ಚಾಮರಾಜನಗರ: ಕಾಡುಗಳ್ಳ, ಹಂತಕ ವೀರಪ್ಪನ್ (Veerappan) ವಿರುದ್ಧದ ಕಾರ್ಯಾಚರಣೆಯಲ್ಲಿ ಐಎಫ್‌ಎಸ್ ಅಧಿಕಾರಿ “ಕೀರ್ತಿಚಕ್ರ” ಪಿ.ಶ್ರೀನಿವಾಸ್ (P Srinivas) ಬಳಸಿದ್ದ 3 ಜೀಪ್‌ಗಳಲ್ಲಿ ಒಂದನ್ನು ರಿಪೇರಿ ಮಾಡಿಸಿ ಓಡಾಡುವ ಸ್ಥಿತಿಗೆ ತರಲಾಗಿದ್ದು, ಅದನ್ನು ಸ್ಮರಣೀಯ ವಾಹನವಾಗಿ ಪರಿವರ್ತಿಸಲಾಗಿದೆ. 30 ವರ್ಷಗಳ ಹಿಂದೆ ಈ ಜೀಪನ್ನು ಶ್ರೀನಿವಾಸ್ರವರು ಕೊಳ್ಳೇಗಾಲ ಅರಣ್ಯ ವಿಭಾಗದ ಪಾಲಾರ್ ರೇಂಜ್ ಕಚೇರಿ ಬಳಿ ಬಿಟ್ಟಿದ್ದರು. ಆ ಸಂದರ್ಭದಲ್ಲಿಯೇ ಈ ಜೀಪ್ ಗುಜುರು ಹಂತದಲ್ಲಿತ್ತು. ಅಂತಹ ಜೀಪನ್ನು ಇಂದು ಸ್ಮರಣಾರ್ಹ ಗೊಳಿಸಿದ್ದಾರೆ. ಭಾರತದಲ್ಲಿ ಹುತಾತ್ಮರಾದ ಅರಣ್ಯಾಧಿಕಾರಿಯೊಬ್ಬರಿಗೆ ಈ ರೀತಿ ಗೌರವ ನೀಡುತ್ತಿರುವುದು ಇದೇ ಮೊದಲು. ಇದಕ್ಕೂ ಹಲವು ವರ್ಷಗಳ ಮುಂಚಿತವಾಗಿ ವೀರಪ್ಪನ್‌ನ ಹುಟ್ಟೂರಾದ ಕಾಡಂಚಿನ ಗ್ರಾಮ ಗೋಪಿನಾಥಂನ ಮುಖ್ಯ ದೇವಾಲಯವೊಂದರಲ್ಲಿ ಶ್ರೀನಿವಾಸ್ರವರ ಭಾವಚಿತ್ರ ಇಟ್ಟು ಪೂಜಿಸಲಾಗುತ್ತಿದೆ.
ಕೊಳ್ಳೆಗಾಲ ನಗರದ ಅರಣ್ಯ ವಿಶ್ರಾಂತಿ ಗೃಹವನ್ನು ವಸ್ತುಸಂಗ್ರಹಾಲಯವನ್ನಾಗಿ ರೂಪಿಸಿ, ಅಲ್ಲಿಯೇ ಈ ಜೀಪನ್ನು ನಿಲ್ಲಿಸಿ, ಕೀರ್ತಿಚಕ್ರ ಶ್ರೀನಿವಾಸ್ರವರ ಕೀರ್ತಿಯನ್ನು ಸ್ಮರಣಾರ್ಥಗೊಳಿಸುವ ಕಾರ್ಯಕ್ಕೆ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಈ ಹಿಂದಿನ ಮಲೆಮದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ V. Yedukondalu ಮುಂದಾಗಿದ್ದಾರೆ.
ಸೆಪ್ಟೆಂಬರ್ 12, 1954 ರಂದು ಜನಿಸಿದ ಶ್ರೀನಿವಾಸ್ ಅವರನ್ನು 1991ರ ನವೆಂಬರ್ 10 ರಂದು ಅರಣ್ಯ ದರೋಡೆಕೋರ ವೀರಪ್ಪನ್ ಜನ್ಮಸ್ಥಳವಾದ ಗೋಪಿನಾಥಂನಿಂದ 6 ಕಿಮೀ ದೂರದಲ್ಲಿರುವ ಕುಗ್ರಾಮದಲ್ಲಿ ಶಿರಚ್ಛೇದ ಮಾಡಲಾಗಿತ್ತು. ಆತನನ್ನು ಕೊಂದ ಸ್ಥಳದಲ್ಲಿ ಅವರ ಗೌರವಾರ್ಥವಾಗಿ ಒಂದು ದೇವಾಲಯವನ್ನು ಸಹ ನಿರ್ಮಿಸಲಾಗಿದೆ. ಶ್ರೀನಿವಾಸ್ ಅವರ ನಿಧನದ 31 ನೇ ವಾರ್ಷಿಕೋತ್ಸವದ ನೆನಪಿಗಾಗಿ ಮ್ಯೂಸಿಯಂ ಮತ್ತು ಈ ಮರುಸ್ಥಾಪಿಸಲಾದ ಜೀಪ್ನ್ನು ಇಡಲಾಗಿದೆ.
ಇದನ್ನೂ ಓದಿ: Male Mahadeshwara Betta: ಶಿವರಾತ್ರಿ ಜಾತ್ರೆ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ ವಾಹನ ನಿರ್ಬಂಧ
ವೀರಪ್ಪನ್ ಸೆರೆಹಿಡಿಯಲು ರಚಿಸಲಾದ ವಿಶೇಷ ಕಾರ್ಯಪಡೆಯಲ್ಲಿ ಶ್ರೀನಿವಾಸ್ ಅವರು ಸಹಾಯಕ ಕಮಾಂಡರ್ ಆಗಿದ್ದರು. ಶ್ರೀನಿವಾಸ್ ಗಾಂಧಿವಾದಿಯಾಗಿದ್ದು, ವೀರಪ್ಪನ್‌ನನ್ನು ಒಂದೇ ಒಂದು ಗುಂಡನ್ನು ಬಳಸದೆ ಸೆರೆಹಿಡಿಯಲು ಬಯಸಿದ್ದರು ಎಂದು ಐಎಫ್‌ಎಸ್ ಅಧಿಕಾರಿಯೊಂದಿಗೆ ಕೆಲಸ ಮಾಡಿದ್ದ ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ.ಸಿಂಗ್ ಹೇಳಿದ್ದಾರೆ. ಕುಖ್ಯಾತ ದರೋಡೆಕೋರನನ್ನು ಸೆರೆಹಿಡಿಯಲು ವೀರಪ್ಪನ್‌ನ ಸಹೋದರ ಅರ್ಜುನನ ವಿಶ್ವಾಸವನ್ನೂ ಗಳಿಸಿದ್ದ.
ಇದನ್ನೂ ಓದಿ: ಚಾಮರಾಜನಗರ: ಕೆರೆಯಲ್ಲಿ ಹುಲಿ ಮೃತದೇಹ ಪತ್ತೆ; ಸ್ಥಳಕ್ಕಾಗಮಿಸಿದ ಅರಣ್ಯಧಿಕಾರಿಗಳ ವಿರುದ್ದ ಜನರ ಆಕ್ರೋಶ
ಆದರೆ ಅರ್ಜುನನು ಶ್ರೀನಿವಾಸನ ನಂಬಿಕೆಗೆ ದ್ರೋಹ ಬಗೆದಿದ್ದು, ಒಬ್ಬನೇ ಬಂದರೆ ವೀರಪ್ಪನ್ ಶರಣಾಗುತ್ತಾನೆ ಎಂದು ಹೇಳಿದನು. ಇತ್ತ ಅರ್ಜುನನ ಸಂದೇಶ ಸಿಗುತ್ತಿದ್ದಂತೆ ಬೈಕ್‌ನಲ್ಲಿ ಗೋಪಿನಾಥಂಗೆ ಹೋಗಿ ಅಲ್ಲಿಂದ ಅರಕೆಯ ಕಡೆಗೆ ಹೋದರು. ಕಾದು ಕುಳಿತಿದ್ದ ವೀರಪ್ಪನ್ ಶ್ರೀನಿವಾಸ್ನನ್ನು ಹಿಡಿದು ಚಿತ್ರಹಿಂಸೆ ನೀಡಿ ಶಿರಚ್ಛೇದ ಮಾಡಿದ. ಇದುವರೆಗೂ ಶ್ರೀನಿವಾಸ್ ತಲೆ ಪತ್ತೆಯಾಗಿಲ್ಲ. ವೀರಪ್ಪನ್ ಚಿತ್ರಹಿಂಸೆಯ ಗುರುತುಗಳನ್ನು ಹೊಂದಿರುವ ಆತನ ದೇಹವನ್ನು ಮಾತ್ರ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಶ್ರೀನಿವಾಸ್ ಅವರು ಬಳಸುತ್ತಿದ್ದ ಜೀಪ್ನ್ನು ಸಂರಕ್ಷಿಸುವುದು ಮತ್ತು ವಸ್ತುಸಂಗ್ರಹಾಲಯದಲ್ಲಿ ಇಟ್ಟು ಅವರನ್ನು ಗೌರವಿಸುವ ಉದಾತ್ತ ಮಾರ್ಗವಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:51 pm, Thu, 16 February 23