ಈ ಹಿಂದೆ 12 ಬಾರಿ ಬಂದಿದ್ದೆ, ಈಗ ಇದು 2ನೇ ಸಲ: ಚಾಮರಾಜನಗರಕ್ಕೆ ಬಂದಷ್ಟು ನನ್ನ ಖುರ್ಚಿ ಭದ್ರವಾಗುತ್ತೆ ಎಂದ ಸಿಎಂ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 12, 2024 | 7:00 PM

ಚಾಮರಾಜನಗರದ ಡಾ.ಅಂಬೇಡ್ಕರ್ ಮೈದಾನದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಯನ್ನೆ ಅಸ್ತ್ರವಾಗಿಸಿಕೊಂಡ ಸಿಎಂ ಸಿದ್ದರಾಮಯ್ಯ, ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ. ದಲಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರು ಉಳಿಯುತ್ತಾರೆ. ಆದರೆ, ಸಂವಿಧಾನ ಬದಲಾವಣೆ ಮಾಡ್ತೀನಿ ಎಂದು ಹೊರಟಿರುವವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಈ ಹಿಂದೆ 12 ಬಾರಿ ಬಂದಿದ್ದೆ, ಈಗ ಇದು 2ನೇ ಸಲ: ಚಾಮರಾಜನಗರಕ್ಕೆ ಬಂದಷ್ಟು ನನ್ನ ಖುರ್ಚಿ ಭದ್ರವಾಗುತ್ತೆ ಎಂದ ಸಿಎಂ
ಸಿದ್ದರಾಮಯ್ಯ
Follow us on

ಚಾಮರಾಜನಗರ, ಮಾ.12: ಚಾಮರಾಜನಗರಕ್ಕೆ(Chamarajanagar) ಬಂದ್ರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಹೇಳುತ್ತಾರೆ, ಯಾಕೆ ಚಾಮರಾಜನಗರದವರು ಮನುಷ್ಯರಲ್ವಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಪ್ರಶ್ನಿಸಿದ್ದಾರೆ. ಚಾಮರಾಜನಗರದ ಡಾ.ಅಂಬೇಡ್ಕರ್ ಮೈದಾನದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಾನು ಈ ಹಿಂದೆ 12 ಭಾರಿ ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದೆ. ಈ ಭಾರಿ ಸರ್ಕಾರ ರಚನೆಯಾದ ಬಳಿಕ ಮತ್ತೆ ಎರಡನೇ ಭಾರಿ ಬಂದಿದ್ದೇನೆ. ಇಲ್ಲಿಗೆ ಬಂದಷ್ಟು ನನ್ನ ಖುರ್ಚಿ ಭದ್ರವಾಗುತ್ತೆ ಎಂದಿದ್ದಾರೆ.

ಚಾಮರಾಜನಗರದಲ್ಲಿ ದಲಿತಾಸ್ತ್ರ ಪ್ರಯೋಗಿಸಿದ ಸಿಎಂ ಸಿದ್ದರಾಮಯ್ಯ

ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಯನ್ನೆ ಅಸ್ತ್ರವಾಗಿಸಿಕೊಂಡ ಸಿಎಂ ಸಿದ್ದರಾಮಯ್ಯ, ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ. ದಲಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರು ಉಳಿಯುತ್ತಾರೆ. ಆದರೆ, ಸಂವಿಧಾನ ಬದಲಾವಣೆ ಮಾಡ್ತೀನಿ ಎಂದು ಹೊರಟಿರುವವರಿಗೆ ತಕ್ಕ ಪಾಠ ಕಲಿಸಬೇಕು. ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕಬೇಡಿ. ಸಮಾನತೆ ಏನಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎನ್ನುವ ಮೂಲಕ ಸಿಎಂ ದಲಿತಾಸ್ತ್ರ ಪ್ರಯೋಗಿಸಿದ್ದಾರೆ.

ಇದನ್ನೂ ಓದಿ:ಟಿಕೆಟ್ ಸಿಗಲಾರದೆಂಬ ಅತಂಕದಲ್ಲಿರುವ ಸಂಸದ ಪ್ರತಾಪ್ ಸಿಂಹರನ್ನು ಲೇವಡಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

ಇನ್ನು ಚಾಮರಾಜನಗರ ಜಿಲ್ಲೆ ಒಂದು ಸಣ್ಣ ಜಿಲ್ಲೆ. ಆದ್ರೆ, ಇಲ್ಲಿನ ಜನ ಬಹಳ ಕಷ್ಟ ಜೀವಿಗಳು. ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆ ಬರಬೇಕೆಂಬ ತುಡಿತ ಇರುವ ಜನ. ಕಾಂಗ್ರೆಸ್ ಕೂಡ ರಾಜ್ಯದ ಅಸಮಾನತೆ ತೊಲಗಿಸಬೇಕು, ಸಮಾನತೆ ತರಬೇಕೆಂಬ ಆಸೆಯ ಹೊಂದಿದೆ. ಸಂವಿಧಾನದ ಆಶಯ ಕೂಡ ಅದೇ ಆಗಿದೆ. ಆದ್ರೆ, ಸ್ವಾತಂತ್ರ ಬಂದು 70 ವರ್ಷ ಕಳೆದ್ರು ಅಸಮಾನತೆ ತೊಲಗಿಸಲು ಆಗಿಲ್ಲ. ಈ ದೇಶದಲ್ಲಿ ಅಸಮಾನತೆ ಇದೆ ಎಂದರೇ ಅದಕ್ಕೆ ಮನುಸ್ಮೃತಿ, ಜಾತಿ ವ್ಯವಸ್ಥೆ ಕಾರಣ. ಬುದ್ದನ ಕಾಲದಿಂದಲೂ ಇವತ್ತಿನವರೆಗೂ ಪ್ರಯತ್ನ ನಡೆಯುತ್ತಿದೆ. ಆದ್ರೆ, ಸಮಾನತೆ ತರಲು‌ ಆಗಿಲ್ಲ. ಸರ್ವರಿಗೂ ಸಮಪಾಲು, ಸಮಬಾಳು ಕೊಡಬೇಕೆಂಬುದು ನಮ್ಮ ಆಶಯ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Tue, 12 March 24