EOS-03: ಭೂಚಲನೆ ಅವಲೋಕಿಸುವ ಇಒಎಸ್-03 ಯಶಸ್ವಿ ಉಡಾವಣೆ, ಫೋಟೋ ಹಂಚಿಕೊಂಡ ಇಸ್ರೋ
ಇಒಎಸ್-3 ಉಪಗ್ರಹವು ಪ್ರವಾಹ, ಚಂಡಮಾರುತ ಸೇರಿ ಪ್ರಾಕೃತಿಕ ವಿಕೋಪಗಳನ್ನು ಮುಂದಾಗಿ ಗ್ರಹಿಸಲು ಭೂಚಲನೆಯ ಗತಿ ಅವಲೋಕಿಸಲಿದೆ. ಇದನ್ನು ಜಿಯೋಸಿಂಕ್ರೋನಸ್ ಸೆಟಲೈಟ್ ಲಾಂಚ್ ವೆಹಿಕಲ್-ಎಫ್10 ಮೂಲಕ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಎಸ್‌ಡಿಎಸ್‌ಸಿಯ 2ನೇ ಲಾಂಚ್‌ಪ್ಯಾಡ್‌ನಿಂದ ಹೊತ್ತೊಯ್ಯದಿದೆ.
ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಯ ಭೂಮಿಯ ಅವಲೋಕನ ಉಪಗ್ರಹ ಇಒಎಸ್-3(EOS-3) ಗುರುವಾರ ಬೆಳಗ್ಗೆ 5.43ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ(ಎಸ್‌ಡಿಎಸ್‌ಸಿ)ದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ.
ಇಒಎಸ್-3 ಉಪಗ್ರಹವು ಪ್ರವಾಹ, ಚಂಡಮಾರುತ ಸೇರಿ ಪ್ರಾಕೃತಿಕ ವಿಕೋಪಗಳನ್ನು ಮುಂದಾಗಿ ಗ್ರಹಿಸಲು ಭೂಚಲನೆಯ ಗತಿ ಅವಲೋಕಿಸಲಿದೆ. ಇದನ್ನು ಜಿಯೋಸಿಂಕ್ರೋನಸ್ ಸೆಟಲೈಟ್ ಲಾಂಚ್ ವೆಹಿಕಲ್-ಎಫ್10 ಮೂಲಕ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಎಸ್‌ಡಿಎಸ್‌ಸಿಯ 2ನೇ ಲಾಂಚ್‌ಪ್ಯಾಡ್‌ನಿಂದ ಹೊತ್ತೊಯ್ಯದಿದೆ.
ರಾಷ್ಟ್ರವು ಸ್ವಾತಂತ್ರ್ಯ ದಿನಾಚರಣೆಯನ್ನು ಇಸ್ರೋದ ಸಾಧನೆಯೊಂದಿಗೆ ಆಚರಿಸಲು ಎದುರು ನೋಡುತ್ತಿದೆ. ಈ ನಡುವೆ ಉಡ್ಡಯನ ಸಂದರ್ಭದ ಹವಾಮಾನ ಪರಿಸ್ಥಿತಿ ಕುರಿತು ರಾಷ್ಟ್ರೀಯ ಬಾಹ್ಯಾಕಾಶ ಏಜೆನ್ಸಿ ಎಚ್ಚರಿಕೆ ನೀಡಿತ್ತು. ಸದ್ಯ ‘ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ಎಸ್‌ಡಿಎಸ್‌ಸಿ) ಎಸ್ಎಚ್‌ಎಆರ್‌ನಿಂದ ಜಿಎಸ್‌ಎಲ್‌ವಿ-ಎಫ್10/ಇಒಎಸ್-03 ಉಪಗ್ರಹ ಯಶಸ್ವಿಯಾಗಿ ಹಾರಿದೆ. ಈ ಬಗ್ಗೆ ಇಸ್ರೊ ಟ್ವೀಟ್ ಮಾಡಿದೆ.
EOS-3 ಉಪಗ್ರಹ ಭೂಚಲನೆಯ ಗತಿ ಅವಲೋಕಿಸಲಿದೆ. ಇದರಿಂದ ಪ್ರವಾಹ, ಚಂಡಮಾರುತ ಸೇರಿದಂತೆ ಪ್ರಕೃತಿ ವಿಕೋಪಗಳನ್ನು ಮುಂದಾಗಿ ಗ್ರಹಿಸಲು ಅನುಕೂಲವಾಗಲಿದೆ. 2020ರ ಮಾರ್ಚ್ನಲ್ಲಿ ಉಡಾವಣೆಯಾಗಬೇಕಿದ್ದ ಉಪಗ್ರಹ ತಾಂತ್ರಿಕ ದೋಷ ಹಿನ್ನೆಲೆ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು.
Watch Live: Launch of EOS-03 onboard GSLV-F10 https://t.co/NE3rVjNtHb
— ISRO (@isro) August 11, 2021
ಇದನ್ನೂ ಓದಿ: ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿರುವವರನ್ನು ಪ್ರೇರೇಪಿಸಲು ಕಸ್ಟಮೈಸ್ಡ್ ಮರ್ಕಂಡೈಸ್ ಲಾಂಚ್ ಮಾಡಿದ ಇಸ್ರೋ
Published On - 6:53 am, Thu, 12 August 21