AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ: ಮಡಹಳ್ಳಿ ಬಿಳಿಕಲ್ಲು ಗುಡ್ಡ ಕುಸಿತ ಪ್ರಕರಣ; ಒಂದು ವರ್ಷದ ಬಳಿಕ ಆರೋಪಿಗಳ ಬಂಧನ

ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿಯ ಬಿಳಿಕಲ್ಲು ಗುಡ್ಡ ಕುಸಿತ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳನ್ನಇದೀಗ ಒಂದು ವರ್ಷದ ಬಳಿಕ ಬಂಧಿಸಲಾಗಿದೆ.

ಚಾಮರಾಜನಗರ: ಮಡಹಳ್ಳಿ ಬಿಳಿಕಲ್ಲು ಗುಡ್ಡ ಕುಸಿತ ಪ್ರಕರಣ; ಒಂದು ವರ್ಷದ ಬಳಿಕ ಆರೋಪಿಗಳ ಬಂಧನ
ಬಿಳಿಕಲ್ಲು ಗುಡ್ಡ ಕುಸಿತ ಪ್ರಕರಣದ ಆರೋಪಿಗಳ ಬಂಧನ
ಕಿರಣ್ ಹನುಮಂತ್​ ಮಾದಾರ್
|

Updated on:Mar 29, 2023 | 12:25 PM

Share

ಚಾಮರಾಜನಗರ: ಜಿಲ್ಲೆಯ ಮಡಹಳ್ಳಿಯ ಬಿಳಿಕಲ್ಲು ಗುಡ್ಡಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷದ ಬಳಿಕ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಗಣಿಗಾರಿಕೆ  ಉಪಗುತ್ತಿಗೆ ಪಡೆದಿದ್ದ ಕೇರಳ ಮೂಲದ ಹಕೀಂ ಹಾಗೂ ಆತನ ಸಹೋದರ ಮಹಮ್ಮದ್ ಇಲಾಲ್ ಬಂಧಿತ ಆರೋಪಿಗಳು. ಮಾರ್ಚ್​ 4, 2022 ರಂದು ಬಿಳಿಕಲ್ಲು ಗುಡ್ಡ ಕುಸಿತದಿಂದ ಮೂವರು ಉತ್ತರ ಪ್ರದೇಶದ ಗೋರಖ್​ ಪುರದ ಕಾರ್ಮಿಕರಾದ ಹಜೀಂ ಉಲ್ಲ, ಮಿರಾಜ್​ ಹಾಗೂ ಸರ್ಫ್​ರಾಜ್​ ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷದ ಬಳಿಕ ಪ್ರಮುಖ ಇಬ್ಬರು ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ಇನ್ನು ಗ್ರಾಮದ ಸರ್ವೇ ನಂ 192 ರಲ್ಲಿ 10 ಮಂದಿಗೆ ಗಣಿಗಾರಿಕೆಗೆ ಗುತ್ತಿಗೆ ನೀಡಲಾಗಿದೆ. ಗುಡ್ಡ ಕುಸಿತವಾದ ಗಣಿಯನ್ನ ಬೊಮ್ಮಲಾಪುರದ ಮಹೇಂದ್ರ ಎಂಬುವವರು ಗುತ್ತಿಗೆ ಪಡೆದಿದ್ದರು. ಬಳಿಕ ಅವರು ಕೇರಳದ ಹಕೀಂ ಹಾಗೂ ಆತನ ಸಹೋದರ ಮಹಮ್ಮದ್ ಇಲಾಲ್​ಗೆ ಉಪಗುತ್ತಿಗೆ ನೀಡಿದ್ದು, ಗಣಿಯು ಅರ್ಧಚಂದ್ರಾಕೃತಿಯಲ್ಲಿದ್ದು, 100 ಅಡಿಗೂ ಹೆಚ್ಚು ಆಳವಿತ್ತು, ಕೆಳಭಾಗದಲ್ಲಿ ಗಣಿಗಾರಿಕೆ ನಡೆಸಿ ಟೊಳ್ಳಾಗಿದ್ದರಿಂದ ಮೇಲ್ಭಾಗದಲ್ಲಿ ಭಾರ ಹೆಚ್ಚಾಗಿ ಗುಡ್ಡ ಕುಸಿದಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಬಳಿಕ ಈ ಕೃತ್ಯಕ್ಕೆ ಕಾರಣರಾದ ಆರೋಪಿಗಳು ಘಟನೆ ನಡೆದ ಒಂದು ವರ್ಷದಿಂದ ಕೇರಳದ ಗುರುವಾಯೂರಿನಲ್ಲಿ ತಲೆ ಮರೆಸಿಕೊಂಡಿದ್ದರು. ಇದೀಗ ಗುಂಡ್ಲುಪೇಟೆ ಪೊಲೀಸರ ಬಲೆಗೆ ಬಿದ್ದಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:21 pm, Wed, 29 March 23