ ಬರೋದು ಸಮಂಜಸವಲ್ಲ ಎಂದು ಹೇಳಿದರು.
Latest Videos