
ಚಾಮರಾಜನಗರ, ಸೆಪ್ಟೆಂಬರ್ 07: ಇಂದು ರಣ ರಣ ಕಗ್ರಾಸ ಚಂದ್ರಗ್ರಹಣ (Blood Moon Eclipse). ಈ ಗ್ರಹಣ ಹಿನ್ನಲೆ ರಾಜ್ಯಾದ್ಯಂತ ಎಲ್ಲಾ ದೇವಾಲಯಗಳಿಗೆ ಬೀಗ ಬೀಳಲಿದೆ. ಆದರೆ ಮಲೆ ಮಹದೇಶ್ವರನಿಗೆ (Male Mahadeshwara) ಮಾತ್ರ ಗ್ರಹಣದ ಕರಿಛಾಯೆ ಮಾತ್ರ ತಟ್ಟಲ್ಲ. ಕೇವಲ ಈ ಚಂದ್ರಗ್ರಹಣ ಅಷ್ಟೇ ಅಲ್ಲ ಯಾವ ಗ್ರಹಣಕ್ಕೂ ಈ ದೇವಾಲಯ ಬಂದ್ ಆಗುವುದಿಲ್ಲ. ಏಕೆ ಬಂದ ಆಗುವುದಿಲ್ಲ ಎಂದು ತಿಳಿಯಲು ಮುಂದೆ ಓದಿ.
ಹುಣ್ಣಿಮೆಯ ದಿನದಂದು ಚೆಂದುಳ್ಳಿ ಚೆಲುವೆ ತರ ಮಿರಮಿರ ಮಿಂಚ ಬೇಕಿದ್ದ ಚಂದಮಾಮ ಗ್ರಹಣ ಹಿನ್ನಲೆ ಕಡುಗೆಂಪು ವರ್ಣಕ್ಕೆ ತಿರುಗಲಿದ್ದಾರೆ. ಈಗಾಗಲೇ ಜ್ಯೋತಿಷಿಗಳು ಗ್ರಹಣದ ಸೈಡ್ ಎಫೆಕ್ಟ್, ಪ್ರಕೃತಿ ವಿಕೋಪ, ಜಲ ಪ್ರಳಯದ ಭವಿಷ್ಯ ನುಡಿಯುತ್ತಿದ್ದರೆ, ರಾಜ್ಯಾದ್ಯಂತ ಪ್ರಮುಖ ದೇವಾಲಯಗಳು ಗ್ರಹಣದ ಎಫೆಕ್ಟ್ಗೆ ಬಂದ್ ಆಗಲಿದೆ. ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಮಲೆ ಮಹದೇಶ್ವರನ ಬೆಟ್ಟದಲ್ಲಿ ಮಾತ್ರ ಎಂದಿನಂತೆ ಪೂಜಾ ಕೈಂಕರ್ಯ ನಡೆಯಲಿದೆ.
ಇನ್ನು ಮಾದಪ್ಪನಿಗೆ ಮಾತ್ರ ಏಕೆ ಈ ಗ್ರಹಣ ತಟ್ಟುವುದಿಲ್ಲ ಅಂತ ನೋಡುವುದಾದರೆ, ಮಾದಪ್ಪ ಶಿವನ ಒಂದು ಅವತಾರ, ಪವಾಡ ಪುರುಷ. ಈತನಿಗೆ ಮುಟ್ಟು-ಮೈಲಿಗೆ ಅನ್ನೋದಿಲ್ಲ, ಹಾಗಾಗಿ ಯಾವುದೇ ಗ್ರಹಣದಲ್ಲೂ ಮಲೆ ಮಹದೇಶ್ವರನ ದರ್ಶನ ಭಾಗ್ಯ ತಪ್ಪುವುದಿಲ್ಲ.
ಇದನ್ನೂ ಓದಿ: Blood Moon Eclipse: ದೇವರ ದರ್ಶನಕ್ಕೂ ‘ಗ್ರಹಣ’! ನಾಳೆ ರಾಜ್ಯದ ಪ್ರಮುಖ ದೇಗುಲಗಳು ಬಂದ್
ಈ ಚಂದ್ರಗ್ರಹಣ ಅಷ್ಟೇ ಅಲ್ಲ ಬೇರೆ ಯಾವ ಗ್ರಹಣಕ್ಕೂ ಮಾದಪ್ಪನ ಬೆಟ್ಟ ಬಂದ್ ಆಗುವುದಿಲ್ಲ. ಹಾಗಾಗಿ ಎಂದಿನಂತೆ ಇಂದು ಕೂಡ ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ.
ಇದನ್ನೂ ಓದಿ: ರಾಹುಗ್ರಸ್ತ ರಕ್ತ ಚಂದ್ರಗ್ರಹಣ ವಿಶೇಷತೆ ಏನು? ಬರಿಗಣ್ಣಿನಿಂದಲೇ ವೀಕ್ಷಿಸಬಹುದೇ?
ಅದೇನೆ ಹೇಳಿ ಸಾತ್ವಿಕರು ಈ ಗ್ರಹಣದ ಶುಭ-ಅಶುಭ, ಪೂಜೆ-ಪುನಸ್ಕಾರ ಅಂತ ತಲೆ ಕೆಡಿಸಿಕೊಂಡರೆ ಇನ್ನು ಕೆಲವರು ವಿಜ್ಞಾನದ ವೈಪರಿತ್ಯ ವಿಸ್ಮಯ ನೋಡಲು ಕಾದು ಕುಳಿತಿರುವುದು ಮಾತ್ರ ಸುಳ್ಳಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.