Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಶತಮಾನದಷ್ಟು ಹಳೆಯದಾದ ಹೆಸರಘಟ್ಟ ಕೆರೆ 28 ವರ್ಷಗಳ ನಂತರ ಭರ್ತಿ

ಬೆಂಗಳೂರಿಗೆ ಕನಿಷ್ಠ ಮೂರು ವರ್ಷಕ್ಕೆ ಸಾಕಾಗುವಷ್ಟು ನೀರನ್ನು ಸಂಗ್ರಹಿಸಬಹುದಾದ ಹೆಸರಘಟ್ಟ ಕೆರೆ ಭರ್ತಿಗೊಳ್ಳುತ್ತಿದ್ದು, ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ಯಾವುದೇ ಕ್ಷಣದಲ್ಲಾದರೂ ತುಂಬಿ ಹರಿಯುವ ಸಾಧ್ಯತೆ ಇದೆ.

ಬೆಂಗಳೂರಿನ ಶತಮಾನದಷ್ಟು ಹಳೆಯದಾದ ಹೆಸರಘಟ್ಟ ಕೆರೆ 28 ವರ್ಷಗಳ ನಂತರ ಭರ್ತಿ
ಹೆಸರಘಟ್ಟ ಕರೆ
Follow us
TV9 Web
| Updated By: Rakesh Nayak Manchi

Updated on:Oct 24, 2022 | 9:16 AM

ಬೆಂಗಳೂರು: ಅರ್ಕಾವತಿ ನದಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಬೆಂಗಳೂರಿನ ವಿವಿಧ ಭಾಗಗಳಿಗೆ ಕುಡಿಯುವ ನೀರನ್ನು ಪೂರೈಸುತ್ತಿರುವ ಹೆಸರಘಟ್ಟ ಕೆರೆ 28 ವರ್ಷಗಳ ನಂತರ ಭರ್ತಿಯಾಗುತ್ತಿದೆ. 450 ಹೆಕ್ಟೇರ್ (1,100 ಎಕರೆ) ಪ್ರದೇಶದಲ್ಲಿ ಹರಡಿರುವ ಹೆಸರಘಟ್ಟ ಕೆರೆಯನ್ನು 1894 ರಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಯಿತು. ದಿವಾನ್ ಕೆ.ಶೇಷಾದ್ರಿ ಅಯ್ಯರ್ ಅವರ ಅಧಿಕಾರಾವಧಿಯಲ್ಲಿ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮೈಸೂರಿನ ಅಂದಿನ ಮುಖ್ಯ ಎಂಜಿನಿಯರ್ ಎಂ.ಸಿ.ಹಚಿನ್ಸ್ ಅವರು ವಿನ್ಯಾಸಗೊಳಿಸಿದ ‘ಚಾಮರಾಜೇಂದ್ರ ವಾಟರ್ ವರ್ಕ್ಸ್’ ಯೋಜನೆಯ ಭಾಗವಾಗಿದೆ. ಈ ಕೆರೆಯಲ್ಲಿ ಬೆಂಗಳೂರಿಗೆ ಕನಿಷ್ಠ ಮೂರು ವರ್ಷಕ್ಕೆ ಸಾಕಾಗುವಷ್ಟು ನೀರನ್ನು ಸಂಗ್ರಹಿಸಬಹುದು.

ಭಾನುವಾರದಂದು ಪೂರ್ಣ ಸಾಮರ್ಥ್ಯಕ್ಕಿಂತ ಕೇವಲ ಒಂದು ಅಡಿಯಷ್ಟು ಕೆಳಭಾಗದವರೆಗೆ ಕೆರೆಯಲ್ಲಿ ನೀರು ತುಂಬಿದೆ. ಅಲ್ಲದೆ ಯಾವುದೇ ಕ್ಷಣದಲ್ಲಿ ಕೆರೆ ನೀರು ತುಂಬಿ ಹರಿಯುವ ನಿರೀಕ್ಷೆಯಿದೆ. ಕಳೆದ 1994ರಲ್ಲಿ ಕೆರೆ ಸಂಪೂರ್ಣ ಭರ್ತಿಯಾಗಿದೆ ಎಂದು ವರದಿಯಾಗಿದೆ.

ನಿರಂತರ ಸವಕಳಿ ಮತ್ತು ಅವ್ಯಾಹತ ಮರಳು ಮತ್ತು ಕಲ್ಲು ಗಣಿಗಾರಿಕೆ ಮತ್ತು ಅರ್ಕಾವತಿ ಜಲಾನಯನ ಪ್ರದೇಶದ ಅವನತಿಯೊಂದಿಗೆ ಜಲಾಶಯಕ್ಕೆ ಒಳಹರಿವಿನ ಮೇಲೆ ಪರಿಣಾಮ ಬೀರಿತು. ಆ ಮೂಲಕ ಹೆಸರಘಟ್ಟ ಕೆರೆ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಲು ಪ್ರಾರಂಭಿಸಿತು.

ಸರೋವರದ ಪಕ್ಷಿಗಳು ವನ್ಯಜೀವಿ ಛಾಯಾಗ್ರಾಹಕರನ್ನು ಗುಂಪುಗುಂಪಾಗಿ ಸೆಳೆಯುತ್ತಿದೆ. ಸಂರಕ್ಷಣಾವಾದಿಗಳು ಮತ್ತು ಇತಿಹಾಸಕಾರರು ಕೆರೆಯನ್ನು ಪುನರುಜ್ಜೀವನಗೊಳಿಸಬೇಕು ಮತ್ತು ಅದನ್ನು ಅದರ ಮೂಲ ವೈಭವಕ್ಕೆ ಮರಳಿ ತರಬೇಕೆಂದು ಒತ್ತಾಯಿಸಿದರೂ ರಾಜ್ಯ ಸರ್ಕಾರವು ಯಾವುದೇ ಪ್ರಮುಖ ಯೋಜನೆಯನ್ನು ಘೋಷಿಸಲಿಲ್ಲ. ಜಲಾನಯನ ಪ್ರದೇಶದಾದ್ಯಂತ ಮತ್ತು ನಂದಿ ಬೆಟ್ಟದ ಸುತ್ತಲೂ ಭಾರಿ ಮಳೆಯಿಂದಾಗಿ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದೆ. ಮೇಲ್ಭಾಗದ 184 ಕೆರೆಗಳ ಹೆಚ್ಚುವರಿ ನೀರು ಹೆಸರಘಟ್ಟ ಕೆರೆಗೆ ಹರಿಯುತ್ತದೆ ಎಂದು ಗ್ರಾಮಸ್ಥರು ವಿವರಿಸಿದರು.

20 ವರ್ಷದ ನಂತರ ಭರ್ತಿಯಾದ ಕಲ್ಲುಕಟ್ಟೆ ಜಲಾಶಯ

ಚಾಮರಾಜನಗರ: ಇಪ್ಪತ್ತು ವರ್ಷಗಳ ನಂತರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಬಳಿಯ ಕಲ್ಲುಕಟ್ಟೆ ಜಲಾಶಯ ಭರ್ತಿಗೊಂಡು ಕೋಡಿ ಹರಿದಿದೆ. ಆದರೆ ಜಲಾಶಯದ ಕೋಡಿ ಮೇಲೆ ಜನರು ಹುಚ್ಚಾಟ ಮೆರೆಯುತ್ತಿದ್ದು, ಕೋಡಿ ಏರಿ ಮೇಲೆ ನಡೆದಾಡುವ ಹುಚ್ಚು ಸಾಹಸದಲ್ಲಿ ತೊಡಗಿದ್ದಾರೆ. ಹೀಗಾಗಿ ಪೊಲೀಸರನ್ನು‌ ನೇಮಿಸಿ ಎಚ್ಚರಿಸುವಂತೆ ಸ್ಥಳಿಯರ ಆಗ್ರಹಿಸುತ್ತಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:16 am, Mon, 24 October 22

ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ