ಚಾಮರಾಜನಗರ, ಏ.16: ದಿನ ಕಳೆದಂತೆ ಲೋಕಸಭಾ ಚುನಾವಣಾ(Lok sabha election) ಕಾವು ರಂಗೇರುತ್ತಿದೆ. ಶತಾಯ ಗತಾಯ ಗೆಲುವು ಸಾಧಿಸಲೇ ಬೇಕೆಂದು ಕಾಂಗ್ರೆಸ್ ಪಣ ತೊಟ್ಟು ನಿಂತಿದ್ದು, ಈಗಾಗಲೇ ಆಪರೇಷನ್ ಮೇಲೆ ಆಪರೇಷನ್ ಮಾಡಿ ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ. ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ರ(Srinivas Prasad) ಕುಟುಂಬ ವರ್ಗದವರಿಗೆ ಟ್ಯಾಕಲ್ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡರೆ, ಮತ್ತೊಂದೆಡೆ ಅಧಿಕೃತವಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಶ್ರೀನಿವಾಸ್ ಪ್ರಸಾದ್ರ ಸಹೋದರ ಪ್ರಚಾರ ನಡೆಸಲು ಆರಂಭಿಸಿದ್ದು, ಈಗ ಬಿಜೆಪಿ ಪಾಳಯದಲ್ಲಿ ನಡುಕ ಎದುರಾಗಿದೆ.
ಇನ್ನು ಕಳೆದ ಬಾರಿ ದ್ರುವ ನಾರಾಯಣ್ರ ವಿರುದ್ದ ಸ್ಪರ್ಧೆ ಮಾಡಿದ್ದ ಬಿಜೆಪಿ ಹಾಲಿ ಸಂಸದ ಶ್ರೀನಿವಾಸ್ ಪ್ರಸಾದ್, ಕೇವಲ ಒಂದುವರೆ ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದರು. ಇನ್ನು ಬಿಜೆಪಿ ಪಕ್ಷಕ್ಕೆ ಬಂದು ಅಧಿಕಾರ ಅನುಭವಿಸಿ ಈಗ ಕೊನೆ ಸಂದರ್ಭದಲ್ಲಿ ಪಕ್ಷಕ್ಕೆ ದ್ರೋಹ ಮಾಡುತ್ತಿದ್ದಾರೆಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಒಟ್ಟಾರೆ ಪ್ರತಿಷ್ಠೆಯ ಕಣವಾದ ಚಾಮರಾಜನಗರವನ್ನ ಗೆಲ್ಲಲೇ ಬೇಕೆಂದು ಪಣ ತೊಟ್ಟು ನಿಂತಿರುವ ಸಿದ್ದರಾಮಯ್ಯಗೆ, ಇತ್ತ ಲಿಂಗಾಯತ, ಒಕ್ಕಲಿಗ ಅಸ್ತ್ರ ಬಳಸುವುದಕ್ಕೆ ಉಭಯ ನಾಯಕರು ಮುಂದಾಗಿದ್ದು, ಇದು ಕೈ ನಾಯಕರಲ್ಲಿಯೂ ಭಯ ಸೃಷ್ಠಿಸಿದೆ.
ಇದನ್ನೂ ಓದಿ:ಲೋಕಸಭೆ ಚುನಾವಣೆ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಗ್ಯಾರಂಟಿ ಕಾರ್ಡ್ ಹಂಚಿಕೆ
ಮೊನ್ನೆಯಷ್ಟೇ ಬಿಎಸ್ ಯಡಿಯೂರಪ್ಪನವರು ಶ್ರೀನಿವಾಸ್ ಪ್ರಸಾದ್ ಮನೆಗೆ ತೆರಳಿ ಮೋದಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಆದರೆ, ಆರೋಗ್ಯದ ನೆಪ ಹೇಳಿ ಕಾರ್ಯಕ್ರಮಕ್ಕೆ ಬರಲ್ಲವೆಂದು ಹೇಳಿದ್ದರು. ಒಟ್ಟಾರೆ ದಿನ ಕಳೆದಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಟಫ್ ಫೈಟ್ ಇದ್ದು, ಮತದಾರಪ್ರಭು ಯಾರ ಕೈ ಹಿಡಿಯುತ್ತಾನೊ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
Published On - 8:49 pm, Tue, 16 April 24