ಕಬಿನಿ ಮತ್ತು ಕೆಆರ್ ಎಸ್ ಜಲಾಶಯಗಳಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಬಿಟ್ಟಿರುವುದರಿಂದ ಕಾವೇರಿ ಪಾತ್ರದ ಕೊಳ್ಳೇಗಾಲ ತಾಲೂಕಿನ ದಾಸನಪುರ, ಹಂಪಾಪುರ, ಮುಳ್ಳೂರು, ಹಳೆಅಣಗಳ್ಳಿ ಸೇರಿದಂತೆ ಹಲವು ಗ್ರಾಮಗಳ ಜಮೀನು ನುಗ್ಗಿದ್ದು, ಶಾಸಕ ಎನ್ ಮಹೇಶ್ ಈ ಪ್ರದೇಶಗಳಿಗೆ ಭೇಡಿ ನೀಡಿ ಆತಂಕದಲ್ಲಿರುವ ರೈತರನ್ನು ಸಂತೈಸಿದರು.
ಜಲಾಶಯಗಳಿಂದ ಬಿಟ್ಟಿರುವ ನೀರು ಹಲವಾರು ಕಡೆ ಜಮೀನುಗಳಿಗೆ ನುಗ್ಗಿದೆ. ಅಪಾರ ಪ್ರಮಾಣದ ಬೆಳೆಹಾನಿಯಿಂದಾಗಿ ತೀರಾ ಸಂಕಷ್ಟದಲ್ಲಿರುವ ರೈತರಿಗೆ ನೆರವಿನ ಭರವಸೆ ನೀಡಿದರು. ಇಲ್ಲಿ ಸ್ಮರಿಸಬಹುದಾದ ಅಂಶವೆಂದರೆ, ಕಳೆದ ವರ್ಷವೂ ಈ ಗ್ರಾಮಗಳು ಪ್ರವಾಹಕ್ಕೀಡಾಗಿ, ರೈತರು ಬಸವಳಿದಿದ್ದರು.
ರೈತರೊಂದಿಗೆ ಮಾತಾಡಿದ ನಂತರ ಸಚಿವ ಮಹೇಶ್, ಅಧಿಕಾರಿಗಳೊಂದಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಿದರು.