ಕರ್ನಾಟಕದಲ್ಲಿ ಇಂದಿಗೂ ಜೀವಂತವಾಗಿದೆ ಜಾತಿ ಭೂತ: ಮಗಳಿಗೆ ಅಂತರ್ಜಾತಿ ವಿವಾಹ ಮಾಡಿದ ತಪ್ಪಿಗೆ ಊರಿನಿಂದ ಬಹಿಷ್ಕಾರ

ಚಾಮರಾಜನಗರದಲ್ಲಿ ಅಂತರ್ಜಾತಿ ವಿವಾಹವಾದ ಕೃಷ್ಣರಾಜು ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ವಿಧಿಸಲಾಗಿದೆ. ಮಗಳಿಗೆ ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿಸಿದ್ದಕ್ಕೆ ಗ್ರಾಮಸ್ಥರಿಂದ ಈ ಬಹಿಷ್ಕಾರ ಎದುರಾಗಿದೆ. 5 ಲಕ್ಷ ರೂ. ದಂಡ ನೀಡಿದ್ರೆ ಮಾತ್ರ ಒಳಗೆ ಸೇರಿಸಲಾಗುವುದು ಎಂದು ಹೇಳಿದ್ದಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕರ್ನಾಟಕದಲ್ಲಿ ಜಾತಿವಾದ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದ್ದು, ಸಂತ್ರಸ್ತ ಕುಟುಂಬ ನ್ಯಾಯಕ್ಕಾಗಿ ಹೋರಾಡುತ್ತಿದೆ.

ಕರ್ನಾಟಕದಲ್ಲಿ ಇಂದಿಗೂ ಜೀವಂತವಾಗಿದೆ ಜಾತಿ ಭೂತ: ಮಗಳಿಗೆ ಅಂತರ್ಜಾತಿ ವಿವಾಹ ಮಾಡಿದ ತಪ್ಪಿಗೆ ಊರಿನಿಂದ  ಬಹಿಷ್ಕಾರ
ಕೃಷ್ಣರಾಜು ದಂಪತಿ
Edited By:

Updated on: Jan 08, 2026 | 10:06 AM

ಚಾಮರಾಜನಗರ, ಜ.8: ಕರ್ನಾಟಕದಲ್ಲಿ ಇಂದಿಗೂ ಜಾತಿವಾದ ಜೀವಂತವಾಗಿದೆ ಎಂದರೆ ನಂಬಲು ಅಸಾಧ್ಯ, ಆದರೆ ಕೆಲವೊಂದು ಜಿಲ್ಲೆಗಳಲ್ಲಿ ಇಂದಿಗೂ ಜಾತಿ ಪ್ರೇಮ ಅತಿಯಾಗಿದೆ. ಜಾತಿ ಇರುವುದು ಮನೆಯೊಗಿನ ಸಂಸ್ಕೃತಿಗೆ ಹೊರತು ಸಾರ್ವಜನಿವಾಗಿ ಜಾತಿ ವಿಚಾರಗಳನ್ನು ತರಬಾರದು. ಇದೀಗ ಚಾಮರಾಜನಗರದಲ್ಲಿ ನಡೆದ ಘಟನೆ ಕೂಡ ಇಂತಹದೇ ಜಾತಿ ವಿಚಾರಕ್ಕಾಗಿ ಸಾಮಾಜಿಕ ಬಹಿಷ್ಕಾರ (social boycott) ಪದ್ಧತಿ ಜೀವಂತವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮಗಳಿಗೆ ಬೇರೆ ಜಾತಿಯ ಯುವಕನ ಜೊತೆ ಮದುವೆ ಮಾಡಿದ್ದಕ್ಕೆ ಕುಟಂಬವನ್ನೇ ಬಾಹಿಷ್ಕಾರ ಮಾಡಲಾಗಿದೆ. ಬಂಡಿಗೆರೆ ಗ್ರಾಮದ ಕೃಷ್ಣರಾಜು ಎಂಬುವವರ ಕುಟುಂಬವನ್ನು ಸಾಮಾಜಿಕ ಬಹಿಷ್ಕಾರ ಮಾಡಲಾಗಿದೆ. ಸರ್ಕಾರ ಈ ಬಗ್ಗೆ ಕಾಯ್ದೆ ತಂದರೂ, ಸಾಮಾಜಿಕ ಬಹಿಷ್ಕಾರ ಪದ್ಧತಿ ನಿಂತಿಲ್ಲ ಎಂಬುದು ವಿಪರ್ಯಾಸದ ವಿಚಾರವಾಗಿದೆ.

ಇದೀಗ ಈ ಕುಟುಂಬದ ರಕ್ಷಣೆಗೆ ಸರ್ಕಾರ ಬರುತ್ತಾ? ಎಂಬ ಪ್ರಶ್ನೆ ಮೂಡಿದೆ. ಇನ್ನು ಈ ಬಹಿಷ್ಕಾರದಿಂದ ಹೊರಬರಬೇಕೆಂದರೆ 5 ಲಕ್ಷ ರೂ. ತಪ್ಪು ಕಾಣಿಕೆ ಕೊಡಬೇಕು ಎಂದು ಹೇಳಲಾಗಿದೆ. ಕೃಷ್ಣಮೂರ್ತಿ ತಮ್ಮ ಮಗಳಿಗೆ 2023ರಲ್ಲಿ ಬೇರೆ ಜಾತಿ ಯುವಕನ ಜತೆಗೆ ಮದುವೆ ಮಾಡಿದ್ದರು. 2 ವರ್ಷಗಳ ಹಿಂದೆ ಮಗಳು ಆಸೆಯಂತೆ ಆಕೆ ಪ್ರೀತಿಸಿದ ಯುವಕ ಜತೆಗೆ ಮದುವೆ ಮಾಡಿದ್ದಾರೆ. ಇದೀಗ ಮಗಳಿಗೆ ಅಂತರ್ಜಾತಿ ಯುವಕನ ಜೊತೆಗೆ ಮದುವೆ ಮಾಡಿರುವುದೇ ತಪ್ಪಾಗಿದೆ.

ಇದನ್ನೂ ಓದಿ: ವಿಷವಿಕ್ಕಿ ಹುಲಿಗಳ ಕೊಂದು ತುಂಡರಿಸುತ್ತಿದ್ದ ಕ್ರೂರಿ! ಅರಣ್ಯಾಧಿಕಾರಿಗಳ ನಿದ್ದೆಗೆಡಿಸಿದ್ದ ಮರಿ ವೀರಪ್ಪನ್ ಕೊನೆಗೂ ಬಂಧನ

ಮಗಳು ಪ್ರೀತಿಸಿ ಮದುವೆಯಾದ ಮೂರೇ ತಿಂಗಳಿಗೆ ಗಂಡನನ್ನು ಕಳೆದುಕೊಂಡಿದ್ದಾಳೆ. ಅಳಿಯ ತಿರಿಕೊಂಡ ನಂತರ ಮಗುಳು ಒಬ್ಬಂಟಿಯಾಗಿದ್ದಾಳೆ. ಈ ಕಾರಣಕ್ಕೆ ಕೃಷ್ಣಮೂರ್ತಿ ದಂಪತಿ ಪತಿಯ ಸಾವಿನ ಬಳಿಕ ಮಗಳನ್ನ ಬಂಡಿಗೆರೆ ಗ್ರಾಮಕ್ಕೆ ಕರೆಕೊಂಡು ಬಂದಿದ್ದಾರೆ. ಈ ವಿಚಾರ ತಿಳಿದು ಉಪ್ಪಾರ ಸಮಾಜದ ನಾಯಕರು ಕೆಂಡಮಂಡಲ ಆಗಿದ್ದಾರೆ. ನಿಮ್ಮನ್ನು ಮತ್ತು ನಿಮ್ಮ ಮಗಳನ್ನು ಯಾವುದೇ ಕಾರಣಕ್ಕೂ ಊರಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಊರಿನಿಂದ ಹೊರ ಹಾಕಿದ್ದಾರೆ. ಉಪ್ಪಾರ ಸಮಾಜದ ಯಜಮಾನರು ಕೃಷ್ಣಮೂರ್ತಿ ಕುಟುಂಬವನ್ನು ಊರಿನಿಂದ ಬಹಿಷ್ಕಾರ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ರೂ ಯಾವುದೇ ಪ್ರಯೋಜ ಆಗಿಲ್ಲ ಎಂದು ಕುಟುಂಬ ಹೇಳಿದೆ. ತಮ್ಮದೆ ಉಪ್ಪಾರ ಸಮುದಾಯದವರು ನಮ್ಮನ್ನು ಬಹಿಷ್ಕಾರ ಮಾಡಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ಇನ್ನು ಈ ಕುಟುಂಬಕ್ಕೆ ಪೊಲೀಸ್​​, ಕೋರ್ಟ್ ಕಚೇರಿ ಎಂದು ಹೋದ್ರೆ ಸರಿ ಇರಲ್ಲ ಎಂದು ಬೆದರಿಕೆ ಕೂಡ ಹಾಕಿದ್ದಾರೆ. ಇದೀಗ ನ್ಯಾಯಕ್ಕಾಗಿ ಕೃಷ್ಣಮೂರ್ತಿ ಕುಟುಂಬ ಹೋರಾಡುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ