ಮೈಸೂರಿನಲ್ಲಿ ಲಾರಿ ಟಾರ್ಪಲ್ ತೆಗೆದು ಹಣ್ಣು ಕದ್ದು ಪರಾರಿ; ಕಳ್ಳರ ಕೈ ಚಳಕ ಸಿಸಿ ಕ್ಯಾಮೆರದಲ್ಲಿ ಸೆರೆ
ಮೈಸೂರಿನಲ್ಲಿ ಕೆಲ ತಿಂಗಳಿಂದ ಹಣ್ಣುಗಳ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಹೆಚ್ಚಾಗಿ ದಾಳಿಂಬೆ, ಸೇಬು ಲಾರಿಗಳನ್ನೇ ಕಳ್ಳರು ಟಾರ್ಗೆಟ್ ಮಾಡಿದ್ದಾರೆ. ಇದೀಗ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಎಪಿಎಂಸಿಯಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಹಣ್ಣಿನ ಲಾರಿ ಟಾರ್ಪಲ್ ತೆಗೆದು ಹಣ್ಣು ಕದ್ದು ಪರಾರಿಯಾದ ಘಟನೆ ನಡೆದಿದ್ದು, ಇದರ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೈಸೂರು, ಅ.14: ಜಿಲ್ಲೆಯಲ್ಲಿ ಕೆಲ ತಿಂಗಳಿಂದ ಹಣ್ಣುಗಳ ಕಳ್ಳತನ (Theft) ಪ್ರಕರಣಗಳು ನಡೆಯುತ್ತಿವೆ. ಹೆಚ್ಚಾಗಿ ದಾಳಿಂಬೆ, ಸೇಬು ಲಾರಿಗಳನ್ನೇ ಕಳ್ಳರು ಟಾರ್ಗೆಟ್ ಮಾಡಿದ್ದಾರೆ. ಇದೀಗ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಎಪಿಎಂಸಿಯಲ್ಲಿ (APMC) ಹಣ್ಣಿನ ಲಾರಿ ಟಾರ್ಪಲ್ ತೆಗೆದು ಹಣ್ಣು ಕದ್ದು ಪರಾರಿಯಾದ ಘಟನೆ ನಡೆದಿದೆ.
ಹಣ್ಣುಗಳನ್ನು ಕಳ್ಳತನ ಮಾಡುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಈಗ ದಾಳಿಂಬೆಗೆ ಬಂದಿದೆ ಚಿನ್ನದ ಬೆಲೆ; ರೈತನ ತೋಟಕ್ಕೆ ನುಗ್ಗಿ 5 ಲಕ್ಷ ರೂ ಮೌಲ್ಯದ ದಾಳಿಂಬೆ ಹಣ್ಣುಗಳ ಕಳ್ಳತನ ಮಾಡಿದರು!
ಕೆಲವು ತಿಂಗಳಿನಿಂದ ಪ್ರತಿನಿತ್ಯ ಹಣ್ಣುಗಳ ಕಳ್ಳತನವಾಗುತ್ತಿದ್ದು, ಹೆಚ್ಚಾಗಿ ದಾಳಿಂಬೆ, ಸೇಬು ಲಾರಿಗಳ ಮೇಲೆ ಕಳ್ಳರು ದಾಳಿ ಮಾಡುತ್ತಿದ್ದಾರೆ. ಈ ಬಗ್ಗೆ ಲಾರಿ ಚಾಲಕರು ಹಾಗೂ ಅಂಗಡಿ ಮಾಲೀಕರ ಅಳಲು ತೋಡಿಕೊಳ್ಳುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:51 am, Sat, 14 October 23