ನಿಮ್ಮ ಮನೆಮಗನಿಗೆ ಹೀಗಾಗುತ್ತಿದ್ದರೆ ಎರಡು ದಿನ ಬಿಟ್ಟು ಮನೆಗೆ ಬರ್ತಿದ್ರಾ? ಶಾಸಕ ಮಠಂದೂರ್ಗೆ ಮೃತ ಪ್ರವೀಣ್ ಪತ್ನಿ ತರಾಟೆ
ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟೂರು ಹತ್ಯೆ ಪ್ರಕರಣ ಸಂಬಂಧ ಪ್ರವೀಣ್ ಮನೆಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಸಾಂತ್ವಾನ ಹೇಳಿದರು. ಈ ವೇಳೆ ಶಾಸಕರನ್ನು ಮೃತ ಪ್ರವೀಣ್ ಪತ್ನಿ ನೂತನ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ: ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟೂರು ಹತ್ಯೆ ಪ್ರಕರಣ ಸಂಬಂಧ ಪ್ರವೀಣ್ ಮನೆಗೆ ಪುತ್ತೂರು ಶಾಸಕ ಸಂಜೀವ್ ಮಟಂದೂರು ಭೇಟಿ ನೀಡಿ ಸಾಂತ್ವಾನ ಹೇಳಿದರು. ಈ ವೇಳೆ ಶಾಸಕರ ಎದುರೇ ಪ್ರವೀಣ್ ನೆನೆದು ತಾಯಿ, ಪತ್ನಿ ಕಣ್ಣೀರು ಹಾಕಿದ್ದಾರೆ. ಅಲ್ಲದೆ ಕೃತ್ಯ ನಡೆದ ಎರಡು ದಿನಗಳಾದ ನಂತರ ಮನೆಗೆ ಆಗಮಿಸಿದ ಶಾಸಕ ಮಠಂದೂರ್ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಪ್ರವೀಣ್ ಪತ್ನಿ ನೂತನ, ನಿಮ್ಮ ಮಗನಿಗೆ ಹೀಗಾದರೆ ಎರಡು ದಿನ ಬಿಟ್ಟು ಬರುತ್ತಿದ್ದೀರಾ? ನಿಮ್ಮ ಮಕ್ಕಳಿಗೆ ಹೀಗಾದರೆ ಏನು ಮಾಡುತ್ತಿದ್ದಿರೀ? ಇಂದು ಇವರು, ನಾಳೆ ಇನ್ಯಾರೋ? ನಿಮಗೆ ಸಾಧ್ಯವಿದೆಯಾ ನ್ಯಾಯ ದೊರಕಿಸಿಕೊಡಲು? ಕೊಂದವರು ಅದೆಲ್ಲೋ ಇದ್ದಾರೆ ನಿಮಗೆ ಸಾಧ್ಯವಿದೆಯೇ ಅವರನ್ನು ಹಿಡಿಯಲು? ಘಟನೆ ನಡೆದು ಎರಡು ದಿನ ಆಯ್ತು ನಿಮ್ಮ ಕೈಯಿಂದ ಏನಾದರು ಮಾಡಲು ಸಾಧ್ಯವಾಗಿದೆಯೇ ಎಂದು ನೇರವಾಗಿ ಪ್ರಶ್ನೆಗಳನ್ನ ಹಾಕಿದ್ದಾರೆ.