Kinnaur Landslide: ಹಿಮಾಚಲ ಪ್ರದೇಶದ ಭೂಕುಸಿತದಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆ; ಮಣ್ಣಿನಡಿ ಸಿಲುಕಿರುವ ಬಸ್
ಭೂಕುಸಿತ ಉಂಟಾಗುವ ಮೊದಲು ಗುಡ್ಡ ಪ್ರದೇಶದ ಪುಟ್ಟಪುಟ್ಟ ಕಲ್ಲುಗಳೆಲ್ಲ ನದಿಗೆ ಬಿದ್ದವು. ಅದಾದ ನಂತರ ಪರ್ವತಗಳ ದೊಡ್ಡದೊಡ್ಡ ಭಾಗಗಳೇ ಕುಸಿದು ರಾಷ್ಟ್ರೀಯ ಹೆದ್ದಾರಿಯ ಮೇಲೆ ಮತ್ತು ಸಮೀಪವೇ ಹರಿಯುತ್ತಿರುವ ನದಿಯಲ್ಲಿ ಬಿದ್ದಿವೆ.
ಹಿಮಾಚಲ ಪ್ರದೇಶದ ಕಿನೌರ್ ಭೂಕುಸಿತ (Kinnaur Landslide)ದಲ್ಲಿ ಮೃತಪಟ್ಟವರ ಸಂಖ್ಯೆ ಇಂದು ಬೆಳಗ್ಗೆ ಹೊತ್ತಿಗೆ 13ಕ್ಕೆ ಏರಿಕೆಯಾಗಿದೆ ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಯ ಡೆಪ್ಯೂಟಿ ಕಮಾಂಡಂಟ್ ಧರ್ಮೇಂದ್ರ ಠಾಕೂರ್ ತಿಳಿಸಿದ್ದಾರೆ. ಇನ್ನು 13 ಜನರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದ್ದು, ಅವರನ್ನೆಲ್ಲ ಸಿಎಚ್ಸಿ ಭವನಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ. ಕಿನೌರ್ ಭೂಕುಸಿತ(Kinnaur Landslide)ದಿಂದ ಒಂದು ಬಸ್ ಮತ್ತು ಬೊಲೆರೋ ವಾಹನ ಕಾಣದಂತಾಗಿದೆ. ಅದರಲ್ಲಿದ್ದ ಜನರು ಎಷ್ಟು ಜನ ಬದುಕುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದೂ ಧರ್ಮೇದ್ರ ಠಾಕೂರ್ ಮಾಹಿತಿ ನೀಡಿದ್ದಾರೆ.
ನಿನ್ನೆ ಹಿಮಾಚಲ ಪ್ರದೇಶದ ಕಿನೌರ್ನಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿತ್ತು. ಇದರಿಂದಾಗಿ ಬಸ್ ಸೇರಿ, ಕೆಲವು ವಾಹನಗಳು ಮಣ್ಣಿನಡಿ ಹೂತುಹೋಗಿವೆ. ರೆಕಾಂಗ್ ಪಿಯೋದಿಂದ ಶಿಮ್ಲಾ ಮೂಲಕ ಹರಿದ್ವಾರಕ್ಕೆ ರಾಷ್ಟ್ರೀಯ ಹೆದ್ದಾರಿ 5ರಲ್ಲಿ ಸಾಗುತ್ತಿದ್ದ ಎಚ್ಆರ್ಟಿಸಿ ಬಸ್ಗೆ ನಿಶ್ಚರ್ ತೆಹ್ಸಿಲ್ನ ನಿಗುಲ್ಸಾರಿ ಬಳಿ ದೊಡ್ಡದಾದ ಬಂಡೆಯೊಂದು ಅಪ್ಪಳಿಸಿ, ಅವಘಡ ಸಂಭವಿಸಿದೆ. ಈ ದುರ್ಘಟನೆಯ ವಿಡಿಯೋ ಕ್ಲಿಪ್ ಕೂಡ ವೈರಲ್ ಆಗಿದೆ.
The news of landslide incident in Kinnaur district of Himachal Pradesh is horrible. Many people are said to be trapped in the debris.
ITBP teams are engaged in rescue work. I pray to God for everyone’s well being.@BJP4Himachal @CMOFFICEHP @iSureshBjp @HMOIndia @saudansinghbjp pic.twitter.com/dYblxkSAfA
— Abhishek Dhawan (@DAbhishekBJP) August 11, 2021
ಭೂಕುಸಿತ ಉಂಟಾಗುವ ಮೊದಲು ಗುಡ್ಡ ಪ್ರದೇಶದ ಪುಟ್ಟಪುಟ್ಟ ಕಲ್ಲುಗಳೆಲ್ಲ ನದಿಗೆ ಬಿದ್ದವು. ಅದಾದ ನಂತರ ಪರ್ವತಗಳ ದೊಡ್ಡದೊಡ್ಡ ಭಾಗಗಳೇ ಕುಸಿದು ರಾಷ್ಟ್ರೀಯ ಹೆದ್ದಾರಿಯ ಮೇಲೆ ಮತ್ತು ಸಮೀಪವೇ ಹರಿಯುತ್ತಿರುವ ನದಿಯಲ್ಲಿ ಬಿದ್ದಿವೆ. ನಿನ್ನೆ ಅವಘಡ ನಡೆದ ಕೂಡಲೇ ಎನ್ಡಿಆರ್ಎಫ್ ಸೇರಿ ಇತರ ರಕ್ಷಣಾ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿತ್ತು. ಆದರೆ ರಾತ್ರಿ 10ಗಂಟೆಗೆ ನಿಲ್ಲಿಸಬೇಕಾಯಿತು. ನಿನ್ನೆ 10 ಶವಗಳನ್ನು ಹೊರತೆಗೆಯಲಾಗಿತ್ತು. ಇಂದು ಮುಂಜಾನೆಯಿಂದ ಮತ್ತೆ ಕಾರ್ಯಾಚರಣೆ ಶುರುವಾಗಿದ್ದು, ಇಲ್ಲಿಯವರೆಗೆ ಒಟ್ಟು 13 ಮೃತದೇಹಗಳನ್ನು ಅವಶೇಷಗಳ ಅಡಿಯಿಂದ ಹೊರ ತೆಗೆಯಲಾಗಿದೆ.
A team of the National Disaster Response Force (NDRF) engaged in search and rescue operation at Kinnaur landslide site in Himachal Pradesh
Death toll in the incident is 13 pic.twitter.com/f0gRZtxfDD
— ANI (@ANI) August 12, 2021
ಇದನ್ನೂ ಓದಿ: Coronavirus cases in India: ದೇಶದಲ್ಲಿ 41,195 ಹೊಸ ಕೊವಿಡ್ ಪ್ರಕರಣ ಪತ್ತೆ, 490 ಮಂದಿ ಸಾವು
Published On - 9:58 am, Thu, 12 August 21