ದೂರದ ಊರುಗಳಿಂದ ನನ್ನ ಹುಟ್ಟುಹಬ್ಬಕ್ಕೆಂದೇ ಬೆಂಗಳೂರಿಗೆ ಆಗಮಿಸಬೇಡಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ

ಈಗಾಗಲೇ ಕೊರೊನಾದಿಂದ ಸಾಕಷ್ಟು ಆರ್ಥಿಕ ನಷ್ಟ ಅನುಭವಿಸಿದ್ದೀರಿ. ಹೀಗಾಗಿ, ಸುಮ್ಮನೇ ಹಣ ಖರ್ಚು ಮಾಡಿಕೊಂಡು ದೂರದ ಊರುಗಳಿಂದ ಹುಟ್ಟುಹಬ್ಬದ ಆಚರಣೆಗೆ ಬೆಂಗಳೂರಿಗೆ ಬರಬೇಡಿ ಎಂದು ಚಾಲೆಂಜಿಗ್ ಸ್ಟಾರ್ ಮನವಿ ಮಾಡಿದ್ದಾರೆ.

ದೂರದ ಊರುಗಳಿಂದ ನನ್ನ ಹುಟ್ಟುಹಬ್ಬಕ್ಕೆಂದೇ ಬೆಂಗಳೂರಿಗೆ ಆಗಮಿಸಬೇಡಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ
ಚಾಲೆಂಜಿಂಗ್ ಸ್ಟಾರ್​ ದರ್ಶನ್
Edited By:

Updated on: Jan 10, 2021 | 1:21 PM

ಫೆಬ್ರವರಿ 15 ರಿಂದ 18 ರವರೆಗೂ ನಾನು ಊರಲ್ಲಿರುವುದಿಲ್ಲ. ಹೀಗಾಗಿ, ಫೆಬ್ರವರಿ 16ರಂದು ನನ್ನ ಹುಟ್ಟುಹಬ್ಬವನ್ನು ದೂರದ ಊರುಗಳಿಂದ ಬೆಂಗಳೂರಿಗೆ ಆಗಮಿಸಿ ಆಚರಿಸುವುದು ಬೇಡ ಎಂದು ದರ್ಶನ್ ತೂಗುದೀಪ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಈಗಾಗಲೇ ಕೊರೊನಾದಿಂದ ಸಾಕಷ್ಟು ಆರ್ಥಿಕ ನಷ್ಟ ಅನುಭವಿಸಿದ್ದೀರಿ. ಹೀಗಾಗಿ, ಸುಮ್ಮನೇ ಹಣ ಖರ್ಚು ಮಾಡಿಕೊಂಡು ದೂರದ ಊರುಗಳಿಂದ ಹುಟ್ಟುಹಬ್ಬದ ಆಚರಣೆಗೆ ಬೆಂಗಳೂರಿಗೆ ಬರಬೇಡಿ ಎಂದಿದ್ದಾರೆ  ದರ್ಶನ್.

ರಾಬರ್ಟ್ ಬಿಡುಗಡೆ ದಿನಾಂಕ ಘೋಷಣೆ
ರಾಬರ್ಟ್ ಸಿನಿಮಾವನ್ನು ಮಾರ್ಚ್ 11ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. 1 ವಾರ ಹೆಚ್ಚು ಕಡಿಮೆ ಆಗಬಹುದು ಎಂದು ಅವರು ತಿಳಿಸಿದರು.ಓಟಿಟಿ ಕುರಿತು ಅಭಿಮಾನಿಯೋರ್ವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಓಟಿಟಿ ಹಿಂದೆ 5ಜಿ ಯ ಕೈವಾಡವಿದೆ ಎಂದು ವೈಯಕ್ತಿಕವಾಗಿ ಅನಿಸುತ್ತಿದೆ. 5ಜಿಯಂತಹ ಒಳ್ಳೆಯ ಅಂತರ್ಜಾಲ ವ್ಯವಸ್ಥೆಯಿದ್ದರೆ ಮಾತ್ರ ಮೊಬೈಲ್​ಗಳಲ್ಲಿ ಸಿನಿಮಾ ನೋಡಲು ಸಾಧ್ಯ. ಹೀಗಾಗಿ ವೈಯಕ್ತಿಕವಾಗಿ ಓಟಿಟಿ ಹಿಂದೆ ಟೆಲಿಕಾಂ ಕಂಪನಿಗಳ ಕೈವಾಡವಿದೆ ಎಂದು ನನಗೆ ಅನಿಸುತ್ತದೆ ಎಂದು ಅವರು ಹೇಳಿದರು.

ರಾಬರ್ಟ್ ಸಿನಿಮಾ ಪೋಸ್ಟರ್

ಕನ್ನಡ ಚಿತ್ರರಂಗ ಅಂದ್ರೆ ಆ ನಾಲ್ವರು -ಚಂದನವನದ ಆಧಾರ ಸ್ತಂಭಗಳನ್ನು ನೆನೆದ ದರ್ಶನ್​

Published On - 11:39 am, Sun, 10 January 21