ಚಾಮರಾಜನಗರ, ಜೂ.08: ಆಕೆ ಈಗ ತಾನೇ ಮೊದಲ ವರ್ಷದ ಪಿಯುಸಿ(PUC) ಮುಗಿಸಿ ದ್ವಿತೀಯ ವರ್ಷಕ್ಕೆ ಅಡ್ಮಿಷನ್ ಆಗಿದ್ದಳು. ಉತ್ತಮ ವ್ಯಾಸಾಂಗ ಪಡೆದು ಐಎಎಸ್ ಅಧಿಕಾರಿ ಆಗುವ ಕನಸ್ಸು ಕಂಡಿದ್ದಳು. ಆದ್ರೆ, ಆಕೆಯ ಬಾಳಲ್ಲಿ ಕಾಮ ಕ್ರಿಮಿಯ ಪ್ರವೇಶವಾಗಿತ್ತು. ಮದ್ವೆಯಾಗಿ ಎರೆಡು ಮಕ್ಕಳಿದ್ದರೂ ಪ್ರೀತ್ಸೆ ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ. ಜೊತೆಗೆ ಆಕೆಯ ಖಾಸಗಿ ಫೋಟೊ, ವಿಡಿಯೋ ಹಿಡಿದು ಬ್ಲಾಕ್ಮೇಲ್ ಮಾಡಿದ್ದ ಪರಿಣಾಮ ಈಗ ಒಂದೇ ಕುಟುಂಬದ ನಾಲ್ವರು ವಿಷ ಪ್ರಾಶಾಣ ಮಾಡಿದ್ದು, ಓರ್ವ ಮೃತ ಪಟ್ಟಿದ್ರೆ, ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಹೌದು, ತಾಳ ಬೆಟ್ಟದಲ್ಲಿ ಕೆ.ಆರ್ ನಗರ ತಾಲೂಕಿನ ಚಂದಗಾಲು ಗ್ರಾಮದ ನಾಲ್ವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದರಲ್ಲಿ ಮಾಹದೇವನಾಯ್ಕ ಎಂಬಾತ ಸಾವನ್ನಪ್ಪಿದ್ರೆ, ಲೀಲಾವತಿ ಗೌರಮ್ಮ ಹಾಗೂ ಅಪ್ರಾಪ್ಥೆಯ ಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ:ಮಹದೇಶ್ವರನ ದರ್ಶನ ಪಡೆದು ವಾಪಸ್ ಬರುವಾಗ ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ
ಚೀರನಹಳ್ಳಿಯ ಲೋಕೇಶ್ ಎಂಬಾತನಿಗೆ ಮದ್ವೆಯಾಗಿ ಪತ್ನಿ ಮೃತ ಪಟ್ಟಿದ್ದು, ಇಬ್ಬರು ಮಕ್ಕಳಿದ್ದಾರೆ. ಆದ್ರೆ, ಈ ಕಾಮ ಕ್ರಿಮಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಆಪ್ರಾಪ್ಥೆಯ ಮೇಲೆ ಕಣ್ಣಾಕಿದ್ದಾನೆ. ಆಕೆಯ ಖಾಸಗಿ ವಿಡಿಯೋ ಹಾಗೂ ಫೋಟೊ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದ. ಈ ವಿಚಾರ ಅಪ್ರಾಪ್ತೆಯ ಮನೆಯವರಿಗೆ ತಿಳಿದಿದೆ. ಕೆ.ಆರ್ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಆ ಠಾಣೆಯ ಪಿಎಸ್ಐ ಹಾಗೂ ಇನ್ಸ್ ಪೆಕ್ಟರ್ ಎರೆಡು ಬಾರಿ ಹೋದಾಗಲೂ ದೂರು ತೆಗೆದುಕೊಳ್ಳದೆ ವಾಪಸ್ಸು ಕಳುಹಿಸಿದ್ದಾರೆ.
ಯಾವಾಗ ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಆಗ ಲೋಕೇಶ್ ತಂದಗಾಲು ಗ್ರಾಮಕ್ಕೆ ತೆರಳಿ ಸಂತ್ರಸ್ಥ ಯುವತಿ ಮನೆ ಮುಂದೆ ಗಲಾಟೆ ಮಾಡಿದ್ದಾನೆ. ಇದರಿಂದ ಮನನೊಂದ ಕುಟುಂಬಸ್ಥರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದು ಬಳಿಕ ತಾಳ ಬೆಟ್ಟಕ್ಕೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಲೀಲಾವತಿ, ಗೌರಮ್ಮ, ಹಾಗೂ ಅಪ್ರಾಪ್ಥೆ ವಿಷ ಪ್ರಾಶಾಣದಿಂದ ಗಂಭೀರವಾಗಿದ್ರೆ, ಅತ್ತ ಮಹದೇವನಾಯ್ಕ ಮೃತ ಪಟ್ಟಿದ್ದಾರೆ. ಸದ್ಯ ಮೂವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಮಹದೇವನಾಯ್ಕರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಹನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅದೇನೆ ಹೇಳಿ ಉನ್ನತ ವ್ಯಾಸಾಂಗ ಮಾಡಿ ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸು ಕಟ್ಟಿದ್ದ ಬಾಲೆಯ ಬಾಳಲ್ಲಿ ನಡೆದಿದ್ದು ಮಾತ್ರ ಘೋರ ದುರಂತ. ದೂರು ದಾಖಲಿಸಿಕೊಳ್ಳದ ಪೊಲೀಸರ ವಿರುದ್ದ ಕಠಿಣ ಕ್ರಮ ಆಗಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ