ಜಮೀನು ವಿವಾದ: ಮರ ಕಡಿಯುವ ಕೊಡಲಿಯಿಂದ ಮಗನನ್ನು ಕೊಂದ ತಂದೆ

ಚಾಮರಾಜನಗರ: ಜಮೀನು ವಿವಾದ ಹಿನ್ನೆಲೆಯಲ್ಲಿ ಅಪ್ಪನಿಂದಲೇ ಮಗನ ಕೊಲೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊನ್ನೆಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಲ್ಲಿಕಾರ್ಜುನ (48) ಮೃತ ದುರ್ದೈವಿ. ಜಮೀನು ವಿವಾದ ಕಾರಣದಿಂದ ಪದೇ ಪದೆ ಅಪ್ಪ ಮಕ್ಕಳು ಗಲಾಟೆ ಮಾಡಿಕೊಳ್ಳುತ್ತಿದ್ದರು. ಇಂದು ಬೆಳಗ್ಗೆ ಮರ ಕಡಿಯುವ ವೇಳೆ ತಕರಾರು ತೆಗೆದು ತಂದೆ-ಮಗ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಕೋಪ ತಾರಕಕ್ಕೇರಿ ಮರ ಕಡಿಯಲು ಬಳಸಿದ್ದ ಕೊಡಲಿಯಿಂದಲೇ ಮಗನನ್ನು ಹೊಡೆದು ಹತ್ಯೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರ ಭೇಟಿ ನೀಡಿ ಪರಿಶೀಲನೆ […]

ಜಮೀನು ವಿವಾದ: ಮರ ಕಡಿಯುವ ಕೊಡಲಿಯಿಂದ ಮಗನನ್ನು ಕೊಂದ ತಂದೆ
Updated By:

Updated on: Jun 28, 2020 | 11:38 AM

ಚಾಮರಾಜನಗರ: ಜಮೀನು ವಿವಾದ ಹಿನ್ನೆಲೆಯಲ್ಲಿ ಅಪ್ಪನಿಂದಲೇ ಮಗನ ಕೊಲೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊನ್ನೆಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಲ್ಲಿಕಾರ್ಜುನ (48) ಮೃತ ದುರ್ದೈವಿ.

ಜಮೀನು ವಿವಾದ ಕಾರಣದಿಂದ ಪದೇ ಪದೆ ಅಪ್ಪ ಮಕ್ಕಳು ಗಲಾಟೆ ಮಾಡಿಕೊಳ್ಳುತ್ತಿದ್ದರು. ಇಂದು ಬೆಳಗ್ಗೆ ಮರ ಕಡಿಯುವ ವೇಳೆ ತಕರಾರು ತೆಗೆದು ತಂದೆ-ಮಗ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಕೋಪ ತಾರಕಕ್ಕೇರಿ ಮರ ಕಡಿಯಲು ಬಳಸಿದ್ದ ಕೊಡಲಿಯಿಂದಲೇ ಮಗನನ್ನು ಹೊಡೆದು ಹತ್ಯೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Published On - 11:37 am, Sun, 28 June 20