ಚಾಮರಾಜನಗರ: ಆರೋಗ್ಯ ಉಪಕೇಂದ್ರ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ರೈತ

| Updated By: ವಿವೇಕ ಬಿರಾದಾರ

Updated on: Nov 15, 2022 | 3:53 PM

ಚಾಮರಾಜನಗರ ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಆಸ್ಪತ್ರೆ ಇಲ್ಲದ ಕಾರಣ, ಆರೋಗ್ಯ ಉಪಕೇಂದ್ರ ನಿರ್ಮಾಣ ಮಾಡಲು ಸರ್ಕಾರಕ್ಕೆ ರೈತ ಭೂಮಿ ದಾನ ಮಾಡಿದ್ದಾರೆ.

ಚಾಮರಾಜನಗರ: ಆರೋಗ್ಯ ಉಪಕೇಂದ್ರ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ರೈತ
ಸರ್ಕಾರಕ್ಕೆ ಭೂಮಿ ದಾನ ಮಾಡಿದ ರೈತ
Follow us on

ಚಾಮರಾಜನಗರ: ಆರೋಗ್ಯ ಉಪಕೇಂದ್ರ ನಿರ್ಮಾಣ ಮಾಡಲು ರಾಜ್ಯ ಸರ್ಕಾರಕ್ಕೆ (Karnataka Government) ರೈತ (Farmer) ಭೂಮಿ ದಾನ ಮಾಡಿದ್ದಾರೆ. ಚಾಮರಾಜನಗರ (Chamarajanagar) ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಆಸ್ಪತ್ರೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಇದನ್ನು ಕಂಡ ಕೆಂಚನಯ್ಯನದೊಡ್ಡಿಯ ರೈತ ಕೆ.ವಿ.ಸಿದ್ದಪ್ಪ, ಹನೂರು ತಾಲೂಕು ಎಲ್ಲೆಮಾಳದಲ್ಲಿ ಆರೋಗ್ಯ ಉಪ ಕೇಂದ್ರ ನಿರ್ಮಾಣ ಮಾಡಿ ಎಂದು ಸರ್ಕಾರಕ್ಕೆ 60*40 ಭೂಮಿ ದಾನ ಮಾಡಿದ್ದಾರೆ. ಕೆ.ವಿ.ಸಿದ್ದಪ್ಪ ಹನೂರು ರಿಜಿಸ್ಟ್ರಾರ್ ಕಚೇರಿಗೆ ಬಂದು ರಾಜ್ಯಪಾಲರ ಹೆಸರಿಗೆ ಭೂಮಿಯನ್ನು ವರ್ಗಾಯಿಸಿದ್ದಾರೆ. ಈ ಭೂಮಿ ಪತ್ರವನ್ನು ಜಿಲ್ಲಾ ಆರೋಗ್ಯಾಧಿಕಾರಿಗೆ ಸಲ್ಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:50 pm, Tue, 15 November 22