Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಕ್ಕಲಿಗರು ಸಂಸ್ಕೃತಿಹೀನರು ಎಂದ ಪ್ರೊ. ಕೆಎಸ್ ಭಗವಾನ್ ಮನೆಗೆ ಪೊಲೀಸ್ ಭದ್ರತೆ

ಒಕ್ಕಲಿಗರು ಸಂಸ್ಕೃತಿಹೀನರು ಎಂದ ಪ್ರೊ. ಕೆಎಸ್ ಭಗವಾನ್ ಮನೆಗೆ ಪೊಲೀಸ್ ಭದ್ರತೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 14, 2023 | 12:29 PM

ಒಂದು ಸಮುದಾಯವನ್ನು ಸಂಸ್ಕೃತಿಹೀನ ಎಂದು ಟೀಕಿಸುವ ಪ್ರೊ. ಭಗವಾನ್ ಸಂಸ್ಕಾರವಂತರೇ? ಅಂತ ಸಹಜವಾಗೇ ಒಕ್ಕಲಿಗರು ಸಿಟ್ಟಿಗೆದ್ದಿದ್ದಾರೆ. ಅವರ ಮನೆಯ ಮೇಲೆ ದಾಳಿ ನಡೆಯಬಹುದಾದ ಶಂಕೆಯಿಂದ ಮುಂಜಾಗ್ರತಾ ಕ್ರಮವಾಗಿ ನಗರದ ಕುವೆಂಪು ನಗರದಲ್ಲಿರುವ ಅವರ ಮನೆಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಅವರ ಮನೆ ಸುತ್ತ ಬ್ಯಾರಿಕೇಡ್ ಹಾಕಿರುವುದನ್ನು ವಿಡಿಯೋದಲ್ಲಿ ನೋಡಬಹುದು

ಮೈಸೂರು: ಮೈಸೂರು ನಗರದ ಪೊಲೀಸರಿಗೆ ಪ್ರೊಫೆಸರ್ ಕೆಎಸ್ ಭಗವಾನ್ (Prof KS Bhagawan) ಅವರ ಮನೆ ಕಾಯುವುದು ಹೊಸದೇನೂ ಅಲ್ಲ. ವರ್ಷದಲ್ಲಿ ಒಂದೆರಡು ಬಾರಿ ವಿವಾದಾತ್ಮಕ ಹೇಳಿಕೆ (controversial statement) ನೀಡುವ ಅಭ್ಯಾಸದ ಭಗವಾನ್ ಹಾಗೆ ಮಾಡಿದಾಗಲೆಲ್ಲ ಪೊಲೀಸ್ ಭದ್ರತೆ (police security) ಒದಗಿಸಲಾಗುತ್ತದೆ. ನಿನ್ನೆ ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಗವಾನ್ ಒಕ್ಕಲಿಗರು ಸಂಸ್ಕೃತಿಹೀನರು ಅಂತ ಹೇಳಿ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ. ಒಂದು ಸಮುದಾಯವನ್ನು ಸಂಸ್ಕೃತಿಹೀನ ಎಂದು ಟೀಕಿಸುವ ಪ್ರೊ. ಭಗವಾನ್ ಸಂಸ್ಕಾರವಂತರೇ? ಅಂತ ಸಹಜವಾಗೇ ಒಕ್ಕಲಿಗರು ಸಿಟ್ಟಿಗೆದ್ದಿದ್ದಾರೆ. ಅವರ ಮನೆಯ ಮೇಲೆ ದಾಳಿ ನಡೆಯಬಹುದಾದ ಶಂಕೆಯಿಂದ ಮುಂಜಾಗ್ರತಾ ಕ್ರಮವಾಗಿ ನಗರದ ಕುವೆಂಪು ನಗರದಲ್ಲಿರುವ ಅವರ ಮನೆಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಅವರ ಮನೆ ಸುತ್ತ ಬ್ಯಾರಿಕೇಡ್ ಹಾಕಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಗವಾನ್ ಬಂಡಾಯ ಪ್ರವೃತ್ತಿಯನ್ನು ಪ್ರದರ್ಶಿಸುತ್ತಾರೆ, ಹಾಗಂತ ಯಾವುದೇ ಒಂದು ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತಾಡುವುದು ಎಷ್ಟು ಸರಿ ಮಾರಾಯ್ರೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ