ಚಾಮರಾಜನಗರ: ಚಾಮರಾಜನಗರ (chamarajanagar) ತಾಲೂಕಿನ ನಂಜೇದೇವನಪುರದಲ್ಲಿ ತಾನೇ ನಿರ್ಮಿಸಿಕೊಂಡಿದ್ದ ಸಮಾಧಿಯಲ್ಲಿ ವೃದ್ಧರೊಬ್ಬರ (old man) ಅಂತ್ಯಸಂಸ್ಕಾರ (last rites) ನೆರವೇರಿಸಲಾಯಿತು! ಇಂದು ನಿಧನರಾದ 85 ವರ್ಷದ ಪುಟ್ಟನಂಜಪ್ಪ ಅವರು 30 ವರ್ಷಗಳ ಹಿಂದೆಯೇ ತಮ್ಮ ಸಮಾಧಿ ನಿರ್ಮಿಸಿಕೊಂಡಿದ್ದರು. ಸಿಮೆಂಟ್‌ನಿಂದ ಸಮಾಧಿ ನಿರ್ಮಿಸಿ, ಮರಳು ತುಂಬಲಾಗಿತ್ತು. ಇಂದು ಮರಳು ತೆಗೆದು, ಸಮಾಧಿಯಲ್ಲಿ (grave) ಪುಟ್ಟನಂಜಪ್ಪ ಅಂತ್ಯಸಂಸ್ಕಾರ ಮಾಡಲಾಯಿತು.
ಮೃತ 85 ವರ್ಷದ ಪುಟ್ಟನಂಜಪ್ಪಗೆ ಮೂವರು ಮಕ್ಕಳಿದ್ದರು. ಮಕ್ಕಳಿಗೆ ತೊಂದರೆಯಾಗಬಾರದೆಂದು ತಮ್ಮ ಅಂತ್ಯಸಂಸ್ಕಾರ, ತಿಥಿ ಕಾರ್ಯಕ್ಕೆಂದು 1 ಲಕ್ಷ ರೂ ಹಣ ಮೀಸಲಿಟ್ಟಿದ್ದರು. ಅಂತ್ಯಸಂಸ್ಕಾರಕ್ಕೆ ಬೇಕಾದ ಪೂಜಾ ಸಾಮಗ್ರಿ ಸಹ ತೆಗೆದಿಟ್ಟಿದ್ದರು.
ಸಮಾಧಿಯಿರುವ ಜಾಗದ ಕಡೆ ಈ 30 ವರ್ಷಗಳಲ್ಲಿ ಓಡಾಡುವಾಗ…
ವ್ಯಕ್ತಿಯೊಬ್ಬರು 30 ವರ್ಷದ ಹಿಂದೆಯೇ ತಮ್ಮ ಸಮಾಧಿ ನಿರ್ಮಿಸಿಕೊಂಡಿದ್ದರು ಎಂಬುದು ನಿಜಕ್ಕೂ ಸೋಜಿಗದ ವಿಷಯ. ಕುತೂಹಲಕಾರಿ ಸಂಗತಿ. ಜೊತೆಗೆ ಆತಂಕಕಾರಿಯೂ ಹೌದು. 30 ವರ್ಷದ ಹಿಂದೆ ತಮ್ಮದೇ ಸಮಾಧಿ ಹೀಗಿರಲಿ ಎಂದು ನಿರ್ಮಿಸಿಕೊಂಡಾಗ ಅವರ ಮನಸ್ಥಿತಿ ಹೇಗಿತ್ತು. ಸಮಾಧಿ ನಿರ್ಮಾಣವಾದ ಮಾರನೆಯ ದಿನವೇ ಅವರು ಮೃತಪಟ್ಟಿದ್ದರೆ ಅದೊಂದು ರೀತಿ. ಆದರೆ 3 ದಶಕಗಳ ಸುದೀರ್ಘ ಕಾಲ ಅವರು ತಮ್ಮದೇ ಸಮಾಧಿಯನ್ನು ನೋಡಿ ನೋಡಿ ಹೇಗೆ ಜೀವನ ದೂಡುತ್ತಿದ್ದರು. ಅದಿನ್ನೆಂಥಹಾ ಅಭಾವ ವೈರಾಗ್ಯ ಅವರನ್ನ ಕಾಡಿರಬಹುದು. ಜೊತೆಗೆ ತಮ್ಮ ಸಮಾಧಿಯಿರುವ ಜಾಗದ ಕಡೆ ಈ 30 ವರ್ಷಗಳಲ್ಲಿ ಓಡಾಡುವಾಗ ಪುಟ್ಟನಂಜಪ್ಪ ಅವರಲ್ಲಿ ಅದಿನ್ನೆಂಥಾ ಭಾವ ಮೂಡಿರಬಹುದು… ಅಲ್ಲವಾ!?
Published On - 5:35 pm, Mon, 25 July 22