ಚಾಮರಾಜನಗರ: ಅರಣ್ಯಾಧಿಕಾರಿಯ ಪ್ರತಿಷ್ಠೆಗೆ ಜನ ಕಂಗಾಲು, ಬಡ ಗ್ರಾಮಸ್ಥರಿಗೆ ಕಾಡುಮೇಡಿನ ದುರ್ಗಮ ಹಾದಿಯೇ ಗತಿ!

ದೈನಂದಿನ ಕೆಲಸ ಕಾರ್ಯಗಳಿಗೆ ಮಹದೇಶ್ವರ ಬೆಟ್ಟಕ್ಕೆ ಕಿಲೋಮೀಟರ್ ‌ಗಟ್ಟಲೆ ಬೆಟ್ಟಗುಡ್ಡ ಹತ್ತಿ ಇಳಿದು ಸಾಗಬೇಕು. ಕಾಡು ಪ್ರಾಣಿಗಳು ದಾಳಿ ನಡೆಸುವ ಆತಂಕದಲ್ಲೇ ನಡೆಯಬೇಕು.

ಚಾಮರಾಜನಗರ: ಅರಣ್ಯಾಧಿಕಾರಿಯ ಪ್ರತಿಷ್ಠೆಗೆ ಜನ ಕಂಗಾಲು, ಬಡ ಗ್ರಾಮಸ್ಥರಿಗೆ ಕಾಡುಮೇಡಿನ ದುರ್ಗಮ ಹಾದಿಯೇ ಗತಿ!
ಅರಣ್ಯಾಧಿಕಾರಿಯ ಪ್ರತಿಷ್ಠೆಗೆ ಜನ ಕಂಗಾಲು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 28, 2022 | 2:28 PM

ಚಾಮರಾಜನಗರ: ಅಧಿಕಾರಿಯೊಬ್ಬರ ಪ್ರತಿಷ್ಠೆಗೆ ಜನ ಕಂಗಾಲಾಗಿದ್ದಾರೆ. ಹಿಂದಿನ ಅಧಿಕಾರಿ ಮಾಡಿದ ಯೋಜನೆ ಈಗಿನ ಅಧಿಕಾರಿಯಿಂದ ನಿರ್ಲಕ್ಷ್ಯಕ್ಕೊಳಗಾಗಿದೆ. ಮಹದೇಶ್ವರ ಬೆಟ್ಟದಲ್ಲಿ ಜನವನ ಸಾರಿಗೆ ಸ್ಥಗಿತಗೊಂಡಿದೆ. ಮಹದೇಶ್ವರ ಬೆಟ್ಟ ಸುತ್ತಮುತ್ತಲಿನ (Chamarajanagar) ಗ್ರಾಮಸ್ಥರು ಮತ್ತೆ ಡೋಲಿ (Transportation) ಮೊರೆ ಹೋಗಿದ್ದಾರೆ. ಅರಣ್ಯದಲ್ಲಿನ ಗ್ರಾಮಸ್ಥರ ( villagers) ಅನುಕೂಲಕ್ಕೆ ಅರಣ್ಯ ಇಲಾಖೆ ಆರಂಭಿಸಿದ್ದ ಜನವನ ಸಾರಿಗೆ ಅದಾಗಿತ್ತು. ದುರ್ಗಮ ಅರಣ್ಯ ಪ್ರದೇಶದಲ್ಲಿ ಸಂಚರಿಸುವ ಸಾಮರ್ಥ್ಯವಿದ್ದ ಫೋರ್ಸ್ ಗೂರ್ಖಾ ವಾಹನ ಸೌಲಭ್ಯವನ್ನು ಅರಣ್ಯ ಇಲಾಖೆ ಕಲ್ಪಿಸಿತ್ತು.

ವಾಹನಗಳ ನಿರ್ವಹಣೆಯನ್ನು ಅರಣ್ಯ ಇಲಾಖೆಯು ಪರಿಸರ ಅಭಿವೃದ್ಧಿ ಸಮಿತಿಗಳಿಗೆ ವಹಿಸಿತ್ತು. ಇದಕ್ಕಾಗಿ ಹಿಂದಿನ ಅಧಿಕಾರಿ ಸಾಕಷ್ಟು ಹಣವನ್ನು ಮೀಸಲಿಟ್ಟಿದ್ದರು. ಮಲೈ ಮಹದೇಶ್ವರ ವನ್ಯಜೀವಿ ಧಾಮದ ಹಿಂದಿನ ಅಧಿಕಾರಿ ಏಡುಕೊಂಡಲರಿಂದ ಈ ಯೋಜನೆ ಆರಂಭವಾಗಿತ್ತು. ಜನವನ ಸಾರಿಗೆ ವಾಹನಗಳು ಅರಣ್ಯಲ್ಲಿನ ಒಂಬತ್ತು ಗ್ರಾಮಗಳ ಜನರ ಅನುಕೂಲಕ್ಕೆ ನಾಲ್ಕು ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು.

ಡಿಎಫ್ ಓ ಸಂತೋಷ್ ವಿರುದ್ಧ ಜನರ ಆಕ್ರೋಶ

ವಸೂಲಿಯಾಗುವ ಪ್ರಯಾಣ ದರದಲ್ಲಿ ವಾಹನಗಳ ನಿರ್ವಹಣೆಯನ್ನು ಅರಣ್ಯ ಇಲಾಖೆ ಪರಿಸರ ಅಭಿವೃದ್ಧಿ ಸಮಿತಿಗಳಿಗೆ ಜವಾಬ್ದಾರಿ ವಹಿಸಿತ್ತು. ರಸ್ತೆ ಹದಗೆಟ್ಟಿದೆ ಎಂದು ನೆಪ ಹೇಳಿ ವಾಹನ ನಿಲ್ಲಿಸಿರುವ ಅಧಿಕಾರಿಗಳು. ಗ್ರಾಮಸ್ಥರಿಗೆ ಮತ್ತೆ ಡೋಲಿಯೇ ಗತಿಯಾಗಿದೆ. ದುರ್ಗಮ ಕಾಡಿನ ಹಾದಿಯೇ ಇವರಿಗೆ ಹೆದ್ದಾರಿ! ಡೋಲಿಯೇ ಆ್ಯಂಬುಲೆನ್ಸ್ ಆಗಿದೆ. ಅನಾರೋಗ್ಯಪೀಡಿತರು, ಗರ್ಭಿಣಿಯರನ್ನು ಡೋಲಿ ಕಟ್ಟಿಯೇ ಹೊತ್ತೊಯ್ಯಬೇಕು. Also Read:

ಚಾಮರಾಜನಗರ: ಅರಣ್ಯಾಧಿಕಾರಿಯ ಪ್ರತಿಷ್ಠೆಗೆ ಜನ ಕಂಗಾಲು, ಬಡ ಗ್ರಾಮಸ್ಥರಿಗೆ ಕಾಡುಮೇಡಿನ ದುರ್ಗಮ ಹಾದಿಯೇ ಗತಿ!

ದೈನಂದಿನ ಕೆಲಸ ಕಾರ್ಯಗಳಿಗೆ ಮಹದೇಶ್ವರ ಬೆಟ್ಟಕ್ಕೆ ಕಿಲೋಮೀಟರ್ ‌ಗಟ್ಟಲೆ ಬೆಟ್ಟಗುಡ್ಡ ಹತ್ತಿ ಇಳಿದು ಸಾಗಬೇಕು. ಕಾಡು ಪ್ರಾಣಿಗಳು ದಾಳಿ ನಡೆಸುವ ಆತಂಕದಲ್ಲೇ ನಡೆಯಬೇಕು. ನಾವು ವಾಹನ ಕೊಟ್ಟಿದ್ದೇವೆ, ನಿರ್ವಹಣೆ ನಮ್ಮ ಜವಾಬ್ದಾರಿ ಅಲ್ಲ ಎನ್ನುತ್ತಿದ್ದಾರೆ ಅರಣ್ಯಾಧಿಕಾರಿಗಳು. ಈಗಿನ ಡಿಎಫ್ ಓ ಸಂತೋಷ್ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:26 pm, Wed, 28 December 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ