AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿಗಾಗಿ ದೇಗುಲವನ್ನೇ ಕಟ್ಟಿಸಿ, ಪೂಜಿಸುತ್ತಿರುವ ಮಹಿಳೆ; ಪ್ರತಿ ಹುಣ್ಣಿಮೆಯಂದು ಬಡವರಿಗೆ ಊಟ

ನನ್ನ ಪತಿ ಬದುಕಿದ್ದಾಗಲೂ ನಾನು ಅವರನ್ನು ದೇವರೆಂದೇ ಭಾವಿಸಿದ್ದೆ. ಈಗ ಅವರ ಅಮೃತಶಿಲೆಯ ವಿಗ್ರಹ ತಯಾರಿಸಿ ಸ್ಥಾಪಿಸಿ, ದೇಗುಲ ನಿರ್ಮಿಸಿದ್ದೇನೆ.  ಅಂಕಿರೆಡ್ಡಿಯವರ ಜನ್ಮದಿನ ಸೇರಿ ಉಳಿದ ಕೆಲವು ವಿಶೇಷ ದಿನಗಳಲ್ಲಿ ವಿಗ್ರಹಕ್ಕೆ ಅಭಿಷೇಕ, ವಿಶೇಷ ಪೂಜೆ ನಡೆಯುತ್ತದೆ ಎಂದು ಪದ್ಮಾವತಿ ಹೇಳಿದ್ದಾರೆ.ಆ

ಪತಿಗಾಗಿ ದೇಗುಲವನ್ನೇ ಕಟ್ಟಿಸಿ, ಪೂಜಿಸುತ್ತಿರುವ ಮಹಿಳೆ; ಪ್ರತಿ ಹುಣ್ಣಿಮೆಯಂದು ಬಡವರಿಗೆ ಊಟ
ಪತಿಯ ವಿಗ್ರಹಕ್ಕೆ ಪೂಜಿಸುತ್ತಿರುವ ಮಹಿಳೆ
TV9 Web
| Edited By: |

Updated on:Aug 12, 2021 | 10:25 AM

Share

ವಿಜಯವಾಡ: ಪತಿಯೇ ದೇವರೆಂದು ಪೂಜಿಸುವ ಮಹಿಳೆಯರು ಈಗಲೂ ಅನೇಕರಿದ್ದಾರೆ. ತನ್ನ ಪತಿಯ ಆಯಸ್ಸು ಹೆಚ್ಚಲೆಂದು ವ್ರತ, ಪೂಜೆ ಮಾಡುವವರಿಗೂ ಕಡಿಮೆ ಇಲ್ಲ. ಆದರೆ ಈ ಮಹಿಳೆ ಇನ್ನೂ ತುಸು ವಿಭಿನ್ನವೆನಿಸುತ್ತಾರೆ. ನಾಲ್ಕು ವರ್ಷಗಳ ಹಿಂದೆ ಅಪಘಾತದಲ್ಲಿ ಮಡಿದ ಪತಿಗಾಗಿ ದೇಗುಲವನ್ನು ಕಟ್ಟಿ, ಅವರ ಮೂರ್ತಿಯೊಂದನ್ನು ಇಟ್ಟು ಪ್ರತಿದಿನ ಪೂಜಿಸುತ್ತಾರೆ. ಆಂಧ್ರಪ್ರದೇಶದ ಪ್ರಕಾಸಂ ಜಿಲ್ಲೆಯಲ್ಲಿ ಕಂಡುಬರುವ ದೃಶ್ಯ ಇದು.

ಮಹಿಳೆಯ ಹೆಸರು ಪದ್ಮಾವತಿ. ಇವರ ಪತಿಯ ಹೆಸರು ಅಂಕಿರೆಡ್ಡಿ. ಆದರೆ ನಾಲ್ಕು ವರ್ಷಗಳ ಹಿಂದೆ ಅಂಕಿರೆಡ್ಡಿ ಒಂದು ಅಪಘಾತದಲ್ಲಿ ತೀರಿಕೊಂಡಿದ್ದಾರೆ. ಅದಾದ ಮೇಲೆ ಪತಿಯ ಪ್ರತಿಮೆಯನ್ನು ಇಟ್ಟು ಪೂಜಿಸುತ್ತಿದ್ದಾರೆ ಪದ್ಮಾವತಿ. ಇವರು ತುಂಬ ಸಂಪ್ರದಾಯಸ್ಥ ಕುಟುಂಬದವರು. ಪದ್ಮಾವತಿಯವರ ತಾಯಿ ದಿನವೂ ತನ್ನ ಗಂಡನಿಗೆ ನಮಸ್ಕರಿಸಿ, ಪೂಜೆ ಮಾಡುತ್ತಿದ್ದರು. ಅದನ್ನೇ ತಮ್ಮ ಬದುಕಲ್ಲೂ ಪದ್ಮಾವತಿ ಅಳವಡಿಸಿಕೊಂಡಿದ್ದಾರೆ. ಪತಿ ತೀರಿಕೊಂಡಾಗ ತುಂಬ ಕುಗ್ಗಿಹೋಗಿದ್ದೆ. ಪತಿ ತೀರಿಕೊಂಡ ದುಃಖ ಮರೆಯಬೇಕು ಎಂದು ಎಷ್ಟೇ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ. ನಂತರದ ಪತಿಯದ್ದೇ ಕನಸು ಬೀಳಲು ಶುರುವಾಯಿತು. ಕನಸಲ್ಲಿ ಬಂದು ನನಗಾಗಿ ಒಂದು ದೇವಸ್ಥಾನ ಕಟ್ಟುವಂತೆ ಕೇಳಿಕೊಂಡಂತೆ ಆಯಿತು. ಹಾಗಾಗಿ ಪತಿಗಾಗಿ ದೇಗುಲ ಕಟ್ಟಿ ಪೂಜಿಸಲು ಪ್ರಾರಂಭಿಸಿದೆ ಎಂದು ಪದ್ಮಾವತಿ ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ನನ್ನ ಪತಿ ಬದುಕಿದ್ದಾಗಲೂ ನಾನು ಅವರನ್ನು ದೇವರೆಂದೇ ಭಾವಿಸಿದ್ದೆ. ಈಗ ಅವರ ಅಮೃತಶಿಲೆಯ ವಿಗ್ರಹ ತಯಾರಿಸಿ ಸ್ಥಾಪಿಸಿ, ದೇಗುಲ ನಿರ್ಮಿಸಿದ್ದೇನೆ.  ಅಂಕಿರೆಡ್ಡಿಯವರ ಜನ್ಮದಿನ ಸೇರಿ ಉಳಿದ ಕೆಲವು ವಿಶೇಷ ದಿನಗಳಲ್ಲಿ ವಿಗ್ರಹಕ್ಕೆ ಅಭಿಷೇಕ, ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ಹುಣ್ಣಿಮೆಯ ದಿನ ಈ ದೇಗುಲದಲ್ಲಿ ಬಡಜನರಿಗೆ ಊಟ ಹಾಕಲಾಗುತ್ತದೆ. ಅಂಕಿರೆಡ್ಡಿಯವರ ಸ್ನೇಹಿತ ತಿರುಪತಿ ರೆಡ್ಡಿಯವರೊಂದಿಗೆ ಸೇರಿ, ನಮ್ಮ ಮಗ ಶಿವಶಂಕರ್​ ರೆಡ್ಡಿ ಈ ದೇಗುಲದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾನೆ ಎಂದು ಪದ್ಮಾವತಿ ತಿಳಿಸಿದ್ದಾರೆ.

ಇದರಂತೆ ತೆಲಂಗಾಣದಲ್ಲಿ ವ್ಯಕ್ತಿಯೊಬ್ಬ ತನ್ನ ಅಜ್ಜನಿಗಾಗಿ ದೇಗುಲ ಕಟ್ಟಿಸಿದ್ದಾನೆ. ವಿಕಾರಬಾದ್​​ ಜಿಲ್ಲೆಯ ನವಲ್ದಾ ಎಂಬ ಹಳ್ಳಿಯ ಮೊಗುಲಪ್ಪಾರಿಗೆ ಅವರು ಬೆಳೆಸಿದ ಮೊಮ್ಮಗ ಈಶ್ವರ ದೇಗುಲ ಕಟ್ಟಿದ್ದಾನೆ. ಮೊಗಲುಪ್ಪಾ 2013ರಲ್ಲಿ ಮೃತಪಟ್ಟಾಗ ಈಶ್ವರ ಅವರಿಗೆ ತಡೆಯಲಾಗದಷ್ಟು ದುಃಖವಾಗಿತ್ತು. ಕೊನೆಗೆ 24 ಲಕ್ಷ ರೂಪಾಯಿ ವೆಚ್ಚದಲ್ಲಿ ಅಜ್ಜನಿಗಾಗಿ ದೇಗುಲ ಕಟ್ಟಿದ್ದಾರೆ.

ಇದನ್ನೂ ಓದಿ: Mandya: ವೈದ್ಯನ ನಿರ್ಲಕ್ಷ್ಯದಿಂದ ಯುವಕ ಸಾವು ಆರೋಪ; ಕ್ಲಿನಿಕ್ ಎದುರು ಶವ ಇಟ್ಟು ಯುವಕನ ಕುಟುಂಬಸ್ಥರ ಧರಣಿ

Published On - 8:53 am, Thu, 12 August 21

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?