ಮಂಗಳೂರು: ಫಾರ್ಮ್​ ಹೌಸ್​ ಕೆರೆಯಲ್ಲಿ ಮಾಡೆಲ್​ ಸಾವು; ವೈದ್ಯಕೀಯ ಶಿಕ್ಷಣ ಮುಗಿಸಿ ಕೃಷಿ ಅಧ್ಯಯನಕ್ಕೆ ಬಂದಿದ್ದ ಯುವತಿ

ಕೇವು ಗ್ರಾಮದಲ್ಲಿರುವ ಫಾರ್ಮ್​ ಹೌಸ್​ಗೆ ಕೃಷಿ ಅಧ್ಯಯನಕ್ಕಾಗಿ ಬಂದಿದ್ದ ಮಾಡೆಲ್​ ಡಾ.ಮೈಜೀ ಕರೋಲ್ ಫರ್ನಾಂಡಿಸ್ (31 ವರ್ಷ) ಎನ್ನುವವರು ದುರ್ಮರಣಕ್ಕೀಡಾಗಿದ್ದು, ಮೈಜೀ ಸಾವಿನ ಬಗ್ಗೆ ಆಕೆಯ ಸಹೋದರಿ ಡಯಾನ ದೂರು ನೀಡಿದ್ದಾರೆ.

ದಕ್ಷಿಣ ಕನ್ನಡ: ಫಾರ್ಮ್‌ ಹೌಸ್‌ ಕೆರೆಯಲ್ಲಿ ಮುಳುಗಿ ಯುವತಿಯೊಬ್ಬರು ಸಾವಿಗೀಡಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೇವು ಗ್ರಾಮದಲ್ಲಿ ನಡೆದಿದೆ. ಕೇವು ಗ್ರಾಮದಲ್ಲಿರುವ ಫಾರ್ಮ್​ ಹೌಸ್​ಗೆ ಕೃಷಿ ಅಧ್ಯಯನಕ್ಕಾಗಿ ಬಂದಿದ್ದ ಮಾಡೆಲ್​ ಡಾ.ಮೈಜೀ ಕರೋಲ್ ಫರ್ನಾಂಡಿಸ್ (31 ವರ್ಷ) ಎನ್ನುವವರು ದುರ್ಮರಣಕ್ಕೀಡಾಗಿದ್ದು, ಮೈಜೀ ಸಾವಿನ ಬಗ್ಗೆ ಆಕೆಯ ಸಹೋದರಿ ಡಯಾನ ದೂರು ನೀಡಿದ್ದಾರೆ.

ಮಂಗಳೂರಿನ ಪ್ರಶಾಂತನಗರ ನಿವಾಸಿ ಮೈಜೀ ವೈದ್ಯಕೀಯ ಶಿಕ್ಷಣ ಮುಗಿಸಿ ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್​ಗೆ ಹೋಗಿದ್ದ ಮೈಜೀ, ಈಜುವಾಗ ಆಯ ತಪ್ಪಿ ಮುಳುಗಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಡಾ.ಮೈಜೀ ಕರೋಲ್ ಫರ್ನಾಂಡಿಸ್ ಸಾವಿನ ಬಗ್ಗೆ ಆಕೆಯ ಸಹೋದರಿ ಡಯಾನ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:
ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ; ಫ್ಲೈ ಓವರ್​ ಮೇಲೆ ನಿಂತಿದ್ದ ಜೋಡಿಗೆ ವೇಗವಾಗಿ ಬಂದು ಗುದ್ದಿದ ಕಾರು, ಕೆಳಕ್ಕೆ ಬಿದ್ದು ಇಬ್ಬರೂ ಸಾವು 

ಮಹಾರಾಷ್ಟ್ರದ ವರದಾ ನದಿಯಲ್ಲಿ ದೋಣಿ ಮಗುಚಿ ಮೂರು ಸಾವು; ಹಲವರು ನಾಪತ್ತೆಯಾಗಿರುವ ಶಂಕೆ, ಮುಂದುವರಿದ ಶೋಧ

Click on your DTH Provider to Add TV9 Kannada