ಚಾಮರಾಜನಗರ: ಬಿಆರ್​ಟಿ ಅರಣ್ಯ ವಲಯದಲ್ಲಿ ಕರಡಿ ದಾಳಿಗೆ ದನಗಾಹಿ ಬಲಿ

| Updated By: ವಿವೇಕ ಬಿರಾದಾರ

Updated on: Dec 24, 2022 | 9:33 PM

ಚಾಮರಾಜನಗರ ತಾಲೂಕಿನಲ್ಲಿರುವ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯದ ಪುಣಜನೂರು ವಲಯದಲ್ಲಿ ಕರಡಿ ದಾಳಿಗೆ ದನಗಾಹಿ ಬಲಿಯಾಗಿದ್ದಾನೆ.

ಚಾಮರಾಜನಗರ: ಬಿಆರ್​ಟಿ ಅರಣ್ಯ ವಲಯದಲ್ಲಿ ಕರಡಿ ದಾಳಿಗೆ ದನಗಾಹಿ ಬಲಿ
ಕರಡಿ ದಾಳಿ
Follow us on

ಚಾಮರಾಜನಗರ: ರಾಜ್ಯದಲ್ಲಿ ಪ್ರಾಣಿಗಳ ದಾಳಿಯಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ. ಇಷ್ಟು ದಿನಗಳ ಕಾಲ ಹುಲಿ, ಚಿರತೆ ದಾಳಿಯ ಕಾಟವಾದರೇ ಈಗ ಕರಡಿ ದಾಳಿ (Bear attack) ಶುರುವಾಗಿದೆ. ಹೌದು ಚಾಮರಾಜನಗರ (Chamrajnagar) ತಾಲೂಕಿನಲ್ಲಿರುವ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯದ ಪುಣಜನೂರು ವಲಯದಲ್ಲಿ ಕರಡಿ ದಾಳಿಗೆ ದನಗಾಹಿ ಬಲಿಯಾಗಿದ್ದಾನೆ. ಪುಣಜನೂರಿನ ರಾಜು(60) ಬಲಿಯಾದ ದನಗಾಹಿ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟಿ.ನರಸೀಪುರ: ಕಳೆದ ಎರಡು ತಿಂಗಳಿನಿಂದ ಗ್ರಾಮಸ್ಥರಿಗೆ ತಲೆನೋವಾಗಿದ್ದ ಚಿರತೆ ಸೆರೆ

ಮೈಸೂರು: ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಚಿರತೆ  ದಾಳಿ ಹೆಚ್ಚಾಗಿತ್ತು. ಇದರಿಂದ ಮನುಷ್ಯರು, ಸಾಕು ಪ್ರಾಣಿಗಳು ಬಲಿಯಾಗಿದ್ದವು. ಇದರಿಂದ ರೋಸಿ ಹೋಗಿದ್ದ ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಟಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇಂದು (ಡಿ.23) ಮುಂಜಾನೆ 7 ವರ್ಷದ ಗಂಡು ಚಿರತೆ ಬಿದ್ದಿದೆ. ಚಿರತೆ ಅರಣ್ಯ ಇಲಾಖೆ ಬೋನಿನಲ್ಲಿ ಇರಿಸಿದ್ದ ಕರು ತಿನ್ನಲು ಬಂದು ಸೆರೆ ಸಿಕ್ಕಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಮದ್ಯಪಾನ ಪ್ರಿಯರಿಗೂ ಇನ್ಶೂರೆನ್ಸ್ ಸೌಲಭ್ಯ ಒದಗಿಸಬೇಕು: ಮದ್ಯಪಾನ ಪ್ರಿಯರ ಹೋರಾಟ ಸಂಘದ ಅಧ್ಯಕ್ಷ ಒತ್ತಾಯ

ಚಿರತೆ ಸೆರೆ ಸಿಕ್ಕ ಮಾಹಿತಿ ತಿಳಿದ ಬೆನ್ನಲ್ಲೇ ಸ್ಥಳಕ್ಕೆ ನೂರಾರು ಜನ ಆಗಮಿಸಿದ್ದರು. ಹಾಗೇ ಸೆರೆ ಸಿಕ್ಕ ಚಿರತೆ ಕಳೆದ ಎರಡು ತಿಂಗಳ ಹಿಂದೆ ವಿದ್ಯಾರ್ಥಿ ಮಂಜುನಾಥ್ ಬಲಿ ಪಡೆದಿತ್ತು ಎಂದು ಹೇಳಲಾಗುತ್ತಿದೆ. ಚಿರತೆ ದಿನನಿತ್ಯ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿತ್ತು.

ಎಷ್ಟೇ ಹುಡುಕಿದರು ಬೋನಿಗೆ ಬೀಳದ ಚಿರತೆ

ಮಂಡ್ಯ: ಕಳೆದ ಕೆಲವು ದಿನಗಳಿಂದ ಕೆ.ಆರ್.ಎಸ್ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷವಾಗಿ ಆಂತಕ ಮೂಡಿಸಿದೆ. ಇದರಿಂದ ಕೆ.ಆರ್.ಎಸ್ ಬೃಂದಾವನಕ್ಕೆ ಎರೆಡು ತಿಂಗಳುಗಳ ಕಾಲ ಬೀಗ ಹಾಕಲಾಗಿತ್ತು. ಈ ಸಂಬಂಧ ಅರಣ್ಯ ಇಲಾಖೆ ಬೋನ್​ ಇಟ್ಟಿದೆ. ಆದರೂ ಕೂಡ ಎಷ್ಟೇ ಹುಡುಕಿದರು ಚಿರತೆ ಬೋನಿಗೆ ಬಿದ್ದಿಲ್ಲ. ಚಿರತೆ ಪದೇ ಪದೇ ಸಿಸಿ ಕ್ಯಾಮರದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಠಿಸಿತ್ತು. ಮೂರು ವಿಶೇಷ ತಂಡದಿಂದ ಕೂಂಬಿಂಗ್ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:32 pm, Sat, 24 December 22