Elephants Attack: ನಡು ರಸ್ತೆಯಲ್ಲಿ ವಾಹನಗಳನ್ನು ಅಡ್ಡ ಗಟ್ಟಿ ಆನೆಗಳ ದಾಳಿ, ನಡುಕ ಹುಟ್ಟಿಸುವಂತ ದೃಶ್ಯ

Elephants Attack: ನಡು ರಸ್ತೆಯಲ್ಲಿ ವಾಹನಗಳನ್ನು ಅಡ್ಡ ಗಟ್ಟಿ ಆನೆಗಳ ದಾಳಿ, ನಡುಕ ಹುಟ್ಟಿಸುವಂತ ದೃಶ್ಯ

TV9 Web
| Updated By: ಆಯೇಷಾ ಬಾನು

Updated on:Jun 26, 2022 | 2:37 PM

ಚಾಮರಾಜನಗರ ಗಡಿ ಭಾಗವಾದ ಆಸನೂರು ಬಳಿ ಮರಿಯಾನೆ ಜೊತೆ ಹೆದ್ದಾರಿಗೆ ಬಂದ ಆನೆಗಳು ವಾಹನಗಳ ಮೇಲೆ ದಾಳಿ ನಡೆಸಿವೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ.

ಚಾಮರಾಜನಗರ: ವಾಹನ ಸವಾರರು ಒಂದು ಕ್ಷಣ ಬೆಚ್ಚಿ ಬೀಳುವಂತಹ ಘಟನೆ ಚಾಮರಾಜನಗರ ನಡೆದಿದೆ. ಆನೆಗಳ ದಂಡು ವಾಹನಗಳನ್ನ ಅಡ್ಡ ಗಟ್ಟಿ ಕಾರನ್ನು ಜಖಂ ಗೊಳಿಸಿದೆ(Elephant Attacks). ತಮಿಳುನಾಡು ಡಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಮರಾಜನಗರ ಗಡಿ ಭಾಗವಾದ ಆಸನೂರು ಬಳಿ ಮರಿಯಾನೆ ಜೊತೆ ಹೆದ್ದಾರಿಗೆ ಬಂದ ಆನೆಗಳು ವಾಹನಗಳ ಮೇಲೆ ದಾಳಿ ನಡೆಸಿವೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ. ಪದೇ ಪದೇ ಹೆದ್ದಾರಿಯಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಈ ಹಿಂದೆ ಕೂಡ ಬಸ್ ಹಾಗೂ ಲಾರಿಗಳ ಮೇಲೆ ಆನೆ ದಾಳಿ ಮಾಡಿತ್ತು. ವಾಹನ ಸವಾರರು ಆನೆಗಳಿಗೆ ಕೀಟಲೆ ಕೊಡುತ್ತಿರುವುದರಿಂದ ಘಟನೆ‌ ಮರುಕಳಿಸುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ: ಚಾಮರಾಜನಗರ: ಅರಣ್ಯ ಇಲಾಖೆ‌ ವಾಹನದ ಮೇಲೆ ಕಾಡಾನೆ ದಾಳಿ, ಜೀಪ್​ ನುಚ್ಚುನೂರು, ಅಧಿಕಾರಿ-ಸಿಬ್ಬಂದಿಗೆ ಗಾಯ

Published on: Jun 26, 2022 02:37 PM