AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾಮಿ ವಿವೇಕಾನಂದ ಜಯಂತಿ ಹಿನ್ನೆಲೆ: ರಾಜ್ಯ ಬಿಜೆಪಿ ಯುವ ಮೋರ್ಚಾದಿಂದ ಇಂದು ವಾಕ​ಥಾನ್

ಸ್ವಾಮಿ ವಿವೇಕಾನಂದರ 157ನೇ ಜಯಂತಿ ಹಿನ್ನೆಲೆಯಲ್ಲಿ, ರಾಜ್ಯ ಬಿಜೆಪಿ ಯುವ ಮೋರ್ಚಾದಿಂದ ಇಂದು ವಾಕ್​ಥಾನ್‌ ಆಯೋಜಿಸಲಾಗಿದೆ. ಮೈಸೂರು, ವಿಜಯಪುರ, ಕೋಲಾರದಲ್ಲಿ ವಾಕ್​ಥಾನ್ ನಡೆಸಲಾಗುತ್ತಿದೆ.

ಸ್ವಾಮಿ ವಿವೇಕಾನಂದ ಜಯಂತಿ ಹಿನ್ನೆಲೆ: ರಾಜ್ಯ ಬಿಜೆಪಿ ಯುವ ಮೋರ್ಚಾದಿಂದ ಇಂದು ವಾಕ​ಥಾನ್
ರಾಜ್ಯದ ವಿವಿಧೆಡೆ ನಡೆಯಿತು ವಾಕ್​ಥಾನ್
TV9 Web
| Edited By: |

Updated on:Apr 06, 2022 | 10:55 PM

Share

ಬೆಂಗಳೂರು: ಸ್ವಾಮಿ ವಿವೇಕಾನಂದರ 157ನೇ ಜಯಂತಿ ಹಿನ್ನೆಲೆಯಲ್ಲಿ, ರಾಜ್ಯ ಬಿಜೆಪಿ ಯುವ ಮೋರ್ಚಾದಿಂದ ಇಂದು ವಾಕ್​ಥಾನ್‌ ಆಯೋಜಿಸಲಾಗಿದೆ. ಮೈಸೂರು, ವಿಜಯಪುರ, ಕೋಲಾರದಲ್ಲಿ ವಾಕ್​ಥಾನ್ ನಡೆಸಲಾಗುತ್ತಿದೆ. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ, ನನ್ನ ದೇಶ-ನನ್ನ ಹೆಮ್ಮೆ ಮುಂತಾದ ಫಲಕಗಳನ್ನು ಹಿಡಿದು ಜನರು ವಾಕ್​ಥಾನ್​ನಲ್ಲಿ ಭಾಗಿಯಾಗಿದ್ದಾರೆ.

ರಾಮಕೃಷ್ಣ ಪರಮಹಂಸರ ಹಿಂಬಾಲಕರಾಗಿದ್ದ ಸ್ವಾಮಿ ವಿವೇಕಾನಂದರು 1863, ಜನವರಿ 12ರಂದು ಜನಿಸಿದರು. ಈ ಬಾರಿ ಅವರ 157ನೇ ಜಯಂತಿಯನ್ನು ಆಚರಿಸಲಾಗುತ್ತಿದೆ. ಭಾರತದ ಯುವಸ್ಪೂರ್ತಿ ಎಂದೇ ಬಿಂಬಿತವಾಗಿರುವ ವಿವೇಕಾನಂದರ ಜನ್ಮದಿದ ಪ್ರಯುಕ್ತ, ಬಿಜೆಪಿ ಯುವಮೋರ್ಚಾ ವಾಕ​​ಥಾನ್ ಆಯೋಜಿಸಿದೆ.

ವಿಜಯಪುರ ಜಿಲ್ಲಾ ಬಿಜೆಪಿ ಘಟಕದಿಂದ ಕಾಲ್ನಡಿಗೆ ಜಾಥಾ ನಡೆಸಲಾಗುತ್ತಿದೆ. ನಗರದ ಶಿವಾಜಿ ವೃತ್ತದಿಂದ ಶ್ರೀ ಸಿದ್ದೇಶ್ವರ ದೇವಸ್ಥಾನದವರೆಗೂ‌ ಸಾಗಿದ ಕಾಲ್ನಡಿಗೆ ಜಾಥಾದಲ್ಲಿ, ಬಿಜೆಪಿ‌ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ್ ಕೂಚಬಾಳ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಸೇರಿದಂತೆ ಇತರರು ಭಾಗಿಯಾಗಿದ್ದಾರೆ.

ಸಂಸದ ಎಸ್. ಮುನಿಸ್ವಾಮಿಯವರಿಂದ ಚಾಲನೆ‌ ಕೋಲಾರದಲ್ಲೂ ವಿವೇಕಾನಂದರ ಜನ್ಮದಿನಾಚರಣೆ‌ ಹಿನ್ನಲೆಯಲ್ಲಿ ವಾಕ​ಥಾನ್ ಆಯೋಜಿಸಲಾಗಿದೆ. ವಾಕ್​ಥಾನ್, ನಗರದ‌ ಜೂನಿಯರ್ ಕಾಲೇಜು ಮೈದಾನದಿಂದ‌ ಆರಂಭವಾಗಿದೆ. ಸಂಸದ ಎಸ್. ಮುನಿಸ್ವಾಮಿ‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.  ವಾಕ್​ಥಾನ್ ನಗರದ ಪ್ರಮುಖ‌ ಬೀದಿಗಳಲ್ಲಿ‌ ಸಂಚಾರ ಮಾಡಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವೇಣುಗೋಪಾಲ, ಕೆಯುಡಿಎ ಅಧ್ಯಕ್ಷ ಚಲಪತಿ ಮತ್ತಿತರರು ಭಾಗಿಯಾಗಿದ್ದಾರೆ.

ಬಾಲೆಯೊಬ್ಬಳು ವಿವೇಕಾನಂದರ ವೇಷದಲ್ಲಿ

ಮೈಸೂರಿನಲ್ಲಿ ವಾಕ​ಥಾನ್​ಗೆ ಚಾಲನೆ

ವಾಕ​ಥಾನ್​ನಲ್ಲಿ ಭಾಗವಹಿಸಿದ ಜನರು

ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ.. ‘ವಿವೇಕಾನಂದರು ತೋರಿದ ದಾರಿಯಲ್ಲಿ ನಾವೆಲ್ಲಾ ನಡೆಯುವಂತಾಗಲಿ’

Published On - 11:06 am, Sun, 10 January 21