ಜೂಜು ಅಡ್ಡೆಯಾಗಿರುವ ಮಲೆ ಮಹದೇಶ್ವರ ಬೆಟ್ಟ! ಅಕ್ರಮಕ್ಕೆ ಪೊಲೀಸರೇ ಸಾಥ್ ಕೊಟ್ಟಿರುವ ಶಂಕೆ

| Updated By: sandhya thejappa

Updated on: Sep 16, 2021 | 9:20 AM

ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದ್ದಾರಂತೆ. ಭಗವಂತನ ಸನ್ನಿಧಿ ಅಕ್ರಮ ಚಟುವಟಿಕೆ ತಾಣವಾಗಿರುವುದು ಸರಿಯಲ್ಲ.

ಜೂಜು ಅಡ್ಡೆಯಾಗಿರುವ ಮಲೆ ಮಹದೇಶ್ವರ ಬೆಟ್ಟ! ಅಕ್ರಮಕ್ಕೆ ಪೊಲೀಸರೇ ಸಾಥ್ ಕೊಟ್ಟಿರುವ ಶಂಕೆ
ಜೂಜಾಡುವ ದೃಶ್ಯ ಸೆರೆಯಾಗಿದೆ
Follow us on

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ (Male Mahadeshwara) ದೇವಾಲಯ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿದೆ. ಇಂತಹ ಸ್ಥಳಕ್ಕೆ ಭಕ್ತರ ದಂಡೇ ಹರಿದು ಬರುತ್ತದೆ. ಭಕ್ತಿ ಭಾವದಿಂದ ದೇವರ ಮೊರೆ ಹೋಗುತ್ತಾರೆ. ಕಷ್ಟಗಳನ್ನು ನಿಭಾಯಿಸುವ ಶಕ್ತಿ ನೀಡೆಂದು ಭಕ್ತರು ಮಹದೇಶ್ವರನ ಬಳಿ ಅಂಗಲಾಚುತ್ತಾರೆ. ಇಂತಹ ಪುಣ್ಯಕ್ಷೇತ್ರದಲ್ಲಿ ಜೂಜಾಟ ಎಗ್ಗಿಲದೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮಹದೇಶ್ವರ ಬೆಟ್ಟದ ಜನತಾ ಕಾಲೋನಿ ಅಕ್ರಮ ಮದ್ಯ ಮಾರಾಟದ ಕೇಂದ್ರವಾಗಿತ್ತು. ಇದೀಗ ಜೂಜಾಟದ ತಾಣವೂ ಆಗಿದೆ ಅಂತ ಭಕ್ತರು ಆರೋಪಿಸುತ್ತಿದ್ದಾರೆ.

ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದ್ದಾರಂತೆ. ಭಗವಂತನ ಸನ್ನಿಧಿ ಅಕ್ರಮ ಚಟುವಟಿಕೆ ತಾಣವಾಗಿರುವುದು ಸರಿಯಲ್ಲ. ಇಂತಹ ಚಟುವಟಿಕೆ ನಡೆಸುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ಆದರೆ ಅಕ್ರಮಕ್ಕೆ ಪೊಲೀಸರೇ ಸಾಥ್ ಕೊಟ್ಟಿದ್ದಾರೆ ಎಂಬ ಅನುಮಾನ ಮೂಡಿದೆ. ಜೂಟಾಟದಲ್ಲಿ ತೊಡಗಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಜೂಜುಕೋರರು ಏಕ ಕಾಲಕ್ಕೆ ಲಕ್ಷ ಲಕ್ಷ ಜೂಜಾಡುತ್ತಿದ್ದಾರೆ.

ಜೂಜಾಟಕ್ಕೆ ಬೆಟ್ಟದಲ್ಲಿರುವ ಕೆಲ ಮನೆ ಮಾಲೀಕರೇ ಸಾಥ್ ನೀಡುತ್ತಿದ್ದಾರೆ ಎಂಬ ಎಂಬ ಆರೋಪ ಕೇಳಿಬಂದಿದೆ. ಸ್ಥಳೀಯರಷ್ಟೆ ಅಲ್ಲ, ನೆರೆಯ ತಮಿಳುನಾಡಿನ ಜೂಜು ಕೋರರು ಇಲ್ಲಿಗೆ ಬರುತ್ತಿದ್ದಾರಂತೆ. ಭಕ್ತರ ಸೋಗಿನಲ್ಲಿ ಬಂದು ಜೂಜಾಟ ನಡೆಸಿ ಹೋಗುತ್ತಿರುವ ಜನರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.

ಈ ಕುರಿತು ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತ ಜೂಜಾಟ ನಡೆಯುತ್ತಿರುವುದು ಸತ್ಯ. ಜೂಜಾಟ ಆಡುವುದು ಎಲ್ಲರಿಗೂ ಗೊತ್ತಿದೆ. ಆದರೆ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆಯುತ್ತಿಲ್ಲ. ತಮಡಗೇರಿ, ಪುದಗೇರಿ ಮತ್ತು ಜನತಾ ಕಾಲೋನಿಯಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಜೂಜಾಟದ ಬಗ್ಗೆ ಹಲವಾರು ಬಾರಿ ಸಂಬಂಧ ಪಟ್ಟವರ ಗಮನಕ್ಕೂ ತರಲಾಗಿದೆ. ಕ್ರಮ ಕೈಗೊಳ್ಳದೇ ಇದ್ದರೆ ನಾನೇನು ಮಾಡಲು ಸಾಧ್ಯವಿಲ್ಲ. ಆದರೆ ಇದು ಮಹದೇಶ್ವರ ಬೆಟ್ಟಕ್ಕೆ ಕೆಟ್ಟ ಹೆಸರು ತರುತ್ತಿದೆ ಎಂದು ನೋವಾಗುತ್ತದೆ ತಿಳಿಸಿದ್ದಾರೆ.

ಇದನ್ನೂ ಓದಿ

ಆನೇಕಲ್​ನಲ್ಲಿ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ದುರ್ಮರಣ, ಮೃತರ ಗುರುತು ಪತ್ತೆಯಾಗಿಲ್ಲ

ವಿದ್ಯುತ್ ಸ್ಪರ್ಶಿಸಿ ಹುಟ್ಟುಹಬ್ಬದ ದಿನವೇ ಮೂರು ವರ್ಷದ ಬಾಲಕಿ ಸಾವು

(Male mahadeshwara Hills some parts becoming gambling hotspot and suspection on police supports)