Chamarajanagara: ಶೀಘ್ರದಲ್ಲಿಯೇ ಮಲೈಮಹದೇಶ್ವರ ಬೆಟ್ಟದ ಮಾದಪ್ಪನಿಗೆ 530 ಕೆ.ಜಿ ತೂಕದ ಬೆಳ್ಳಿ ರಥ

ರಾಜ್ಯದ ಎರಡನೇ ಶ್ರೀಮಂತ ದೇವಾಲಯವಾದ ಮಲೈಮಹದೇಶ್ವರ ಬೆಟ್ಟದ ಮಾದಪ್ಪನಿಗೆ ಬೆಳ್ಳಿ ರಥ ಸೇವೆ ಪ್ರಾರಂಭ ಮಾಡಬೇಕೇಂದು ಭಕ್ತರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಅದಕ್ಕೀಗ ಕಾಲ ಕೂಡಿಬಂದಿದ್ದು, ಇದೀಗ ಭಕ್ತರ ಬೇಡಿಕೆಯಂತೆ ಬೆಳ್ಳಿ ರಥ ನಿರ್ಮಾಣವಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಬೆಳ್ಳಿ ರಥ ಸೇವೆ ಆರಂಭವಾಗಲಿದೆ.

Chamarajanagara: ಶೀಘ್ರದಲ್ಲಿಯೇ ಮಲೈಮಹದೇಶ್ವರ ಬೆಟ್ಟದ ಮಾದಪ್ಪನಿಗೆ 530 ಕೆ.ಜಿ ತೂಕದ ಬೆಳ್ಳಿ ರಥ
ಮಲೈಮಹದೇಶ್ವರ ಬೆಟ್ಟದ ಮಾದಪ್ಪನಿಗೆ ತಯಾರಾಗುತ್ತಿರುವ 530 ಕೆ.ಜಿ ತೂಕದ ಬೆಳ್ಳಿ ರಥ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 10, 2023 | 10:03 PM

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೈಮಹದೇಶ್ವರ ಬೆಟ್ಟವು ರಾಜ್ಯದ ಎರಡನೇ ಶ್ರೀಮಂತ ದೇವಾಲಯವಾಗಿದ್ದು, ರಾಜ್ಯ ಹಾಗೂ ಹೊರ ರಾಜ್ಯದ ಲಕ್ಷಾಂತರ ಜನ ಭಕ್ತರಿದ್ದಾರೆ. ದೇವಾಲಯದಲ್ಲಿ ಈಗಾಗಲೇ ಮಾದಪ್ಪನಿಗೆ ಚಿನ್ನದ ರಥದ ಸೇವೆ ಮಾಡಲಾಗುತ್ತಿತ್ತು. ಅದೇ ರೀತಿ ಬೆಳ್ಳಿ ರಥ ಸೇವೆಯನ್ನು ಮಾಡಬೇಕು ಎಂಬುದು ಹಲವು ವರ್ಷಗಳಿಂದ ಭಕ್ತರ ಬೇಡಿಕೆಯಾಗಿದ್ದು ಇದೀಗ ಅದು ನೆರವೇರಿದೆ. ಸುಮಾರು 530 ಕೆ.ಜಿ ತೂಕದ ಬೆಳ್ಳಿಯನ್ನ ಬಳಸಿ ಬೆಳ್ಳಿ ರಥ ನಿರ್ಮಾಣವಾಗಿದ್ದು ಎಲ್ಲವು ಅಂದುಕೊಂಡಂತೆ ಆದರೆ ಇದೇ ತಿಂಗಳ 15 ರಂದು ಬೆಳ್ಳಿ ರಥ ಮಾಡುತ್ತಿರುವ ಶಿಲ್ಪಿಗಳು ದೇವಾಲಯಕ್ಕೆ ರಥವನ್ನು ಹಸ್ತಾಂತರ ಮಾಡಲಿದ್ದಾರೆ.

ಇನ್ನು ಬೆಳ್ಳಿ ರಥ ನಿರ್ಮಾಣ ಮಾಡಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ಪ್ರಾಧಿಕಾರದ ಸಭೆ ನಡೆಸಿ ಇದಕ್ಕೆ ಬೇಕಾದ ಬೆಳ್ಳಿಯನ್ನ ಇಟ್ಟುಕೊಳ್ಳಲು ಅಂದೇ ತೀರ್ಮಾನ ಮಾಡಲಾಗಿತ್ತು. ಅದಷ್ಟೇ ಅಲ್ಲದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸಂಧರ್ಭದಲ್ಲಿ ಅವರಿಗೆ ಬಂದ ಬೆಳ್ಳಿಯ ಗಿಫ್ಟ್​ಗಳನ್ನು ರಥಕ್ಕೆ ಕೊಡುವುದಾಗಿಯು ತಿಳಿಸಿದ್ದರು. ಕಳೆದ ಒಂದು ವರ್ಷಗಳಿಂದ ಬೆಳ್ಳಿ ರಥ ನಿರ್ಮಾಣ‌ದ ಕೆಲಸವನ್ನ ಶಿಲ್ಪಿಗಳು ದೇವಾಲಯದ ಆವರಣದಲ್ಲೆ‌ ಮಾಡುತ್ತಿದ್ದಾರೆ. ‌ಸದ್ಯ ಈ ಬೆಳ್ಳಿ ರಥಕ್ಕೆ ಬೇಕಾದ ಬೆಳ್ಳಿಯನ್ನ ಭಕ್ತರೆ ನೀಡಿದ್ದಾರೆ. ಹುಂಡಿಗೆ ಕಾಣಿಕೆ ರೂಪದಲ್ಲಿ ಬರುವ ಬೆಳ್ಳಿಯನ್ನು ಬಳಸಿಕೊಂಡು ರಥ ನಿರ್ಮಾಣ ಮಾಡಲಾಗಿದೆಯಂತೆ. ಅಷ್ಟೆ ಅಲ್ಲದೆ ಶಿಲ್ಪಿಗಳಿಗೆ ಸುಮಾರು 20 ಲಕ್ಷ ಹಣ ಕೊಡಬೇಕಿದ್ದು, ಅದನ್ನು ಸಹ ದೇವಾಲಯದ ಭಕ್ತರೆ ಬರಿಸಿದ್ದಾರಂತೆ.

ಇದನ್ನೂ ಓದಿ:Doddamma Thayi Jatre: ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ಸಂಕ್ರಾಂತಿ ಸಮೀಪಿಸಿದಾಗ ಜಾತ್ರೆಗಳ ಸುಗ್ಗಿಯೋ ಸುಗ್ಗಿ, ಒಂದು ಝಲಕ್ ಇಲ್ಲಿದೆ!

ಒಟ್ಟಾರೆ ಬೆಳ್ಳಿ ರಥದ ಕೆಲಸ ಶೇ.99 ರಷ್ಟು ಮುಕ್ತಾಯವಾಗಿದ್ದು, ಮಲೈ ಮಹದೇಶ್ವರ ಬೆಟ್ಟದಲ್ಲಿ ರಾತ್ರಿ ವೇಳೆ ನಡೆಯುತ್ತಿದ್ದ ಚಿನ್ನದ ರಥದ ಸೇವೆ ಮಾದರಿಯಲ್ಲಿ ಬೆಳಗ್ಗಿನ ವೇಳೆ ಬೆಳ್ಳಿ ರಥದ ಸೇವೆ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.

ವರದಿ: ದಿಲೀಪ್ ಚೌಡಹಳ್ಳಿ ಟಿವಿ9 ಚಾಮರಾಜನಗರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ ಮಾಡಿ

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ