ಭೂಸ್ವಾಧೀನ ಪರಿಹಾರದ ಹಣ ನೀಡಲು ಲಂಚಕ್ಕೆ ಬೇಡಿಕೆ; ಲಂಚ ಸ್ವೀಕರಿಸಿದ ಮೂವರು ಎಸಿಬಿ ಅಧಿಕಾರಿಗಳ ಬಲೆಗೆ
ಪರಿಹಾರ ಹಣ ನೀಡಲು 6 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಚಿತ್ರದುರ್ಗದ ಭೂಸ್ವಾಧೀನ ವಿಶೇಷಾಧಿಕಾರಿ ವಿರೇಶಕುಮಾರ್, ಮ್ಯಾನೇಜರ್ ಮೋಹನ್, ಚಾಲಕ ಮನ್ಸೂರ್ ಅನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಚಿತ್ರದುರ್ಗ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆ ಭೂಸ್ವಾಧೀನ ಪರಿಹಾರದ ಹಣ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಮೂವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಪರಿಹಾರ ಹಣ ನೀಡಲು 6 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಚಿತ್ರದುರ್ಗದ ಭೂಸ್ವಾಧೀನ ವಿಶೇಷಾಧಿಕಾರಿ ವಿರೇಶಕುಮಾರ್, ಮ್ಯಾನೇಜರ್ ಮೋಹನ್, ಚಾಲಕ ಮನ್ಸೂರ್ ಅನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಭೂಸ್ವಾಧೀನ ಪರಿಹಾರದ ಹಣ ನೀಡಲು ಹಿರಿಯೂರಿನ ನೇತ್ರಾ ಕರಿಯಪ್ಪರಿಂದ ಲಂಚ ಪಡೆದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಎಸಿಬಿ ಡಿವೈಎಎಸ್ಪಿ ಬಸವರಾಜ, ಪಿಐ ಪ್ರವೀಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಸದ್ಯ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು: ಫುಟ್ಬಾಲ್ ಗ್ರೌಂಡ್‌ನಲ್ಲಿ ರೌಡಿಶೀಟರ್ ಕೊಲೆ ಪ್ರಕರಣ; ನಾಲ್ವರು ಕೊಲೆ ಆರೋಪಿಗಳನ್ನು ಬಂಧಿಸಿದ ಪೊಲೀಸರು ಅಶೋಕ್ ನಗರದ ಫುಟ್ಬಾಲ್ ಗ್ರೌಂಡ್‌ನಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಅರೋಪಿಗಳನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ರೌಡಿ ಶೀಟರ್ ಅರವಿಂದನನ್ನು ಕೊಲೆ ಮಾಡಿದ್ದ ಆರೋಪದ ಮೇಲೆ ಸ್ಟಾಲಿನ್, ವಿಜಯ್, ಅರುಣ್ ಮತ್ತು ಜಾಕ್ ರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ತಲೆಮರಿಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ.
ಸ್ಟಾಲಿನ್ ಪೂರ್ವ ವಿಭಾಗದ ರೌಡಿ ಶೀಟರ್, ಪದೇ ಪದೇ ನಮ್ಮನ್ನು ಅಟ್ಯಾಕ್ ಮಾಡಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಹಿಂದೆ ಹಲವು ಬಾರಿ ಸ್ಟಾಲಿನ್, ವಿಜಯ್ ಸೇರಿದಂತೆ ಹಲವರ ಮೇಲೆ ಹಲ್ಲೆ ಮಾಡಿದ್ದ ಅರವಿಂದ್ ಕುರಿತು ಭಾರತಿನಗರ ಪುಲಕೇಶಿ ನಗರ ಠಾಣೆಗೆ ದೂರು ಸಹ ನೀಡಲಾಗಿತ್ತು ಎಂದು ಆರೋಪಿಗಳು ತಿಳಿಸಿದ್ದಾರೆ.
ಪ್ರಕರಣದಲ್ಲಿ ಪೊಲೀಸರು ಅರವಿಂದನನ್ನು ಬಂಧಿಸಿದ್ದರು. ಆದರೆ ಜೈಲಿನಿಂದ ಹೊರಬಂದ ನಂತರ ಮತ್ತೆ ಹಲ್ಲೆ ಮಾಡುತ್ತಿದ್ದ. ಹೀಗಾಗಿ ಅರವಿಂದ್ ಜೈಲಿನಿಂದ ಬಂದಾಗಿನಿಂದ ಕೊಲೆಗೆ ಸ್ಕೆಚ್ ಹಾಕಿದ್ದೇವು. ಅರವಿಂದನನ್ನು ಹಾಗೆ ಬಿಟ್ಟರೆ ನಮ್ಮನ್ನು ಬಿಡಲ್ಲಾ ಎಂದು ಕೊಲೆ ಮಾಡಲಾಗಿದೆ ಎಂದು ಆರೋಪಿಗಳು ತನಿಖೆ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ: ಕಾರ್ಮಿಕ ಇಲಾಖೆ ಕಚೇರಿ ಮೇಲೆ ಎಸಿಬಿ ದಾಳಿ; ದಾಖಲೆ ಇಲ್ಲದ 1.54 ಲಕ್ಷ ನಗದು ಪತ್ತೆ
ಜಮೀನಿನ ಬೌಂಡರಿ ಲೈನ್ ಫಿಕ್ಸ್ ಮಾಡಲು 70 ಲಕ್ಷ ಲಂಚಕ್ಕೆ ಬೇಡಿಕೆ: ಎಸಿಬಿ ದಾಳಿ, ಹಿರಿಯ ರೆವೆನ್ಯೂ ಅಧಿಕಾರಿ ಅರೆಸ್ಟ್
Published On - 10:14 am, Wed, 15 September 21