Mysore Dasara 2023: ಮೈಸೂರು ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ KSRTCಯಿಂದ ವಿಶೇಷ ಪ್ಯಾಕೇಜ್; ಇಲ್ಲಿ ಡೀಟೈಲ್ಸ್
ಶ್ವವಿಖ್ಯಾತ ಮೈಸೂರು ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಶೇಷ ಟೂರ್ ಪ್ಯಾಕೇಜ್ ಕಲ್ಪಿಸಿದೆ.
ಮೈಸೂರು ಅ.14: ವಿಶ್ವವಿಖ್ಯಾತ ಮೈಸೂರು ದಸರಾ (Mysore Dasara) ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವಿಶೇಷ ಟೂರ್ ಪ್ಯಾಕೇಜ್ (Tour Package) ಕಲ್ಪಿಸಿದೆ. ಪ್ರವಾಸಿಗರಿಗೆ ಗಿರಿದರ್ಶಿನಿ, ದೇವದರ್ಶಿನಿ ಹಾಗೂ ಕೊಡಗು ಟ್ರಿಪ್ ಯೋಜನೆ ಮಾಡಿದೆ. ಅ.20 ರಿಂದ 26ರವರೆಗೆ ಈ ಪ್ಯಾಕೇಜ್ನ ಸೇವೆಯ ಬಸ್‌ಗಳು ಕಾರ್ಯಾ ನಿರ್ವಹಿಸಲಿವೆ.
ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿರುವ ಕರ್ನಾಟಕ ಸಾರಿಗೆ (ವೇಗದೂತ) ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಇ.ವಿ ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಉತ್ಸವ ಸಾರಿಗೆ ಸೇವೆಗಳ ಜೊತೆಗೆ ವಿಶೇಷ ಪ್ಯಾಕೇಜ್ ಸಾರಿಗೆ ಸೇವೆಗಳ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಂಡಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ಸಾರಿಗೆಯ ಒಂದು ದಿನದ ಪ್ಯಾಕೇಜ್ ಇದಾಗಿದೆ.
ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ (ಪ್ರಯಾಣ ದರ ವಯಸ್ಕರಿಗೆ:- 400 ರೂ. ಮತ್ತು ಮಕ್ಕಳಿಗೆ 250 ರೂ.)
ಜಲದರ್ಶಿನಿ: ಗೋಲ್ಡನ್ ಟೆಂಪಲ್, ದುಬಾರೆ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆ.ಆರ್.ಎಸ್ (ಪ್ರಯಾಣ ದರ ವಯಸ್ಕರಿಗೆ:- 450 ರೂ. ಮತ್ತು ಮಕ್ಕಳಿಗೆ 250 ರೂ.)
ದೇವದರ್ಶಿನಿ: ನಂಜನಗೂಡು, ಬ್ಲಪ್, ಮುಡುಕುತೊರೆ ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ಪ್ರಯಾಣ ದರ ವಯಸ್ಕರಿಗೆ:- 400 ರೂ. ಮತ್ತು ಮಕ್ಕಳಿಗೆ 250 ರೂ.)
ಮಡಿಕೇರಿ ಪ್ಯಾಕೇಜ್: ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ, ರಾಜಾಸೀಟ್, ಅಬ್ಬಿಫಾಲ್ಸ್ (ಐರಾಮ ಕ್ಲಬ್ ಕ್ಲಾಸ್ ಪ್ರಯಾಣ ದರ ವಯಸ್ಕರಿಗೆ 1200 ರೂ. ಮತ್ತು ಮಕ್ಕಳಿಗೆ 1000 ರೂ.)
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:49 am, Sat, 14 October 23