ಲಕ್ಷ ರೂ ಲಂಚ ಕೇಳಿದ ಪೊಲೀಸರು, ಯುವಕ ಆತ್ಮಹತ್ಯೆ: ಪೊಲೀಸ್​ ಕಾನ್ಸ್​​ಟೇಬಲ್, ಎಸ್​ಐ ಸಸ್ಪೆಂಡ್​

ಯುವಕನ ಸಾವಿನ ಬಳಿಕ ಕೃಷ್ಣಾ ಜಿಲ್ಲೆಯ ಎಸ್​ಪಿ ಸಿದ್ದಾರ್ಥ ಕೌಶಲ್​​ (Krishna district SP Siddarth Kaushal) ಅವರು ಕಾನ್ಸ್​​ಟೇಬಲ್​ ಶಿವರಾಮಕೃಷ್ಣ ಪ್ರಸಾದ್​ನನ್ನು ಅಮಾನತುಗೊಳಿಸಿದ್ದಾರೆ. ಬಳಿಕ, ಸಬ್​ಇನ್ಸ್​​​ಪೆಕ್ಟರ್​​ ದುರ್ಗಾಪ್ರಸಾದ್​ ರಾವ್​​ನನ್ನೂ ಸಸ್ಪೆಂಡ್​ ಮಾಡಿದ್ದಾರೆ.

ಲಕ್ಷ ರೂ ಲಂಚ ಕೇಳಿದ ಪೊಲೀಸರು, ಯುವಕ ಆತ್ಮಹತ್ಯೆ: ಪೊಲೀಸ್​ ಕಾನ್ಸ್​​ಟೇಬಲ್, ಎಸ್​ಐ ಸಸ್ಪೆಂಡ್​
ಲಕ್ಷ ರೂ ಲಂಚ ಕೇಳಿದ ಪೊಲೀಸರು, ಯುವಕ ಆತ್ಮಹತ್ಯೆ: ಪೊಲೀಸ್​ ಕಾನ್ಸ್​​ಟೇಬಲ್, ಎಸ್​ಐ ಸಸ್ಪೆಂಡ್​
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 12, 2021 | 9:35 AM

ಗೋದಾವರಿ: ಯುವಕನೊಬ್ಬ ಅಕ್ರಮವಾಗಿ ಸಾರಾಯಿ ಸಾಗಣೆ ಮಾಡಿದ್ದಾನೆ ಎಂದು ಆರೋಪಿಸಿ, ಪೊಲೀಸರು ಲಂಚ ಕೇಳಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣವನ್ನು ಇಲಾಖಾ ತನಿಖೆಗೆ ಒಪ್ಪಿಸಿ, ಸಂಬಂಧಪಟ್ಟ ಪೊಲೀಸ್​ ವರಿಷ್ಠಾಧಿಕಾರಿಯು ಲಂಚ ಕೇಳಿದ ಪೊಲೀಸ್​ ಕಾನ್ಸ್​​ಟೇಬಲ್ ಮತ್ತು ಪೇದೆಯ ಮೇಲೆ ನಿಗಾ ಇಡದ ಸಬ್​​ಇನ್ಸ್​​ಪೆಕ್ಟರ್​​​ನನ್ನು ಸಸ್ಪೆಂಡ್​ ಮಾಡಿದ್ದಾರೆ. 2 ವರ್ಷಗಳ ಹಿಂದಿನ ಹಳೆಯ ಪ್ರಕರಣವೊಂದರಲ್ಲಿ 23 ವರ್ಷದ ಸದರಿ ಯುವಕನಿಂದ ಪೊಲೀಸ್​ ಕಾನ್ಸ್​​ಟೇಬಲ್​ (police constable) ಮೊದಲು ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಬಳಿಕ ಅಷ್ಟು ಮೊತ್ತ ನೀಡಲಿಲ್ಲವೆಂದರೆ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿದ್ದ ಎಂದು ತಿಳಿದುಬಂದಿದೆ.

ಮೃತ ಯುವಕನನ್ನು ಪಿ. ಮಜ್ಜಿ ಎಂದು ಗುರುತಿಸಲಾಗಿದ್ದು, ಈತ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿ ಗ್ರಾಮೀಣ ಮಂಡಲದ ಪಿಡಿಮಗೋಯಿ ಗ್ರಾಮದ ನಿವಾಸಿ (Pidimgoyyi village, Rajahmundry) ಎಂದು ತಿಳಿದುಬಂದಿದೆ. ಯುವಕ ಮಜ್ಜಿ ತೆಲಂಗಾಣದಿಂದ ಆಂಧ್ರ ಪ್ರದೇಶಕ್ಕೆ ಎರಡು ಸಾರಾಯಿ ಬಾಟಲ್​ಗಳನ್ನು ಅಕ್ರಮವಾಗಿ ಸಾಗಿಸಿದ್ದಾನೆ ಎಂದು ಕೃಷ್ಣಾ ಜಿಲ್ಲೆಯ ಚಿಲಕಲು ಪೊಲೀಸ್​ ಠಾಣೆಯಲ್ಲಿ 2020 ನೇ ಸಾಲಿನಲ್ಲಿ ಪ್ರಕರಣವೊಂದು ದಾಖಲಾಗಿತ್ತು.

ಒಂದು ವರ್ಷದ ಬಳಿಕ ಚಿಲಕಲು ಪೊಲೀಸ್​ ಠಾಣೆಯ ಕಾನ್ಸ್​​ಟೇಬಲ್​ ಶಿವರಾಮಕೃಷ್ಣ ಪ್ರಸಾದ್ ಎಂಬಾತ ಪ್ರಕರಣದ ಸಂಬಂಧ ಠಾಣೆಗೆ ಬರುವಂತೆ ​ಯುವಕ ಮಜ್ಜಿಗೆ ಸೂಚಿಸಿದ್ದರು. ಅದರಂತೆ ಆತ ಮಂಗಳವಾರ ಠಾಣೆಗೆ ತೆರಳಿದ್ದ. ಆ ವೇಳೆ ಮಜ್ಜಿ ವಿರುದ್ಧ ಪ್ರಕರಣ ಕೈಬಿಡಲು ಒಂದು ಲಕ್ಷ ರೂಪಾಯಿ ನೀಡುವಂತೆ ಸತಾಯಿಸಿದ್ದಾನೆ. ಇಲ್ಲವಾದಲ್ಲಿ ಡ್ರಗ್ಸ್​​ ಕೇಸ್​​ನಲ್ಲಿ ಫಿಟ್​​ ಮಾಡುವುದಾಗಿ ಧಮ್ಕಿ ಹಾಕಿ, ಕಾನ್ಸ್​​ಟೇಬಲ್​ ಬೆದರಿಸಿದ್ದಾನೆ.

ಕಾನ್ಸ್​​ಟೇಬಲ್​ ಶಿವರಾಮಕೃಷ್ಣ ಪ್ರಸಾದ್ ಬೆದರಿಕೆ, ಒತ್ತಡ ತಾಳಲಾರದೆ ಮಜ್ಜಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ರಾಜಮಂಡ್ರಿಗೆ ಮರಳಿದವನೆ ಸೆಲ್ಫಿ ವಿಡಿಯೋ ಮಾಡಿಟ್ಟು, ಅದರಲ್ಲಿ ಆದ್ಯಂತವಾಗಿ ಪ್ರಕರಣದ ವಿವರಣೆ ಹೇಳಿಕೊಂಡಿದ್ದಾನೆ. ಅದೇ ರಾತ್ರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯುವಕನ ಸಾವಿನ ಬಳಿಕ ಕೃಷ್ಣಾ ಜಿಲ್ಲೆಯ ಎಸ್​ಪಿ ಸಿದ್ದಾರ್ಥ ಕೌಶಲ್​​ (Krishna district SP Siddarth Kaushal) ಅವರು ಕಾನ್ಸ್​​ಟೇಬಲ್​ ಶಿವರಾಮಕೃಷ್ಣ ಪ್ರಸಾದ್​ನನ್ನು ಅಮಾನತುಗೊಳಿಸಿದ್ದಾರೆ. ಬಳಿಕ, ಸಬ್​ಇನ್ಸ್​​​ಪೆಕ್ಟರ್​​ ದುರ್ಗಾಪ್ರಸಾದ್​ ರಾವ್​​ನನ್ನೂ ಸಸ್ಪೆಂಡ್​ ಮಾಡಿದ್ದಾರೆ.

ಕಾಫಿ ವ್ಯಾಪಾರದಲ್ಲಿ 1 ಕೋಟಿ ನಷ್ಟ: ಚಿಕ್ಕಮಗಳೂರಿನ ವ್ಯಾಪಾರಿ ಬೆಂಗಳೂರಿನಲ್ಲಿ ಆತ್ಮಹತ್ಯೆ

(Pidimgoyyi Youth Majji suicide as constable demand 1 lakh bribe Krishna district SP Siddarth Kaushal suspends constable si)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ