ಚಾಮರಾಜನಗರ: ಬಂಡೀಪುರ ಹುಲಿ ಯೋಜನೆ ನಿರ್ದೇಶಕನ ಮೇಲೆ ಭ್ರಷ್ಟಾಚಾರ ಆರೋಪ; ತನಿಖೆಗೆ ಆಗ್ರಹಿಸಿದ ರೈತ ಸಂಘ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 04, 2023 | 10:34 AM

ಜಿಲ್ಲೆಯ ಬಂಡೀಪುರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ಟೆಂಡರ್ ಕರೆಯದೆ ಗೋಲ್ಮಾಲ್ ಮಾಡಿದ್ದಾರೆ. ಅರಣ್ಯಾಧಿಕಾರಿಗಳನ್ನು ಅಮಾನತ್ತಿನಲ್ಲಿಟ್ಟು ಉನ್ನತ ಮಟ್ಟದ ತನಿಖೆಗೆ ರೈತ ಸಂಘ ಆಗ್ರಹ ಮಾಡಿದೆ.

ಚಾಮರಾಜನಗರ: ಬಂಡೀಪುರ ಹುಲಿ ಯೋಜನೆ ನಿರ್ದೇಶಕನ ಮೇಲೆ ಭ್ರಷ್ಟಾಚಾರ ಆರೋಪ; ತನಿಖೆಗೆ ಆಗ್ರಹಿಸಿದ ರೈತ ಸಂಘ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗೋಲ್ಮಾಲ್
Follow us on

ಚಾಮರಾಜನಗರ: ಜಿಲ್ಲೆಯ ಬಂಡೀಪುರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೌದು ಬಂಡೀಪುರದಲ್ಲಿ ಟೆಂಡರ್ ಕರೆಯದೆ ಗೋಲ್ಮಾಲ್ ಮಾಡಲಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ಮೇಲೆ ಆರೋಪವಿದೆ. ಸಫಾರಿ ಬಸ್ ವಿನ್ಯಾಸಕ್ಕೆ ಟೆಂಡರ್ ಕರೆಯದೆ 21 ಲಕ್ಷ ರೂಪಾಯಿ ಚೆಕ್ ಕೊಟ್ಟಿದ್ದಾಗಿ ಹಾಗೂ ಟೆಂಡರ್ ಕರೆಯದೆ 60 ಲಕ್ಷ ರೂ ವೆಚ್ಚದಲ್ಲಿ ಅತಿಥಿ ಗೃಹ ಹಾಗೂ ಕಚೇರಿ ನವೀಕರಣ ಮಾಡಿದ್ದಾಗಿ ಆರೋಪ ಮಾಡಲಾಗಿದೆ.

5 ಲಕ್ಷ ರೂ ಮೇಲ್ಪಟ್ಟ ಕಾಮಗಾರಿಗೆ ಟೆಂಡರ್ ಕರೆಯಬೇಕು ಎಂಬುದು ಕರ್ನಾಟಕ ಪಾರದರ್ಶಕ ಕಾಯ್ದೆ ನಿಯಮ. ಆದರೆ 2 ಸಫಾರಿ ಬಸ್‌ಗಳ ಬಾಡಿ ವಿನ್ಯಾಸಕ್ಕೆ ಯಾವುದೇ ಟೆಂಡರ್ ಕರೆಯದೆ 21,20,400 ರೂಪಾಯಿ ಚೆಕ್ ನೀಡಿ, ನಂತರ ನಾಮಕಾವಸ್ತೆಗೆ ಟೆಂಡರ್ ಪ್ರಕ್ರಿಯೆ ಕರೆಯಲಾಗಿದೆಯಂತೆ. ಲಂಟಾನ ತೆರವು, ಹುಲುಗಾವಲು ನಿರ್ಮಾಣ, ರಸ್ತೆ ನಿರ್ವಹಣೆ, ಮೀನುಮರಿ ಸಾಕಾಣಿಕೆ ತರಬೇತಿ, ಪೀಠೋಪಕರಣ ಖರೀದಿ ಟೋಪಿ, ಜರ್ಕಿನ್, ಶೂ, ಡಸ್ಟ್ ಬಿನ್ ಖರೀದಿಯಲ್ಲೂ ಭಾರೀ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಕೆಲವೆಡೆ ಕಾಮಗಾರಿ ನಡೆಸದೆ ಹಣ ಡ್ರಾ ಮಾಡಿದ್ದು ಜೊತೆಗೆ ಎಸ್‌ಬಿ‌ಐ ನೀಡಿದ ಸಿಎಸ್ಆರ್ ನಿಧಿಯಲ್ಲಿ ಸರಿಯಾಗಿ ಗಿಡ ನೆಡದೆ 18 ಲಕ್ಷ ಹಣವನ್ನ ಗುಳುಂ ಮಾಡಲಾಗಿದೆಯಂತೆ ಅದಕ್ಕೋಸ್ಕರ ಅರಣ್ಯಾಧಿಕಾರಿಗಳನ್ನು ಅಮಾನತ್ತಿನಲ್ಲಿಟ್ಟು ಉನ್ನತ ಮಟ್ಟದ ತನಿಖೆಗೆ ರೈತ ಸಂಘ ಆಗ್ರಹ ಮಾಡಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:01 am, Sat, 4 March 23