ಬಂಡೀಪುರ ಅಭಯಾರಣ್ಯದಲ್ಲಿ ಪ್ರವಾಸಿಗರಿಗೆ ದರ್ಶನ ಭಾಗ್ಯ ನೀಡಿದ ಅತಿ ಉದ್ದನೆಯ ದಂತ ಹೊಂದಿರುವ ಗಜರಾಜ!

| Updated By: ಸಾಧು ಶ್ರೀನಾಥ್​

Updated on: Sep 04, 2023 | 1:04 PM

Wild Tusker: ಇದೀಗ ಭೋಗೇಶ್ವರನನ್ನೆ ಹೋಲುವ ಕಾಡಾನೆಯೊಂದು ಬಂಡೀಪುರದಲ್ಲಿ ಪ್ರವಾಸಿಗರಿಗೆ ದರ್ಶನ ಭಾಗ್ಯ ನೀಡಿದೆ. ಸದರಿ ಕಾಡಾನೆಯು ತನ್ನ ಉದ್ದನೆಯ ದಂತಗಳೊಂದಿಗೆ ಗಮನ ಸೆಳೆಯುತ್ತಿದೆ. ನೆಲಕ್ಕೆ ತಾಗುವಂತಿರುವ ದಂತಗಳನ್ನ ಕಂಡು ಪ್ರವಾಸಿಗರು ಮನಸೋತಿದ್ದಾರೆ. ಎರಡು ಮೀಟರ್‌ ಗೂ ಹೆಚ್ಚು ಉದ್ದ ಇರುವ ದಂತ ಇದಾಗಿದೆ.

ಬಂಡೀಪುರ ಅಭಯಾರಣ್ಯದಲ್ಲಿ ಪ್ರವಾಸಿಗರಿಗೆ ದರ್ಶನ ಭಾಗ್ಯ ನೀಡಿದ ಅತಿ ಉದ್ದನೆಯ ದಂತ ಹೊಂದಿರುವ ಗಜರಾಜ!
ಬಂಡೀಪುರ ಅಭಯಾರಣ್ಯದಲ್ಲಿ ಅತಿ ಉದ್ದದ ದಂತ ಹೊಂದಿರುವ ಗಜರಾಜನ ದರ್ಶನ ಭಾಗ್ಯ!
Follow us on

ಚಾಮರಾಜನಗರ, ಸೆಪ್ಟೆಂಬರ್​ 4: ಬಂಡೀಪುರ ಅಭಯಾರಣ್ಯದಲ್ಲಿ (Bandipur National Park) ಅತಿ ಉದ್ದನೆಯ ದಂತ ಹೊಂದಿರುವ ಗಜರಾಜ ಪ್ರತ್ಯಕ್ಷವಾಗಿದ್ದಾನೆ! ಬಂಡೀಪುರದಲ್ಲಿ ಅತಿ ಉದ್ದದ ದಂತ ಹೊಂದಿರುವ ಆನೆ ಪತ್ತೆಯಾಗಿದ್ದು, ಆ ದಂತಗಳ (Tusker) ಕಂಡು ಪ್ರವಾಸಿಗರು (tourists) ಪುಳಕಿತರಾಗಿದ್ದಾರೆ. ಕಬಿನಿ ಹಿನ್ನೀರಿನ ಭೋಗೇಶ್ವರನನ್ನೇ ಹೋಲುವ ಕಾಡಾನೆ (Wild Elephant) ಹೀಗೆ ದರ್ಶನ ನೀಡಿದೆ. ಏಷ್ಯಾದಲ್ಲಿಯೇ ಅತಿ ಉದ್ದದ ದಂತ ಹೊಂದಿದ್ದ ಆನೆ ಎಂಬ ಖ್ಯಾತಿ ಭೋಗೇಶ್ವರನದ್ದಾಗಿತ್ತು (Chamarajanagar).

ಭೋಗೇಶ್ವರ ಕಳೆದ ವರ್ಷ ಸಹಜ ಸಾವಿಗೀಡಾಗಿದ್ದ. ಇದೀಗ ಭೋಗೇಶ್ವರನನ್ನೆ ಹೋಲುವ ಕಾಡಾನೆಯೊಂದು ಬಂಡೀಪುರದಲ್ಲಿ ಪ್ರವಾಸಿಗರಿಗೆ ದರ್ಶನ ಭಾಗ್ಯ ನೀಡಿದೆ. ಸದರಿ ಕಾಡಾನೆಯು ತನ್ನ ಉದ್ದನೆಯ ದಂತಗಳೊಂದಿಗೆ ಗಮನ ಸೆಳೆಯುತ್ತಿದೆ. ನೆಲಕ್ಕೆ ತಾಗುವಂತಿರುವ ದಂತಗಳನ್ನ ಕಂಡು ಪ್ರವಾಸಿಗರು ಮನಸೋತಿದ್ದಾರೆ.

ಇದನ್ನೂ ಓದಿ: ಸಕಲೇಶಪುರ – ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯಗೊಂಡ ಕಾಡಾನೆ ನರಳಾಟ

ಎರಡು ಮೀಟರ್‌ ಗೂ ಹೆಚ್ಚು ಉದ್ದ ಇರುವ ದಂತ ಇದಾಗಿದೆ. ಮತ್ತೊಂದು ಆನೆಯೊಂದಿಗೆ ಚಿನ್ನಾಟ ಆಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಇದೀಗ ವೈರಲ್ ಆಗಿದೆ.

ಬಂಡೀಪುರ ಕುರಿತಾದ ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:04 pm, Mon, 4 September 23