ಚಾಮರಾಜನಗರ ದಸರಾಗೆ ಅ.17 ರಂದು ಚಾಲನೆ: ವಿಶೇಷ ಕಾರ್ಯಕ್ರಮಗಳು ಆಯೋಜನೆ; ಇಲ್ಲಿದೆ ಮಾಹಿತಿ

| Updated By: ವಿವೇಕ ಬಿರಾದಾರ

Updated on: Oct 14, 2023 | 3:23 PM

ಗಡಿನಾಡು ಚಾಮರಾಜನಗರದಲ್ಲೂ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅ.17 ರಂದು ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಪೂಜೆ ನಡೆಸುವ ಮೂಲಕ ಚಾಮರಾಜನಗರ ದಸಾರಾಗೆ ಚಾಲನೆ ನೀಡಲಾಗುತ್ತೆ.

ಚಾಮರಾಜನಗರ ದಸರಾಗೆ ಅ.17 ರಂದು ಚಾಲನೆ: ವಿಶೇಷ ಕಾರ್ಯಕ್ರಮಗಳು ಆಯೋಜನೆ; ಇಲ್ಲಿದೆ ಮಾಹಿತಿ
ಚಾಮರಾಜನಗರ ದಸರಾ ಕುರಿತು ಸಿದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ
Follow us on

ಚಾಮರಾಜನಗರ ಅ.14: ನಾಡಹಬ್ಬ ದಸರಾ (Dasara) ಚಾಲನೆಗೆ ಕ್ಷಣಗಣನೆ ಶುರುವಾಗಿದೆ. ನವರಾತ್ರಿ ವೈಭವ ಮತ್ತು ಕೇವಲ ಸಾಂಸ್ಕೃತಿಕ ರಾಜಧಾನಿ ಮೈಸೂರಿಗಷ್ಟೇ (Mysore) ಸೀಮಿತವಾಗದೆ. ಈ ಬಾರಿ ಚಾಮರಾಜನಗರದಲ್ಲೂ (Chamrajnagar) ವಿಶೇಷವಾಗಿ ದಸರಾವನ್ನು ಆಚರಿಸಲು ಜಿಲ್ಲಾಡಳಿತ ತಯಾರಿ ನಡೆಸುತ್ತಿದೆ. ಈ ಬಾರಿ ಚಾಮರಾಜನಗರ ದಸರಾ (Chamrajnagar Dasara) ಯಾವ ರೀತಿ ನಡೆಯುತ್ತೆ ಏನೆಲ್ಲಾ ವೈಶಿಷ್ಠತೆಯಿಂದ ಕೂಡಿರುತ್ತೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ನಾಡಹಬ್ಬ ದಸರಾ ಪದ ಕೇಳಿದರೆ ಸಾಕು ಎಲ್ಲರ ಚಿತ್ತ ಅರಮನೆ ನಗರಿ ಮೈಸೂರಿನತ್ತ ಹೋಗುತ್ತದೆ. ಆದರೆ ದಸರಾವನ್ನು ಮೈಸೂರಿನಲ್ಲಿ ಆಚರಣೆ ಮಾಡುವುದರ ಜೊತೆಗೆ ಗಡಿನಾಡು ಚಾಮರಾಜನಗರದಲ್ಲೂ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅ.17 ರಂದು ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಪೂಜೆ ನಡೆಸುವ ಮೂಲಕ ಚಾಮರಾಜನಗರ ದಸಾರಾಗೆ ಚಾಲನೆ ನೀಡಲಾಗುತ್ತೆ. ಸಿದ್ದರಾಮಯ್ಯ 2013 ರಲ್ಲಿ ಚಾಮರಾಜನಗರದಲ್ಲಿಯೂ ದಸರಾ ಹಬ್ಬವನ್ನ ಆಚರಿಸಬೇಕೆಂದು ಚಾಲನೆ ನೀಡಿದ್ದರು. ಆಗಿನಿಂದ ದಸರಾ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತದೆ.

ಚಾಮರಾಜನಗರದಲ್ಲಿ ದಸಾರ ಆಚರಣೆಗೆ 10 ವರ್ಷ ತುಂಬಿದೆ. ಇನ್ನು ಈ ಬಾರಿ ಚಾಮರಾಜನಗರದಲ್ಲಿ ನಡೆಯುವ ನಾಲ್ಕು ದಿನಗಳ ಕಾಲದ ದಸರಾ ಉತ್ಸವದಲ್ಲಿ ಏನೆಲ್ಲಾ ಕಾರ್ಯಕ್ರಮವಿರಲಿದೆ ಎಂಬ ಪಟ್ಟಿ ಇಲ್ಲಿದೆ.

ಇದನ್ನೂ ಓದಿ: Mysore Dasara 2023: ಮೈಸೂರು ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ KSRTCಯಿಂದ ವಿಶೇಷ ಪ್ಯಾಕೇಜ್​; ಇಲ್ಲಿ ಡೀಟೈಲ್ಸ್​​​

17-10-2023 ಮಂಗಳವಾರದ ಕಾರ್ಯಕ್ರಮಗಳು

  • ಬೆಳಗ್ಗೆ 10.15 ಕ್ಕೆ ದಸರಾ ಕಾರ್ಯಕ್ರಮಕ್ಕೆ ಚಾಲನೆ
  • ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕವಿಗೋಷ್ಠಿ
  • ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನ ಪ್ರದರ್ಶನ
  • ಚಿತ್ರಕಲಾ ಪ್ರದರ್ಶನ
  • ವಿವಿಧ ಕಲಾ ತಂಡಗಳ ಸ್ಥಬ್ಧ ಚಿತ್ರ ಮೆರವಣಿಗೆ

18-10-2023 ಬುಧವಾರದ ಕಾರ್ಯಕ್ರಮಗಳು

  • ಮ್ಯಾರಥಾನ್
  • ಮಹಿಳಾ ದಸರಾ ಉದ್ಘಾಟನೆ
  • ಸಾಂಸ್ಕೃತಿಕ ಕಾರ್ಯಕ್ರಮ

19-10-2023 ಗುರುವಾರ

  • ರೈತ ದಸರಾ
  • ಸಾಂಸ್ಕೃತಿ ಕಾರ್ಯಕ್ರಮ

20-10-2023 ಶುಕ್ರವಾರ

  • ಸಾಂಸ್ಕೃತಿಕ ಕಾರ್ಯಕ್ರಮ
  • ದಸರಾ ಸಮಾರೋಪ ಸಮಾರಂಭ

ಒಟ್ಟಾರೆ ಈ ಬಾರಿ ರಾಜ್ಯದಲ್ಲಿ ಬರದ ಛಾಯೆ ಆವರಿಸಿರುವ ಕಾರಣ ಅತ್ತ ಅದ್ಧೂರಿಯೂ ಅಲ್ಲ ಇತ್ತ ಸಾಧಾರಣವೂ ಅಲ್ಲದೆ ದಸರಾ ಹಬ್ಬವನ್ನ ಆಚರಿಸಲಾಗುತ್ತೆ. ಇನ್ನು ಸಂಸತ್ತಿನಲ್ಲಿ ಮಹಿಳೆಯರಿಗೆ ಕೇಂದ್ರ ಮಿಸಲಾತಿ ಘೋಶಿಸಿದೆ. ಇತ್ತ ರಾಜ್ಯ ಸರ್ಕಾರ ಶಕ್ತಿ ಯೋಜನೆ ಹಾಗೂ ಗೃಹ ಲಕ್ಷ್ಮೀ ಯೋಜನೆ ಮೂಲಕ ಹೆಣ್ಣುಮಕ್ಕಳ ಮನ ಗೆದ್ದಿದೆ. ಇನ್ನು ಚಾಮರಾಜನಗರದ ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಸಹ ಮಹಿಳೆಯರೇ ಆಗಿದ್ದು ಈ ಭಾರಿ ಮಹಿಳಾ ದಸರಾಗೆ ಹೆಚ್ಚಿನ ಪ್ರಾತಿನಿದ್ಯ ನೀಡಲಾಗಿದೆ. ಮೊದಲೇ ಜಾನಪದ ಕಲೆಗಳ ತವರೂರು ಎಂದೇ ಖ್ಯಾತವಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಈ ಭಾರಿ ಅರ್ಥಪೂರ್ಣವಾಗಿ ದಸರಾವನ್ನು ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ