ಜಮೀನಿನ ಬೌಂಡರಿ ಲೈನ್ ಫಿಕ್ಸ್ ಮಾಡಲು 70 ಲಕ್ಷ ಲಂಚಕ್ಕೆ ಬೇಡಿಕೆ: ಎಸಿಬಿ ದಾಳಿ, ಹಿರಿಯ ರೆವೆನ್ಯೂ ಅಧಿಕಾರಿ ಅರೆಸ್ಟ್
ದಾಳಿ ವೇಳೆ ಎಸಿಬಿ ಅಧಿಕಾರಿಗಳು ಆನಂದ್ ಮನೆಯಲ್ಲಿ 25.30 ಲಕ್ಷ ನಗದು, 70 ಲಕ್ಷ ಮೊತ್ತದ ಮೂರು ಚೆಕ್ ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. DDLR ಕುಸುಮಾ ಲತಾ ಮನೆಯಲ್ಲಿ ಏನೂ ಸಿಕ್ಕಿಲ್ಲ. ಸರ್ವೆಯರ್ ಶ್ರೀನಿವಾಸ್ ಮನೆಯಲ್ಲಿ ಕೆಲ ದಾಖಲೆಗಳನ್ನು ಸೀಜ್ ಮಾಡಿದ್ದಾರೆ. ಎಸಿಬಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.
ಬೆಂಗಳೂರು: ಲಂಚದ ಹಾವಳಿಗೆ ಕೊನೆ ಮೊದಲಿಲ್ಲ. ಜಮೀನಿನ ಬೌಂಡರಿ ಲೈನ್ ಫಿಕ್ಸ್ ಮಾಡಲು ಲಂಚಕ್ಕೆ ಬೇಡಿಕೆಯೊಡ್ಡಿದ್ದ ಉನ್ನತ ಅಧಿಕಾರಿ ಮತ್ತು ಆತನ ಸಹಾಯಕ ಸಿಬ್ಬಂದಿಯನ್ನು ಎಸಿಬಿ ಅಧಿಕಾರಿಗಳು ವ್ಯವಸ್ಥಿತವಾಗಿ ದಾಳಿ ಮಾಡಿ, ಅರೆಸ್ಟ್ ಮಾಡಿದ್ದಾರೆ. ಜಮೀನಿಗೆ ಗೆರೆ ಎಳೆಯಲು ಲಂಚಕ್ಕೆ ಕೈವೊಡ್ಡಿದ ಅಧಿಕಾರಿಯ ಹೆಸರು ಆನಂದ ಅಂತಾ, ಆತನ ಸಹಾಯಕ ಸಿಬ್ಬಂದಿಯ ಹೆಸರು ರಮೇಶ್. ಆನಂದ ರೆವೆನ್ಯೂ ಡಿಪಾರ್ಟ್ಮೆಂಟ್ನಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಲ್ಯಾಂಡ್ ರಿಕಾರ್ಡ್ (ADLR). ಈತ ಲಂಚಕ್ಕೆ ಬೇಡಿಕೆಯಿಟ್ಟಿದ್ದು ಬರೋಬ್ಬರಿ 70 ಲಕ್ಷ ರೂಪಾಯಿಗೆ.
ಈ ಸಂಬಂಧ ನಿನ್ನೆ ರಾತ್ರಿ ಬೆಂಗಳೂರಿನ ಮೂರು ಕಡೆ ಎಸಿಬಿ (ACB) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಮೀನು ಸರ್ವೆ ನಂ. 145, 146 ಸಂಬಂಧ ಲಂಚದಾಹ ಕಂಡುಬಂದಿತ್ತು. ಅಂತಾರಾಷ್ಟ್ರೀಯ ಏರ್ಪೋರ್ಟ್ಗೆ ಹತ್ತಿರವಿರುವ ಯಲಹಂಕ ತಾಲ್ಲೂಕಿನ ಕುದುರುಗೆರೆಯ ಜಮೀನು ಇದಾಗಿತ್ತು. ಇಲ್ಲಿನ ಜಮೀನಿನ ಬೌಂಡರಿ ಫಿಕ್ಸ್ ಮಾಡೋಕೆ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದು ಆನಂದ ಮಹಾಶಯ.
ಕಂದಾಯ ಇಲಾಖೆಯ ಉನ್ನತಾಧಿಕಾರಿ ಆನಂದ ಪ್ರಕರಣದಲ್ಲಿ ಅಡ್ವಾನ್ಸ್ ಆಗಿ 20 ಲಕ್ಷ ರೂ ಹಣ ಮತ್ತೊಂದಿಷ್ಟು ಬ್ಯಾಂಕ್ ಚೆಕ್ ಪಡೆದಿದ್ದ. ಇದರ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಎಸಿಬಿ ಅಧಿಕಾರಿಗಳು (Anti Corruption Bureau) ಕಾರ್ಯಾಚರಣೆಗೆ ಇಳಿದು ಎಸಿಬಿ ಆನಂದನ ಜಾಲಹಳ್ಳಿ ಮನೆ, DDLR ಕುಸುಮ ಲತಾ ಮನೆ ಮತ್ತು ಸರ್ವೆ ಅಧಿಕಾರಿ ಶ್ರೀನಿವಾಸ್ಗೆ ಸೇರಿದ ತುಮಕೂರಿನ ಮನೆ ಸೇರಿ ಮೂರು ಕಡೆ ದಾಳಿ ನಡೆಸಿದ್ದರು.
ದಾಳಿ ವೇಳೆ ಎಸಿಬಿ ಅಧಿಕಾರಿಗಳು ಆನಂದ್ ಮನೆಯಲ್ಲಿ 25.30 ಲಕ್ಷ ನಗದು, 70 ಲಕ್ಷ ಮೊತ್ತದ ಮೂರು ಚೆಕ್ ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. DDLR ಕುಸುಮಾ ಲತಾ ಮನೆಯಲ್ಲಿ ಏನೂ ಸಿಕ್ಕಿಲ್ಲ. ಸರ್ವೆಯರ್ ಶ್ರೀನಿವಾಸ್ ಮನೆಯಲ್ಲಿ ಕೆಲ ದಾಖಲೆಗಳನ್ನು ಸೀಜ್ ಮಾಡಿದ್ದಾರೆ. ಎಸಿಬಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.
ಇದನ್ನೂಓದಿ: ಲಕ್ಷ ರೂ ಲಂಚ ಕೇಳಿದ ಪೊಲೀಸರು, ಯುವಕ ಆತ್ಮಹತ್ಯೆ: ಪೊಲೀಸ್ ಕಾನ್ಸ್ಟೇಬಲ್, ಎಸ್ಐ ಸಸ್ಪೆಂಡ್
ರೇಪ್ ಮಾಡಿ ವಿಡಿಯೋ ಮಾಡಿದ್ದ ಕಾಮುಕರು ದೂರು ಕೊಡದಂತೆ ಬೆದರಿಸಿದ್ದರು; ಸ್ನೇಹಿತನಿಗೆ ಕಲ್ಲಿನಿಂದ ಹೊಡೆದಿದ್ದರು (rs 70 lakh bribe ACB raids on revenue department assistant director anand)
Published On - 10:19 am, Thu, 26 August 21