ಚಾಮರಾಜನಗರ: ಬಾಲಕಿ ಅಪಹರಿಸಿ ಲೈಂಗಿಕ ದೌರ್ಜನ್ಯ ಕೇಸ್; ಅಪರಾಧಿಗೆ 20 ವರ್ಷ ಜೈಲು, 5 ಲಕ್ಷ ದಂಡ

ಮಹದೇವಮ್ಮ ಎಂಬ ಮಹಿಳೆ ಅಪರಾಧಿ ಚಂದ್ರುಗೆ ಆಶ್ರಯ ನೀಡಿದ್ದಳು. ಹೀಗಾಗಿ ಆಕೆಗೂ 5 ವರ್ಷ ಕಠಿಣ ಶಿಕ್ಷೆ ಮತ್ತು ಎರಡು ಲಕ್ಷ ದಂಡ ವಿಧಿಸಲಾಗಿದೆ.

ಚಾಮರಾಜನಗರ: ಬಾಲಕಿ ಅಪಹರಿಸಿ ಲೈಂಗಿಕ ದೌರ್ಜನ್ಯ ಕೇಸ್; ಅಪರಾಧಿಗೆ 20 ವರ್ಷ ಜೈಲು, 5 ಲಕ್ಷ ದಂಡ
ಮಹದೇವಮ್ಮ, ಅಪರಾಧಿ ಚಂದ್ರಶೇಖರ್

ಚಾಮರಾಜನಗರ: 2018ರಲ್ಲಿ ಬಾಲಕಿ ಅಪಹರಿಸಿ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ. ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ನೀಡಿದ್ದ ಯುವಕ ಚಂದ್ರು ಅಲಿಯಾಸ್ ಚಂದ್ರಶೇಖರ್​ಗೆ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ಮತ್ತು 5 ಲಕ್ಷ ದಂಡ ವಿಧಿಸಿದೆ. ಜೊತೆಗೆ ಚಂದ್ರುಗೆ ಆಶ್ರಯ ಕೊಟ್ಟಿದ್ದ ಮಹಿಳೆಗೆ 5 ವರ್ಷ ಕಠಿಣ ಶಿಕ್ಷೆ ವಿಧಿಸಿ ಚಾಮರಾಜನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ಮಹದೇವಮ್ಮ ಎಂಬ ಮಹಿಳೆ ಅಪರಾಧಿ ಚಂದ್ರುಗೆ ಆಶ್ರಯ ನೀಡಿದ್ದಳು. ಹೀಗಾಗಿ ಆಕೆಗೂ 5 ವರ್ಷ ಕಠಿಣ ಶಿಕ್ಷೆ ಮತ್ತು ಎರಡು ಲಕ್ಷ ದಂಡ ವಿಧಿಸಲಾಗಿದೆ. 2018ರಲ್ಲಿ ಅಪ್ರಾಪ್ತ ಬಾಲಕಿಯನ್ನ ಅಪಹರಿಸಿ ಮನೆಯೊಂದರಲ್ಲಿ ಇರಿಸಿಕೊಂಡು ಲೈಂಗಿಕ ಕ್ರಿಯೆ ನಡೆಸಲಾಗಿತ್ತು. 2018ರಲ್ಲಿ ಬಾಲಕಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಮೂರು ವರ್ಷಗಳಿಂದ ತನಿಖೆ ನಡೆಸಿದ ಬಳಿಕ ನ್ಯಾಯಾಲಯ ಅಪರಾಧಿಗೆ ಶಿಕ್ಷೆ ಪ್ರಕಟಿಸಿದೆ. ನ್ಯಾಯಮೂರ್ತಿ ಸದಾಶಿವ ಎಸ್.ಸುಲ್ತಾನ್ ಪುರೆ ಅವರು ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ನೀಡಿದ್ದಾರೆ. ಅಪರಾಧಿ ಚಂದ್ರು ಚಾಮರಾಜನಗರ ಪಟ್ಟಣದ ಮೇಗಲ ಉಪ್ಪಾರ ಬಡಾವಣೆ ನಿವಾಸಿಯಾಗಿದ್ದಾನೆ. ಇನ್ನು ಚಂದ್ರುಗೆ ಆಶ್ರಯ ನೀಡಿದ್ದ ಮಹಿಳೆ ಮಹದೇವಮ್ಮ ಚಾಮರಾಜನಗರ ತಾಲೂಕಿನ ಕೋಡಿಮೊಳೆ ಗ್ರಾಮದವಳಾಗಿದ್ದಾಳೆ.

ಇನ್ನು 2019ರಲ್ಲಿ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗೆ 25 ವರ್ಷ ಜೈಲು ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಲಾಗಿದೆ. ಶಿಕ್ಷೆ ವಿಧಿಸಿ ಕೋಲಾರ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶ ನೀಡಿದೆ.

ಇದನ್ನೂ ಓದಿ

ಭೂಸ್ವಾಧೀನ ಪರಿಹಾರದ ಹಣ ನೀಡಲು ಲಂಚಕ್ಕೆ ಬೇಡಿಕೆ; ಲಂಚ ಸ್ವೀಕರಿಸಿದ ಮೂವರು ಎಸಿಬಿ ಅಧಿಕಾರಿಗಳ ಬಲೆಗೆ

ಮಂಗಳೂರು: ಫಾರ್ಮ್​ ಹೌಸ್​ ಕೆರೆಯಲ್ಲಿ ಮಾಡೆಲ್​ ಸಾವು; ವೈದ್ಯಕೀಯ ಶಿಕ್ಷಣ ಮುಗಿಸಿ ಕೃಷಿ ಅಧ್ಯಯನಕ್ಕೆ ಬಂದಿದ್ದ ಯುವತಿ

(A court has sentenced young man to sexually assaulting a girl in Chamarajanagar)

Click on your DTH Provider to Add TV9 Kannada