ಚಾಮರಾಜನಗರ: ಕಳೆದ ಹಲವು ದಿನಗಳಿಂದ ದನ, ಕುರಿ ಕೊಂದು ಜನರನ್ನು ಆತಂಕಕ್ಕೆ ನೂಕಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬೋನಿಗೆ ಬೀಳಿಸಿದ್ದಾರೆ. ಚಾಮರಾಜನಗರ ತಾಲೂಕಿನ ವೀರನಪುರ ಬಳಿ ಚಿರತೆ ಸೆರೆಯಾಗಿದೆ.
ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಜನರನ್ನು ಆತಂಕಕ್ಕೆ ತಳ್ಳಿದ್ದ ಚಿರತೆಯನ್ನು ಬೋನಿನ ಸಹಾಯದಿಂದ ಸೆರೆ ಹಿಡಿದಿದ್ದು ಚಿರತೆ ಕಾಟದಿಂದ ರೋಸಿಹೋಗಿದ್ದ ವೀರನಪುರ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಹಿಂದೆ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಸಿಬ್ಬಂದಿಗೆ ಸ್ಥಳೀಯರು ಆಗ್ರಹಿಸಿದ್ದರು. ಅಲ್ಲದೆ ಪ್ರತಿಭಟನೆ ಕೂಡ ಮಾಡಿದ್ದರು. ಬಳಿಕ 4 ದಿನಗಳ ಹಿಂದೆ ಅಧಿಕಾರಿಗಳು ಬೋನ್ ಇರಿಸಿ ನಾಯಿ ಕಟ್ಟಿಹಾಕಿದ್ದರು. ಸದ್ಯ ಚಿರತೆ ಬೋನಿಗೆ ಬಿದ್ದಿದ್ದು ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.
ರಾಗಿಮುದ್ದನಹಳ್ಳಿಯಲ್ಲಿ ಚಿರತೆ ದಾಳಿಗೆ 8 ಕುರಿಗಳು ಬಲಿ
ಇನ್ನು ಮತ್ತೊಂದೆಡೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿಯಲ್ಲಿ ಚಿರತೆ ದಾಳಿಗೆ 8 ಕುರಿಗಳು ಬಲಿಯಾಗಿವೆ. ರೈತ ಮಹಿಳೆ ಅಕ್ಕಯ್ಯಮ್ಮಗೆ ಸೇರಿದ 8 ಕುರಿಗಳ ಮೇಲೆ ಚಿರತೆ ದಾಳಿ ಮಾಡಿದೆ. ಸುಮಾರು 1.5 ಲಕ್ಷ ರೂ ನಷ್ಟವಾಗಿದೆ ಎಂದು ಅಕ್ಕಮ್ಮ ಅಳಲು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರಾಂಗ್ ರೂಟ್ನಲ್ಲಿ ಬಂದ ಕಾರಿಗೆ ಮತ್ತೊಂದು ಕಾರು ಡಿಕ್ಕಿ; ಇಬ್ಬರು ದುರ್ಮರಣ