ಬೆಳಗಾವಿಯಲ್ಲಿ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ 6 ವರ್ಷದ ಬಾಲಕ ಸಾವು

ಹಬ್ಬಕ್ಕೆ ಹೊಸಬಟ್ಟೆ ಖರೀದಿಸಲು ತಂದೆ ಜೊತೆ ಬಂದಿದ್ದ ಬಾಲಕನಿಗೆ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿದೆ. ಈ ವೇಳೆ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಬೆಳಗಾವಿಯಲ್ಲಿ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ 6 ವರ್ಷದ ಬಾಲಕ ಸಾವು
ವರ್ಧನ್ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ತಾಯಿ
Follow us
TV9 Web
| Updated By: ಆಯೇಷಾ ಬಾನು

Updated on:Oct 24, 2022 | 9:47 AM

ಬೆಳಗಾವಿ: ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬಾಲಕ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ಹಳೇ ಗಾಂಧಿನಗರದಲ್ಲಿ ನಡೆದಿದೆ. ಹತ್ತರಗಿ ಗ್ರಾಮದ ವರ್ಧನ್​ ಈರಣ್ಣ ಬ್ಯಾಳಿ(6) ಮೃತ ಬಾಲಕ. ಬೈಕ್​ನಲ್ಲಿ ತಂದೆ ಜೊತೆ ತೆರಳುತ್ತಿದ್ದ ವೇಳೆ ದುರಂತ ನಡೆದಿದೆ.

ಹಬ್ಬಕ್ಕೆ ಹೊಸಬಟ್ಟೆ ಖರೀದಿಸಲು ತಂದೆ ಜೊತೆ ಬಂದಿದ್ದ ಬಾಲಕ ಹಳೆ ಗಾಂಧಿ ನಗರದ ಬ್ರಿಡ್ಜ್ ಮೇಲೆ ಬೈಕ್​ನಲ್ಲಿ ತೆರಳುತ್ತಿದ್ದಾಗ ಮಾಂಜಾ ದಾರ ಕುತ್ತಿಗೆಗೆ ತಗುಲಿ ಗಂಭೀರ ಗಾಯಗಳಾಗಿವೆ. ಬಳಿಕ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಜಿಲ್ಲಾಸ್ಪತ್ರೆಯಲ್ಲಿ ವರ್ಧನ್ ಮೃತಪಟ್ಟಿದ್ದಾನೆ. ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಂಚುಗಲ್​ ಬಂಡೆಮಠದ ಬಸವಲಿಂಗ ಸ್ವಾಮೀಜಿ(45) ಮಠದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆತ್ಮಹತ್ಯೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ:  ಬೆಂಗಳೂರಿನ ಶತಮಾನದಷ್ಟು ಹಳೆಯದಾದ ಹೆಸರಘಟ್ಟ ಕೆರೆ 28 ವರ್ಷಗಳ ನಂತರ ಭರ್ತಿ

ಕಲಬುರಗಿಯಲ್ಲಿ ಪೊಲೀಸರ ಮನೆಯಲ್ಲೇ ಕಳ್ಳತನ

ಕಲಬುರಗಿ ನಗರದಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ KSRP ನಿವೃತ್ತ ಕಾನ್ಸ್​ಟೇಬಲ್​ ಸಿದ್ದಲಿಂಗಯ್ಯ ಸೇರಿ ಇಬ್ಬರು ಪೊಲೀಸ್ ಸಿಬ್ಬಂದಿ ಮನೆಯಲ್ಲಿ ಕಳತನ ನಡೆದಿದೆ. ನಿವೃತ್ತ ಪಿಸಿ ಸಿದ್ದಲಿಂಗಯ್ಯ ಮನೆಯಲ್ಲಿ 10 ಗ್ರಾಂ ಚಿನ್ನ, 20 ಸಾವಿರ ನಗದು, 10 ರೇಷ್ಮೆ ಸೀರೆ ಕಳ್ಳತನವಾಗಿದೆ. ಮಹಾಂತೇಶ್​ ಎಂಬುವರ ಮನೆಯಲ್ಲಿ 50 ಗ್ರಾಂ ಚಿನ್ನ, 10 ಸಾವಿರ ನಗದು ಕಳ್ಳತನವಾಗಿದ್ದು ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಕಳ್ಳತನ ಮಾಡ್ತಿದ್ದ ಇಬ್ಬರು ಅರೋಪಿಗಳು ಅರೆಸ್ಟ್

ಬೆಂಗಳೂರು: ಬೈಕ್​ ಕಳ್ಳತನ ಮಾಡ್ತಿದ್ದ ಕೃತಿಕ್​​, ವಿಜಯ್​ನನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 30ಕ್ಕೂ ಹೆಚ್ಚು ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಮನೆ ಮುಂದೆ ಆಫೀಸ್ ಮುಂದೆ ನಿಲ್ಲಿಸಿದ್ದ ಬೈಕ್ ಗಳನ್ನು ಈ ಖದೀಮರು ಕಳ್ಳತನ ಮಾಡ್ತಿದ್ದರು. ಹಾಗೂ ಕದ್ದ ಬೈಕ್​ಗಳನ್ನು ಸಿಕ್ಕ ಸಿಕ್ಕ ರೇಟ್​ಗೆ ಮಾರಾಟ ಮಾಡ್ತಿದ್ರು. ಕದ್ದ ಬೈಕ್ ಮಾರಾಟ ಮಾಡಿ ಬಂದ ಹಣದಲ್ಲಿ ಮಜಾ ಮಾಡ್ತಿದ್ದರು. ಸದ್ಯ ಈಗ ಈ ಖದೀಮರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸೊಮಾಲಿಯಾದಲ್ಲಿ ಅಲ್-ಶಬಾಬ್ ಉಗ್ರ ಸಂಘಟನೆಯಿಂದ ಗುಂಡಿನ ದಾಳಿ: 9 ನಾಗರಿಕರ ಸಾವು

Published On - 9:45 am, Mon, 24 October 22