ಚಾಮರಾಜನಗರ: ಶಿಕ್ಷಕರಿಬ್ಬರ ಜಗಳದಿಂದ ಮೇಗಲಹುಂಡಿ ಸರ್ಕಾರಿ ಫ್ರೌಢಶಾಲೆ ಬಂದ್​; ಶಿಕ್ಷಕರ ವಿರುದ್ಧ ಗ್ರಾಮಸ್ಥರ ಆಕ್ರೋಶ

ಅಪ್ಪ ಅಮ್ಮನ ಜಗಳಕ್ಕೆ ಕೂಸು ಬಡವಾಯ್ತು ಅನ್ನೋ ಮಾತಿದೆ. ಅದೇ ರೀತಿ ಇಲ್ಲಿನ‌ ಶಾಲೆಯೊಂದರ ಶಿಕ್ಷಕರ ಜಗಳಕ್ಕೆ ಇಡೀ ಶಾಲೆ ಬಂದ್ ಆಗಿದ್ದು, ಶಾಲೆಯ ಮಕ್ಕಳ ಶಿಕ್ಷಣದ ಮೇಲೆ ಹೊಡೆತ ಬಿದ್ದಿದ್ದೆ.

ಚಾಮರಾಜನಗರ: ಶಿಕ್ಷಕರಿಬ್ಬರ ಜಗಳದಿಂದ ಮೇಗಲಹುಂಡಿ ಸರ್ಕಾರಿ ಫ್ರೌಢಶಾಲೆ ಬಂದ್​; ಶಿಕ್ಷಕರ ವಿರುದ್ಧ ಗ್ರಾಮಸ್ಥರ ಆಕ್ರೋಶ
ಚಾಮರಾಜನಗರ ಶಿಕ್ಷಕರಿಬ್ಬರ ಜಗಳಕ್ಕೆ ಸರ್ಕಾರಿ ಶಾಲೆ ಬಂದ್​
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 17, 2023 | 3:18 PM

ಚಾಮರಾಜನಗರ: ತಾಲೂಕಿನ ಮೇಗಲಹುಂಡಿ ಫ್ರೌಢಶಾಲೆ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಹಾಗೂ ಕ್ರೀಡಾ ಚಟುವಟಿಕೆಗಳಿಂದ ಒಳ್ಳೆಯ ಹೆಸರು ಗಳಿಸಿರುವ ಶಾಲೆ. ಆದರೀಗಾ ಶಿಕ್ಷಕರ ಒಳ ಜಗಳದಿಂದ ಶಾಲೆಗೆ ಕೆಟ್ಟ ಹೆಸರು ಬರುವಂತಾಗಿದೆ. ಶಾಲೆಗೆ ಕಳೆದೊಂದು ವಾರದಿಂದ ಮಕ್ಕಳ ಹಾಜರಾತಿ ಕಡಿಮೆಯಾಗಿದೆ. ಈ ವೇಳೆ ಶಾಲಾ ಮಕ್ಕಳ ಹಾಜರಾತಿ ಕಡಿಮೆಯಾಗಲು ಕಾರಣ ಏನು ಅಂತಾ ನೋಡಿದಾಗ ಶಾಲೆಯ ಮಕ್ಕಳಿಗೆ ಜ್ವರ ಕೆಮ್ಮು ಕಾಣಿಸಿಕೊಂಡಿದೆಯಂತೆ. ಇದಕ್ಕೆ ಶಾಲೆಯಲ್ಲಿ ಮಕ್ಕಳು ಬೊಂಡ ತಿಂದಿದ್ದರಿಂದ‌ಲೇ ಮಕ್ಕಳಿಗೆ ಜ್ವರ ಬಂದಿದೆ ಎಂದು ಶಾಲೆಯ ಹಿಂದಿ ಶಿಕ್ಷಕ ದುಂಡುಮಹದೇವ ದೂರಿದ್ದಾರಂತೆ. ಹೌದು ಇದೇ ತಿಂಗಳು 8 ರಂದು ಶಾಲೆಯಲ್ಲಿ ಗಣಿತ ಹಬ್ಬ ಆಚರಣೆ ಮಾಡಲಾಗಿತ್ತಂತೆ. ಈ ವೇಳೆ ಶಾಲೆಯಲ್ಲಿ ಮಕ್ಕಳಿಗೆ ಶಾಲೆ‌ ಮುಖ್ಯಶಿಕ್ಷಕ ಬೊಂಡ ಮಾಡಿಸಿದ್ದರಂತೆ. ಇದರಿಂದ ಮಕ್ಕಳಿಗೆ ಹೀಗಾಗಿದೆ ಎನ್ನುವ ಮೂಲಕ ಮುಖ್ಯ ಶಿಕ್ಷಕರ ದೂರಿದ್ದಾರೆ.

ಇದರಿಂದಾಗಿ ಇದೀಗ ಇಡೀ ಶಾಲೆ ಮಕ್ಕಳಿಗೆ ರಜೆ ಘೋಷಣೆ ಮಾಡಿದ್ದಾರೆ. ಆದ್ರೆ ಅದೇ ಕ್ಯಾಂಪಸ್​ನಲ್ಲಿ ಇರುವ ಪ್ರೈಮರಿ ಶಾಲೆಯ ಮಕ್ಕಳಿಗೆ ಏಕೆ ಅನಾರೋಗ್ಯ ತಪ್ಪಿಲ್ಲ ಅನ್ನೋ ಪ್ರಶ್ನೆ ಸಹ ಮೂಡಿದೆ. ಈ ಬಗ್ಗೆ ಶಾಲೆ ಮುಖ್ಯಶಿಕ್ಷಕರನ್ನ ಕೇಳಿದ್ರೆ ಅವರು ಹೇಳುವ ಉತ್ತರ ಬೇರೆಯದ್ದಾಗಿದೆ. ಕಳೆದ ಎರಡು ವರ್ಷದಿಂದ ನನಗೆ ಶಾಲೆಯ ಚಾರ್ಜ್ ಅನ್ನು ದುಂಡುಮಹದೇವ್ ಕೊಟ್ಟಿಲ್ಲ. ಈ ಬಗ್ಗೆ ಕೇಳಿದಾಗಿನಿಂದ ಶಾಲೆಯಲ್ಲಿ ನನ್ನ ಬಗ್ಗೆ ಒಂದಿಲ್ಲೊಂದು ಆರೋಪ ಮಾಡುತ್ತಿದ್ದಾರೆ. ನಾನು ಕಾನೂನು ಪ್ರಕಾರ ಕೆಲಸ ಮಾಡುತ್ತಿದ್ದೇನೆ ಇದರಿಂದ ನನ್ನ ಮೇಲೆ ದೂರಿದ್ದಾರೆ ಅನ್ನುತ್ತಿದ್ದಾರೆ.

ಇದನ್ನೂ ಓದಿ:ಮಂಡ್ಯ: ಅಂಧಕಾರದಲ್ಲಿ ಮುಳುಗಿದ ಸರ್ಕಾರಿ ಶಾಲೆ, ವಿದ್ಯುತ್ ಬಿಲ್ ಬಾಕಿ ಹಿನ್ನೆಲೆ ಕರೆಂಟ್ ಕಟ್ ಮಾಡಿದ ಕೆಇಬಿ ಇಲಾಖೆ

ಇನ್ನು ಈ ಬಗ್ಗೆ ಗ್ರಾಮಸ್ಥರು ಕೂಡ ಬೇಸರಪಟ್ಟು ಕೊಳ್ಳುತ್ತಿದ್ದಾರೆ. ಈ ಶಾಲೆಗೆ ಒಳ್ಳೆಯ ಹೆಸರಿದೆ. ಆದ್ರೆ ಶಾಲೆಯ ಇಬ್ಬರು ಶಿಕ್ಷಕರಿಂದ ಶಾಲೆಗೆ ಕೆಟ್ಟ ಹೆಸರು ತರುತ್ತಿದ್ದಾರೆ.‌ ಮಕ್ಕಳು ಯಾವುದೋ ಜಾತ್ರೆಗೆ ಹೋಗಿ ಅಲ್ಲಿ ಊಟ ಮಾಡಿ ಜ್ವರ ಬಂದಿರಬಹುದು.‌ ಅದರಲ್ಲು ಶಾಲೆಯ 20 ಮಕ್ಕಳಿಗೆ ಮಾತ್ರ ಬಂದಿದೆ. ಇದರಿಂದ ಇಡೀ ಶಾಲೆ ಬಂದ್ ಮಾಡಿಸಿದ್ದಾರೆ. ಪರೀಕ್ಷೆ ಸಮಯದಲ್ಲಿ ಈ ರೀತಿ‌ ಮಾಡುವುದರಿಂದ ಮಕ್ಕಳ ಮೇಲೆ‌ ಪರಿಣಾಮ ಬೀರುತ್ತೆ. ಇದರಿಂದ ಇಬ್ಬರು ಶಿಕ್ಷಕರನ್ನ ವರ್ಗಾವಣೆ ಮಾಡಬೇಕು ಅಂತ ಗ್ರಾಮಸ್ಥರು ಶಿಕ್ಷಕರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಒಟ್ಟಾರೆ ಇಬ್ಬರು ಶಿಕ್ಷಕರ ಆರೋಪ ಪ್ರತ್ಯಾರೋಪದಿಂದ ಕಳೆದ ಮೂರು ದಿನದಿಂದ ಶಾಲೆ ರಜೆ ಘೋಷಣೆ ಮಾಡಲಾಗಿದೆ. ಆದಷ್ಟು ಬೇಗ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶ ಮಾಡಿ ಗೊಂದಲಕ್ಕೆ ತೆರ ಎಳೆಯಬೇಕಾಗಿದೆ.

ವರದಿ: ದಿಲೀಪ್ ಚೌಡಹಳ್ಳಿ ಟಿವಿ9 ಚಾಮರಾಜನಗರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್