ಚಾಮರಾಜನಗರ: ಅಳಿವಿನಂಚಿನಲ್ಲಿರುವ ಶತಮಾನದ ಶಾಲೆಗೆ ಬೇಕಿದೆ ಸಹಾಯ ಹಸ್ತ
ಚಾಮರಾಜನಗರದಲ್ಲಿರುವ ಶತಮಾನ ಕಳೆದ ಶಾಲೆ ಅಳಿವಿನಂಚಿನಲ್ಲಿದೆ. ಸಾವಿರಾರು ಮಂದಿ ವಿದ್ಯಾರ್ಥಿಗಳು ಇದೆ ಶಾಲೆಯಲ್ಲಿ ವ್ಯಾಸಾಂಗ ಮಾಡಿ ಜೀವನ ಕಟ್ಟಿ ಕೊಂಡಿದ್ದಾರೆ. ಸಮಾಜದ ಉನ್ನತ ಸ್ಥಾನಕ್ಕೆರಿದ್ದಾರೆ. ಆದರೆ ಅಂತ ಶಾಲೆ ಪರಿಸ್ಥಿತಿ ಈಗ ಹೇಳ ತೀರದಂತಾಗಿದೆ. ಅಳವಿನಂಚಿನಲ್ಲಿರುವ ಈ ಸರ್ಕಾರಿ ಶತಮಾನದ ಶಾಲೆಗೆ ಈಗ ಸಹಾಯ ಹಸ್ತ ಬೇಕಿದೆ. ನಿದ್ದೆಯಲ್ಲಿ ಮುಳುಗಿರುವ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.
ಚಾಮರಾಜನಗರ, ಡಿ.30: ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಶಾಲೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ (Government School). ಈ ಶಾಲೆಯ ಗೋಡೆಗಳು ಬಿರುಕು ಬಿಟ್ಟಿವೆ. ಈ ಶಾಳೆ ಇಗ್ಲೋ ಆಗ್ಲೋ ಬೀಳುವ ಹಂತದಲ್ಲಿದೆ. ಮೇಲ್ಚಾವಣಿ ದೂಳು ಹಿಡಿದಿದೆ. ಕೂರಲು ಬೆಂಚುಗಳಿಲ್ಲದೆ ನೆಲದ ಮೇಲೆ ಕುಳಿತು ಶಾಲಾ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಇಲ್ಲಿನ ಶೌಚಾಲಯಕ್ಕೆ ಬಾಗಿಲು ಸಹ ಇಲ್ಲ.
ಗಡಿ ನಾಡು ಚಾಮರಾಜನಗರದ ಶತಮಾನದ ಶಾಲೆ ಎಂಬ ಹೆಗ್ಗಳಿಕೆ ಪಡೆದಿರುವ ಈ ಮುಕ್ಕಡಹಳ್ಳಿಯ ದುಸ್ಥಿತಿ ಹೇಳತೀರದ್ದು. ಅಂಗನವಾಡಿಯಿಂದ 7ನೇ ತರಗತಿ ವರೆಗೂ ಈ ಶಾಲೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲಾ ಕಟ್ಟಡದ ದುಸ್ಥಿತಿ ನೋಡಿ ಪೋಷಕರು ಈಗ ಈ ಶಾಲೆಗೆ ಮಕ್ಕಳನ್ನ ಕಳಿಸುವುದನ್ನ ನಿಲ್ಲಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಭಾರಿ ಇಳಿಕೆ ಕಾಣುತ್ತಿದೆ. ಈ ಪರಿಸ್ಥಿತಿ ಹೀಗೆ ಮುಂದುವರೆದ್ರೆ ಶಾಲೆ ಮುಚ್ಚಲೇ ಬೇಕಾದ ಅನಿವಾರ್ಯತೆ ಎದುರಾಗಲಿದೆ.
ಇದನ್ನೂ ಓದಿ: ಶಾಲೆ ಸ್ವಚ್ಛತೆ ಹೊಣೆ ಎಸ್ಡಿಎಂಸಿ ಸಮಿತಿಗೆ ನೀಡಲು ತೀರ್ಮಾನ, ಶೀಘ್ರದಲ್ಲೇ ಅಧಿಸೂಚನೆ
ಇನ್ನು ಮುಕ್ಕಡಹಳ್ಳಿಯಲ್ಲಿ ಅತಿ ಹೆಚ್ಚಾಗಿ ಕೂಲಿ ಕಾರ್ಮಿಕರು ಹಾಗೂ ರೈತರಿದ್ದಾರೆ. ಇವರು ಲಕ್ಷಗಟ್ಟಲೇ ಡೊನೇಷನ್ ಕೊಟ್ಟು ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವ ಪರಿಸ್ಥಿತಿಯಲ್ಲಿಲ್ಲ. ಇವರೆಲ್ಲ ನೆಚ್ಚಿ ಕೊಂಡಿರುವುದು ಸರ್ಕಾರಿ ಶಾಲೆಯನ್ನೇ. ಇಂತ ಸರ್ಕಾರಿ ಶಾಲೆಯ ಪರಿಸ್ಥಿತಿ ಹೀಗೆ ಆದ್ರೆ ನೂರಾರು ಮಕ್ಕಳು ಶಾಲೆಯಿಂದ ವಂಚಿತರಾಗಲಿದ್ದಾರೆ. ಶಿಕ್ಷಣದಿಂದ ದೂರ ಉಳಿಯುವಂತಾಗುತ್ತೆ. ಇನ್ನು ಕಟ್ಟಡ ದುರಸ್ಥಿ ಕಾರ್ಯ ನಡೆಸಲು ಶಿಕ್ಷಣ ಇಲಾಖೆಯಲ್ಲಿ ಹಣದ ಸಮಸ್ಯೆಯಿದೆ ಜೊತೆಗೆ ಶಿಕ್ಷಕರ ಕೊರತೆ ಇರುವ ಕಾರಣ ದಿನ ಕಳೆದಂತೆ ಶಾಲೆಯಿಂದ ಮಕ್ಕಳು ದೂರವಾಗುತ್ತಿರುವುದು ಈಗ ಆತಂಕ ಸೃಷ್ಠಿಸುತ್ತಿದೆ.
ಅದೇನೆ ಹೇಳಿ ಸರ್ಕಾರಿ ಶಾಲೆ ಉಳಿಸಿ ಎಂಬ ಮಾತನ್ನ ಬರಿ ಬಾಯಿ ಮಾತಿಗೆ ಮಾತ್ರ ಈ ಮಾತು ಸೀಮಿತವಾಗಿದೆ. ಸರ್ಕಾರಿ ಶಾಲೆಯ ಪರಿಸ್ಥಿತಿ ಹೀಗೆ ಮುಂದುವರೆದ್ರೆ ನೂರಾರು ಹಳ್ಳಿ ಹಾಗೂ ಗುಡ್ಡಗಾಡಿನ ಮಕ್ಕಳ ಭವಿಷ್ಯಕ್ಕೆ ಮುಳುವಾಗುವುದಂತು ಸುಳ್ಳಲ್ಲ. ಇನ್ಮುಂದೆಯಾದ್ರು ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳ ಕುರಿತು ಹೆಚ್ಚಿನ ಗಮನ ಹರಿಸುವ ಮೂಲಕ ಬಡ ವಿದ್ಯಾರ್ಥಿಗಳ ಪಾಲಿಗೆ ಆಶಾ ಕಿರಣವಾಗಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:56 pm, Sat, 30 December 23