AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲೆಮಹದೇಶ್ವರ ಬೆಟ್ಟದಲ್ಲಿ ಹಂದಿ ಕಾಟ: ತಮಿಳುನಾಡು ಮೂಲದ ಭಕ್ತನ ಮೇಲೆ ದಾಳಿ

Male Mahadeshwara Betta: ಆಹಾರಕ್ಕಾಗಿ ಮನುಷ್ಯರ ಮೇಲೆ ಹಂದಿಗಳು ದಾಳಿ ನಡೆಸಿದ್ದು ತಮಿಳುನಾಡು ಮೂಲದ ಭಕ್ತನಿಗೆ ಗಂಭೀರ ಗಾಯಗಳಾಗಿವೆ.

ಮಲೆಮಹದೇಶ್ವರ ಬೆಟ್ಟದಲ್ಲಿ ಹಂದಿ ಕಾಟ: ತಮಿಳುನಾಡು ಮೂಲದ ಭಕ್ತನ ಮೇಲೆ ದಾಳಿ
ಹಂದಿ
TV9 Web
| Edited By: |

Updated on: Feb 06, 2023 | 2:37 PM

Share

ಚಾಮರಾಜನಗರ: ಜಿಲ್ಲೆಯ ಪ್ರಸಿದ್ದ ಮಲೆಮಹದೇಶ್ವರ ಬೆಟ್ಟದಲ್ಲಿ ಹಂದಿ ಕಾಟ ಶುರುವಾಗಿದೆ. ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಬರುವ ಭಕ್ತರು ರಾತ್ರಿ ವಿಶ್ರಾಂತಿಗಾಗಿ ಮಲಗಿದ್ದಾಗ ಹಂದಿ ದಾಳಿ ನಡೆಸಿದೆ. ಆಹಾರಕ್ಕಾಗಿ ಮನುಷ್ಯರ ಮೇಲೆ ಹಂದಿಗಳು ದಾಳಿ ನಡೆಸಿದ್ದು ತಮಿಳುನಾಡು ಮೂಲದ ಭಕ್ತನಿಗೆ ಗಂಭೀರ ಗಾಯಗಳಾಗಿವೆ. ಘಟನೆ ಸಂಬಂಧ ಭಕ್ತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಫೆಬ್ರವರಿ 18ರಂದು ಮಹಾ ಶಿವರಾತ್ರಿ ಹಬ್ಬ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮೂಲಕ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಹೀಗಿರುವಾಗ ಪಾದಯಾತ್ರೆ ಮೂಲಕ ಬರುವ ಭಕ್ತರು ಅಲ್ಲಲ್ಲಿ ವಿಶ್ರಾಂತಿ ಪಡೆಯುವುದು ಸಾಮಾನ್ಯ. ಅದರಂತೆ ತಮಿಳುನಾಡು ಮೂಲಕ ಕೆಲ ಭಕ್ತರು ವಿಶ್ರಾಂತಿಗಾಗಿ ರಾತ್ರಿ ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದಲ್ಲಿ ಮಲಗಿದ್ದು ಅವರ ಮೇಲೆ ಹಂದಿಗಳು ದಾಳಿ ನಡೆಸಿವೆ. ಪಾದಯಾತ್ರೆ ಮೂಲಕ ಬರುವವರಿಗೆ ದಾರಿ ಮಧ್ಯೆ ಛತ್ರ ಮತ್ತಿತರ ವ್ಯವಸ್ಥೆಗಳು ಇಲ್ಲದಿರುವುದು ಕೂಡ ಘಟನೆಗೆ ಕಾರಣವಾಗಿದೆ ಎಂದು ಕೆಲ ಭಕ್ತರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಮೃತಪಟ್ಟನೆಂದು ದೇಹವನ್ನು ಸಮಾಧಿ ಮಾಡಿ ಒಂದು ದಿನದ ಬಳಿಕ ಪ್ರತ್ಯಕ್ಷವಾದ ಆಟೋ ಚಾಲಕ

ಇನ್ನು ಹಂದಿ ದಾಳಿಗೆ ತಮಿಳಿನಾಡು ಮೂಲದ ಭಕ್ತರೊಬ್ಬರು ಗಾಯಗೊಂಡಿದ್ದಾರೆ. ಕಳೆದ ವರ್ಷ ಕೂಡ ಇದೇ ರೀತಿ ಹಂದಿಗಳು ನಾಲ್ಕು ವರ್ಷದ ಬಾಲಕಿಯನ್ನು ತಿವಿದು ಗಾಯಗೊಳಿಸಿದ್ದವು. ಹಂದಿಗಳು ಮನುಷ್ಯರ ಮೇಲೆ ದಾಳಿ ಮಾಡುವುದು ಮಾತ್ರವಲ್ಲದೆ, ಅವರ ಬಳಿ ಇರುವ ಆಹಾರ ಮತ್ತಿತರ ವಸ್ತುಗಳನ್ನು ಎಳೆದು ಹಾಳು ಮಾಡುತ್ತಿವೆ. ಸಮಸ್ಯೆಯ ಗಂಭೀರತೆ ಅರಿವಿದ್ದರೂ ಹಂದಿ ಉಪಟಳ ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಭಕ್ತರು ಮತ್ತು ಊರಿನವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ