ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಿನ್ನೆ (ಅ.22) ಸಂಜೆ ನಡೆದ 175 ಜನರಿಗೆ ನಿವೇಶನ ಹಕ್ಕುಪತ್ರ ಕಾರ್ಯಕ್ರಮದಲ್ಲಿ ಸಚಿವ ವಿ.ಸೋಮಣ್ಣ (V Somanna) ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಮಹಿಳೆ ಪ್ರತಿಕ್ರಯಿಸಿ ವಿ ಸೋಮಣ್ಣ ಅವರು ನನಗೆ ಹೊಡದೆ ಇಲ್ಲ ಎಂದಿದ್ದರು. ಆದ್ರೂ ಕೂಡ ವಿ. ಸೋಮಣ್ಣ ಇಂದು (ಅ. 23) ಕ್ಷಮೆಯಾಚಿಸಿದ್ದಾರೆ. ಈ ಕುರಿತು ವಿ. ಸೋಮಣ್ಣ ಮಾತನಾಡಿ ನಿನ್ನೆಯ ಕಾರ್ಯಕ್ರಮದಲ್ಲಿ ಸಣ್ಣ ಅಪಚಾರವನ್ನು ಮಾಡಿಲ್ಲ. ಪ್ರಾಯಶಃ ಯಾರಿಗಾದರು ಮನಸ್ಸಿಗೆ ನೋವಾಗಿದ್ದಾರೆ ಕ್ಷಮೆ ಯಾಚಿಸುತ್ತೇನೆ, ವಿಷಾದ ವ್ಯಕ್ತಪಡಿಸ್ತೇನೆ ಎಂದು ಕ್ಷಮೆ ಕೇಳಿದ್ದಾರೆ.
45 ವರ್ಷ ಹಲವು ಏಳುಬೀಳು ಕಂಡಿದ್ದೇನೆ. ನಿನ್ನೆಯ ಘಟನೆ ಘಟನೆಯೇ ಅಲ್ಲ. ಹೆಣ್ಣು ಮಗಳು ಪದೇಪದೇ ವೇದಿಕೆ ಮೇಲೆ ಬರ್ತಾ ಇದ್ದಳು. ತಾಯಿ ಎಷ್ಟು ಸಾರಿ ಬರ್ತೀಯ ಅಂತ ವಿಚಾರಿಸಿದೆ, ನಿನ್ನ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಕೈಯಲ್ಲಿ ಪಕ್ಕಕ್ಕೆ ಸರಿಸಿದ್ದೇನೆ, ವಿನಃ ಇನ್ನೇನು ಉದ್ದೇಶ ಇರಲ್ಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ಹೆಣ್ಣು ಮಕ್ಕಳ ಬಗ್ಗೆ ಅಪಾರವಾದ ಗೌರವ, ಮಮಕಾರ ಇದೆ. ನಾನು ಕೂಡ ಬಡತನದಿಂದಲೇ ಬಂದವನು. ಆ ಹೆಣ್ಣು ಮಗಳಿಗೆ ಸಹ ಹಕ್ಕು ಪತ್ರ ಕೊಡಿಸಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕ್ಷಮೆ ಕೇಳಿದ್ದಾರೆ.
ಕಾಂಗ್ರೆಸ್ನಿಂದ ತೀರ್ವ ಟೀಕೆಗೆ ಗುರಿಯಾಗಿದ್ದ ವಿ ಸೋಮಣ್ಣ
ಸಚಿವ ಸೋಮಣ್ಣ ವಜಾಗೊಳಿಸಲು ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹ
ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿದ್ದು, ಕೂಡಲೆ ಸಚಿವ ವಿ. ಸೋಮಣ್ಣ ಅವರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಪ್ರಧಾನ ಮಂತ್ರಿಗಳು ಕೆಂಪುಕೋಟೆ ಮೇಲೆ ನಿಂತು ಮಹಿಳೆಯ ರಕ್ಷಣೆ ಬಗ್ಗೆ ಮಾತನಾಡುತ್ತಾರೆ. ಭಾರತೀಯ ಮಹಿಳೆಯರನ್ನ ಗೌರವದಿಂದ ಕಾಣಬೇಕು ಎಂದು ಭಾಷಣ ಮಾಡುತ್ತಾರೆ. ಇದೇನಾ ಭಾರತೀಯ ಜನತಾ ಪಾರ್ಟಿ ಮಹಿಳೆಯರಿಗೆ ನೀಡುವ ಗೌರವ ? ಇದೇನಾ ಬಿಜೆಪಿ ಮಹಿಳೆಯರಿಗೆ ನೀಡುವ ಭದ್ರತೆ ಸುರಕ್ಷತೆ ? ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಮಂತ್ರಿಗಳೇ ಕೂಡಲೇ ಸಚಿವ ಸೋಮಣ್ಣ ಅವರನ್ನ ಸಂಪುಟದಿಂದ ವಜಾ ಮಾಡಿಸಿ. ಪೇ ಸಿಎಂ, 40% ಕಮಿಷನ್ ಸಿಎಂ ಬೊಮ್ಮಾಯಿ ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಕೂಡಲೇ ಸಂಪುಟದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಮಹಿಳೆಯರ ಬಗ್ಗೆ ನಿಮ್ಮ ಹೇಳಿಕೆಗಳು ಬಾಯಿ ಮಾತಿಗಷ್ಟೇ ಸೀಮಿತ ಎಂದು ವಾಗ್ದಾಳಿ ಮಾಡಿದರು.
ಸೋಮಣ್ಣ ಸಚಿವರಾಗಲು ನಾಲಾಯಕ ಎಂದ ಸಿದ್ದರಾಮಯ್ಯ
ವಿ. ಸೋಮಣ್ಣ ಸಚಿವರಾಗಲು ನಾಲಾಯಕ. ಮಹಿಳೆ ಮೇಲೆ ಕೈ ಮಾಡಿದ್ದು ಅವರ ಸಂಸ್ಕೃತಿ ತೋರಿಸುತ್ತೆ. ಹಕ್ಕುಪತ್ರ ಕೇಳಲು ಬಂದ ಮಹಿಳೆಗೆ ಹೊಡೆದಿದ್ದು ಖಂಡನೀಯ ಎಂದು ದಾವಣಗೆರೆಯಲ್ಲಿ ವಿಪಕ್ಷನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಗೃಹ ಸಚಿವರು ಜೀವಂತವಾಗಿದ್ದರೆ ಕ್ರಮ ಕೈಗೊಳ್ಳಿ: ಪುಷ್ಪಾ ಅಮರನಾಥ್
ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿದ್ದು, ಗೃಹ ಸಚಿವರು ಜೀವಂತವಾಗಿದ್ದರೆ ಕ್ರಮ ತೆಗೆದುಕೊಳ್ಳಲಿ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:29 pm, Sun, 23 October 22