ದೆಹಲಿ ಗಣರಾಜ್ಯೋಸತ್ಸವಕ್ಕೆ ಚಾಮರಾಜನಗರದ ಚಾಯ್​ವಾಲಾ ಆಯ್ಕೆ: ಮೋದಿ ಅವರಿಗಿಷ್ಟವಾದ ಟೀ ಮಾಡಿಕೊಡುವೆ ಎಂದ ಸಮೀವುಲ್ಲಾ

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪಿಎಂ ಸ್ವನಿಧಿ ಯೋಜನೆಯಲ್ಲಿ ಕಿರುಸಾಲ ಪಡೆದು ಮರುಪಾವತಿ ಮಾಡಿರುವವರ ಫಲಾನುಭವಿಯನ್ನು ಪರಿಗಣಿಸಲಾಗಿದೆ. ಮೊದಲ ಹಂತದಲ್ಲಿ 10 ಸಾವಿರ ಎರಡನೇ ಹಂತದಲ್ಲಿ 20 ಸಾವಿರ ಮೂರನೇ ಹಂತದಲ್ಲಿ 50 ಸಾವಿರ ಸಾಲದ ಸೌಲಭ್ಯ ಕೊಡಲಾಗುತ್ತದೆ.

ದೆಹಲಿ ಗಣರಾಜ್ಯೋಸತ್ಸವಕ್ಕೆ ಚಾಮರಾಜನಗರದ ಚಾಯ್​ವಾಲಾ ಆಯ್ಕೆ: ಮೋದಿ ಅವರಿಗಿಷ್ಟವಾದ ಟೀ ಮಾಡಿಕೊಡುವೆ ಎಂದ ಸಮೀವುಲ್ಲಾ
ಚಾಮರಾಜನಗರ ಚಾಯ್​​ವಾಲಾ ಸಮೀವುಲ್ಲಾ
Updated By: ವಿವೇಕ ಬಿರಾದಾರ

Updated on: Oct 22, 2023 | 8:54 AM

ಚಾಮರಾಜನಗರ ಅ.22: ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ (Republic Day) ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದಲೂ ಒಬ್ಬ ಪ್ರತಿನಿಧಿ ಭಾಗಿಯಾಗುವ ಅವಕಾಶ ಕಲ್ಪಿಸಲಾಗಿದೆ. ಮುಂದಿನ ವರ್ಷ ಜನವರಿ 26 ರಂದು ದೆಹಲಿಯಲ್ಲಿ (Delhi) ನಡೆಯುವ ಗಣರಾಜ್ಯೋತ್ಸವದಲ್ಲಿ ಬೀದಿ ಬದಿ ಟೀ ಅಂಗಡಿ ವ್ಯಾಪಾರಿ ಚಾಮರಾಜನಗರದ (Chamrajnagar) ಚಾಯ್‌ವಾಲಾ (Chaiwala) ಸಮೀವುಲ್ಲಾ ಭಾಗಿಯಾಗಲಿದ್ದಾರೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪಿಎಂ ಸ್ವನಿಧಿ ಯೋಜನೆಯಲ್ಲಿ ಕಿರುಸಾಲ ಪಡೆದು ಮರುಪಾವತಿ ಮಾಡಿರುವವರ ಫಲಾನುಭವಿಯನ್ನು ಪರಿಗಣಿಸಲಾಗಿದೆ. ಮೊದಲ ಹಂತದಲ್ಲಿ 10 ಸಾವಿರ ಎರಡನೇ ಹಂತದಲ್ಲಿ 20 ಸಾವಿರ ಮೂರನೇ ಹಂತದಲ್ಲಿ 50 ಸಾವಿರ ಸಾಲದ ಸೌಲಭ್ಯ ಕೊಡಲಾಗುತ್ತದೆ. ಸಾಲ ಪಡೆದವರು ಮರುಪಾವತಿ ಮಾಡಿದರೇ ಅಷ್ಟೇ ಸಾಲ ಕೊಡುವುದು. ಆದರೆ ಸಾಲ ಪಡೆದು ಬಹುತೇಕ ಜನರು ಸಾಲ ಮರುಪಾವತಿಸುತ್ತಿಲ್ಲ.

ಇದನ್ನೂ ಓದಿ: ಇತರ ಶೋಷಿತ ಸಮುದಾಯಗಳ ಜನರಿಗೂ ನನ್ನಂಥ ಅವಕಾಶ ಸಿಗಬೇಕು: ಮಣಿಕಂಠ, ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯಿಂದ ಆಹ್ವಾನಿತ ಚಮ್ಮಾರ

ಇದೇ ಸ್ಕೀಂನಲ್ಲಿ ಸಮೀವುಲ್ಲಾ ಕಿರು ಸಾಲ ಪಡೆದಿದ್ದರು. ಸಾಲ ಸದ್ಬಳಕೆ ಮಾಡಿಕೊಂಡು ನಿಗಧಿತ ಅವಧಿಯಲ್ಲಿ ಸಾಲ ಮರುಪಾವತಿಸಿದ್ದಾರೆ. ಯೋಜನೆಯಿಂದ ಆರ್ಥಿಕವಾಗಿ ಸಬಲರಾಗಿದ್ದಾರೆ. ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ಪಡೆದು ಸದ್ಬಳಕೆ ಮಾಡಿಕೊಂಡ ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಚಾಮರಾಜನಗರದ ಚಾಯ್‌ವಾಲಾ ಸಮೀವುಲ್ಲಾ ಆಯ್ಕೆಯಾಗಿದ್ದಾರೆ. ಜಿಲ್ಲೆಯ 2500 ಬೀದಿಬದಿ ವ್ಯಾಪಾರಿಗಳ ಪೈಕಿ ಸಮೀವುಲ್ಲಾ ಅವರಿಗೆ ಅವಕಾಶ ಒದಗಿಬಂದಿದೆ.

ಅವಕಾಶ ಸಿಕ್ಕರೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರಿಗಿಷ್ಟವಾದ ಟೀ ಮಾಡಿಕೊಡುತ್ತೇನೆ ಎಂದು ಸಮೀವುಲ್ಲಾ ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:54 am, Sun, 22 October 23