ಜನ ಮೊದಲೇ ಇಲಿ ಹೋದರೆ ಹುಲಿ ಹೋಯ್ತು ಅಂತಿದ್ದಾರೆ… ಅಂಥದ್ದರಲ್ಲಿ ಈ ರೈತ ನಾಯಿಗೆ ಹುಲಿ ಪಟ್ಟೆ ಬಳಿದು ನಾಡಿಗೆ ಬಿಟ್ಟ! ಮುಂದೇನಾಯ್ತು?

| Updated By: ಸಾಧು ಶ್ರೀನಾಥ್​

Updated on: Jan 11, 2023 | 12:58 PM

ಥಟ್ಟನೆ ನೋಡಿದರೆ ಹುಲಿಯಂತೆ ಕಾಣುವ ನಾಯಿಯನ್ನು ದೂರದಿಂದ ಕಂಡು ಜನ ಮೊದಲಿಗೆ ಗಾಬರಿಗೊಳ್ಳುತ್ತಿದ್ದಾರೆ. ಆದರೆ ಅದು ಬೌ ಬೌ ಎನ್ನುತ್ತಿದ್ದಂತೆ... ಏಯ್ ನಮ್ಮ ನಾಯಿ ಕಣ್ಲಾ ಎಂದು ನಿಟ್ಟುಸಿರುಬಿಟ್ಟು, ಮನಸಾರೆ ನಕ್ಕು ರೈತನಿಗೆ ಶಹಭಾಸ್ ಅನ್ನುತ್ತಿದ್ದಾರೆ!

ಜನ ಮೊದಲೇ ಇಲಿ ಹೋದರೆ ಹುಲಿ ಹೋಯ್ತು ಅಂತಿದ್ದಾರೆ... ಅಂಥದ್ದರಲ್ಲಿ ಈ ರೈತ ನಾಯಿಗೆ ಹುಲಿ ಪಟ್ಟೆ ಬಳಿದು ನಾಡಿಗೆ ಬಿಟ್ಟ! ಮುಂದೇನಾಯ್ತು?
ರೈತ ನಾಯಿಗೆ ಹುಲಿ ಪಟ್ಟೆ ಬಳಿದು ನಾಡಿಗೆ ಬಿಟ್ಟ! ಮುಂದೇನಾಯ್ತು?
Follow us on

ಚಾಮರಾಜನಗರ: ಮನುಷ್ಯ ಯಾವಾಗ ಅರಣ್ಯ ಮಿತಿ ಪ್ರವೇಶಿಸಿದನೋ ವನ್ಯ ಪ್ರಾಣಿಗಳು-ಮಾನವ ಸಂಘರ್ಷ ಮಿತಿ ಮೀರಿಬಿಟ್ಟಿದೆ. ಕಾಡಂಚಿನ ಜನ ಇಲಿ ಹೋದರೂ ಹುಲಿ ಹೋಯ್ತು ಅಂತಾ ಬೆಚ್ಚಿಬೀಳುವಂತಾಗಿದೆ. ರಾತ್ರಿನ ಹಗಲು ಅನ್ನದೇ ವನ್ಯಜೀವಿಗಳು ಮಾನವ ಜೀವಿಗಳ ವಸತಿ ಪ್ರದೇಶಗಳನ್ನು ಎಡತಾಕುತ್ತಿವೆ. ಪರಿಸ್ಥಿತಿ ಹೀಗಿರುವಾಗ ರೈತನೊಬ್ಬ (Farmer) ವನ್ಯ ಪ್ರಾಣಿಗಳನ್ನೇ ಯಾಮಾರಿಸಲು ಹೋಗಿ ಎಂಥಾ ಐಡಿಯಾ ಮಾಡಿದ್ದಾನೆ ನೋಡಿ. ತಾನು ಕಷ್ಟಪಟ್ಟು ಬೆಳೆದಿರುವ ಬೆಳೆಯನ್ನು (crop) ರಕ್ಷಿಸಿಕೊಳ್ಳಲು ಬಡ ರೈತ ಯಾವುದೇ ಸಾಹಸಕ್ಕೂ ಸೈ ಅನ್ನುತ್ತಾನೆ. ಏಕೆಂದರೆ ಅದು ಆತನ ದುಡಿಮೆ, ಆತನ ಹೊಟ್ಟೆಪಾಡು. ಅಂತಹ ಬೆಳೆಯನ್ನು ಪ್ರಾಣಿ ಪಕ್ಷಿಗಳು ಅನಾಯಾಸವಾಗಿ ತಿಂದುತೇಗುತ್ತವೆ ಎಂದರೆ ರೈತ ಸುಮ್ಮನಿರುತ್ತಾನೆಯೇ!?

ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು (Hanur) ತಾಲ್ಲೂಕು ಅಜ್ಜಿಪುರ ಗ್ರಾಮದ ರೈತನೊಬ್ಬ ತನ್ನ ಬೆಳೆಯ ರಕ್ಷಣೆಗಾಗಿ ತನ್ನ  ಸಾಕು ನಾಯಿಗೆ (dog) ಹುಲಿಯ ಬಣ್ಣ ಬಳಿದು (paint) ರಸ್ತೆಗೆ ಬಿಟ್ಟಿದ್ದಾನೆ. ಕೋತಿ ಮತ್ತಿತರ ಪ್ರಾಣಿಗಳಿಂದ ಬೆಳೆ ರಕ್ಷಣೆಗಾಗಿ ಇಂತಹ ವಿಲಕ್ಷಣ ತಂತ್ರ ಅನುಸರಿಸಿದ್ದಾನೆ ರೈತ ಮಹಾಶಯ. ಶ್ವಾನವೀಗ ಥೇಟ್ ಹುಲಿಯಂತೆ ಕಾಣುತ್ತಿದೆ. ಜಾಲತಾಣಗಳಲ್ಲಿ ಹುಲಿ ಬಣ್ಣದ (tiger) ನಾಯಿಯ ವಿಡಿಯೋ ಹಾಗೂ ಫೋಟೋಗಳು ಈಗ ಸಖತ್ ವೈರಲ್ ಆಗಿದೆ. ಹುಲಿಬಣ್ಣ ಬಳಿದ ನಾಯಿಯನ್ನು ಕಂಡ ಜನ ಮುಸಿಮುಸಿ ನಗುತ್ತಿದ್ದಾರೆ.

ರೈತನ ಕೈಚಳಕದಿಂದ ಆ ನಾಯಿಯೇನೂ ತನ್ನನ್ನು ತಾನು ಹುಲಿ ಅಂದುಕೊಂಡಿಲ್ಲ. ತನ್ನ ಜನ್ಮತಹ ಬುದ್ಧಿಯಂತೆ ಬೌಬೌ ಎನ್ನುತ್ತಾ ಊರಿನ ಸುತ್ತಮುತ್ತ ಠಳಾಯಿಸುತ್ತಿದೆ! ಒಂದು ಆಂಗಲ್​ನಲ್ಲಿ ಥಟ್ಟನೆ ನೋಡಿದರೆ ಹುಲಿಯಂತೆ ಕಾಣುವ ನಾಯಿಯನ್ನು ದೂರದಿಂದ ಕಂಡು ಜನ ಮೊದಲಿಗೆ ಗಾಬರಿಗೊಳ್ಳುತ್ತಿದ್ದಾರೆ. ಆದರೆ ಅದು ಬೌ ಬೌ ಎನ್ನುತ್ತಿದ್ದಂತೆ… ಏಯ್ ನಮ್ಮ ನಾಯಿ ಕಣ್ಲಾ ಎಂದು ನಿಟ್ಟುಸಿರುಬಿಟ್ಟು, ಮನಸಾರೆ ನಕ್ಕು ರೈತನಿಗೆ ಶಹಭಾಸ್ ಅನ್ನುತ್ತಿದ್ದಾರೆ! ಇದರಿಂದ ರೈತನಿಗೆ ಕೋತಿ ಕಾಟ ತಪ್ಪಿತಾ? ಸದ್ಯಕ್ಕೆ ತಿಳಿದುಬಂದಿಲ್ಲ!

ಬೆಳೆ ಮೇಯುತ್ತಿದ್ದ ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದ ಅರಣ್ಯ ಇಲಾಖೆ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಜಿ.ಎಸ್. ಬೆಟ್ಟ ವಲಯದ ಕಡೈಕೋಟೆ ಎಂಬಲ್ಲಿ ಕಾಡಾನೆ ಸೆರೆ ಸಿಕ್ಕಿದೆ. ಬೆಳೆ ಹಾನಿ ಮಾಡುತ್ತಿದ್ದ ಹಿನ್ನೆಲೆ ಕಾಡಾನೆ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದರು. ಸಾಕಾನೆಗಳಾದ ಅಭಿಮನ್ಯು, ಮಹೇಂದ್ರ, ಗಣೇಶ, ಭೀಮ ಸಹಾಯದಿಂದ ಅರಿವಳಿಕೆ ಚುಚ್ಚುಮದ್ದು ನೀಡಿ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಸೆರೆ ಹಿಡಿದ ಕಾಡಾನೆ ಐನೋರ್ ಮಾರಿಗುಡಿ ಸಾಕಾನೆಗಳ ಶಿಬಿರಕ್ಕೆ ರವಾನೆ ಮಾಡಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:52 pm, Wed, 11 January 23