ಇಂಥ ಸಂಚುಗಳನ್ನೆಲ್ಲ ಸಂಸದ ಸೂರ್ಯ ವ್ಯವಸ್ಥಿತವಾಗಿ ರೂಪಿಸುತ್ತಾರೆ: ಡಿಕೆ ಶಿವಕುಮಾರ

ಇಂಥ ಸಂಚುಗಳನ್ನೆಲ್ಲ ಸಂಸದ ಸೂರ್ಯ ವ್ಯವಸ್ಥಿತವಾಗಿ ರೂಪಿಸುತ್ತಾರೆ: ಡಿಕೆ ಶಿವಕುಮಾರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 28, 2022 | 1:55 PM

ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಸಂಸದ ಸೂರ್ಯ ಒಂದು ವ್ಯವಸ್ಥಿತವಾದ ಸಂಚು ರೂಪಿಸಿದ್ದಾರೆ. ಅವರ ಕಾರ್ಯಕರ್ತರು ಏನು ಮಾಡಬೇಕೆನ್ನುವುದನ್ನು ಅವರು ನೇರವಾಗಿ ಹೇಳಿದ್ದಾರೆ ಎಂದರು.

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದು ಸಂಸದ ತೇಜಸ್ವೀ ಸೂರ್ಯ (Tejasvi Surya) ಬಿಜೆಪಿ ಕಾರ್ಯಕರ್ತರಿಗೆ ಹೇಳಿರುವುದು ವಿವಾದ ಸೃಷ್ಟಿಸಿದೆ. ವಿಷಯದ ಬಗ್ಗೆ ಬೆಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು, ಸಂಸದ ಸೂರ್ಯ ಒಂದು ವ್ಯವಸ್ಥಿತವಾದ ಸಂಚು ರೂಪಿಸಿದ್ದಾರೆ. ಅವರ ಕಾರ್ಯಕರ್ತರು ಏನು ಮಾಡಬೇಕೆನ್ನುವುದನ್ನು ಅವರು ನೇರವಾಗಿ ಹೇಳಿದ್ದಾರೆ ಎಂದರು.