ಚಾಮರಾಜನಗರ: ಶಿವನಸಮುದ್ರ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು
ಬೆಂಗಳೂರಿನ ಸುರಾನ ಕಾಲೇಜ್ನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಪುನೀತ್, ನಿನ್ನೆ ಸ್ನೇಹಿತರ ಜೊತೆ ಶಿವನ ಸಮುದ್ರಕ್ಕೆ ಪ್ರವಾಸಕ್ಕೆ ಬಂದಿದ್ದ. ಈ ವೇಳೆ ನೀರಿನಲ್ಲಿ ಈಜಲು ತೆರಳಿದ್ದು ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಸದ್ಯ ಅಗ್ನಿ ಶಾಮಕ ಸಿಬ್ಬಂದಿ ಮೃತ ದೇಹವನ್ನ ಪತ್ತೆ ಹಚ್ಚಿದ್ದು ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ರವಾನಿಸಲಾಗಿದೆ. ಕೊಳ್ಳೆಗಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಾಮರಾಜನಗರ, ಸೆ.05: ಮಂಡ್ಯ, ರಾಮನಗರ ರೈತರು ಕಾವೇರಿ ನೀರಿಗಾಗಿ(Cauvery River) ಪ್ರತಿಭಟನೆ ನಡೆಸುತ್ತಿದ್ದಾರೆ. ತಮಿಳು ನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿ ಸರ್ಕಾರದ ವಿರುದ್ಧ ರೈತರು ಸಿಡಿದೆದ್ದಿದ್ದಾರೆ. ಇನ್ನು ಮತ್ತೊಂದೆಡೆ ಕಾವೇರಿ ನದಿಯಲ್ಲಿ ಈಜಲು ತೆರಳಿದ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಶಿವನಸಮುದ್ರದಲ್ಲಿ(Shivanasamudra) ನಡೆದಿದೆ. ಪುನೀತ್ ಕುಮಾರ್ (18) ಮೃತ ವಿದ್ಯಾರ್ಥಿ. ಬೆಂಗಳೂರಿನ ಸುರಾನ ಕಾಲೇಜ್ನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಪುನೀತ್, ನಿನ್ನೆ ಸ್ನೇಹಿತರ ಜೊತೆ ಶಿವನ ಸಮುದ್ರಕ್ಕೆ ಪ್ರವಾಸಕ್ಕೆ ಬಂದಿದ್ದ. ಈ ವೇಳೆ ನೀರಿನಲ್ಲಿ ಈಜಲು ತೆರಳಿದ್ದು ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಸದ್ಯ ಅಗ್ನಿ ಶಾಮಕ ಸಿಬ್ಬಂದಿ ಮೃತ ದೇಹವನ್ನ ಪತ್ತೆ ಹಚ್ಚಿದ್ದು ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ರವಾನಿಸಲಾಗಿದೆ. ಕೊಳ್ಳೆಗಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ತೋಟಕ್ಕೆ ಹೋದ ಮಹಿಳೆ ಶವ ಪತ್ತೆ
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದ್ಯಾವಪಟ್ಟಣ ಗ್ರಾವದಲ್ಲಿ ತೋಟಕ್ಕೆ ಹೋದ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ಶ್ವೇತ.ಸಿ.ಕೆ. (32) ಕೊಲೆಯಾಗಿರುವ ಮಹಿಳೆ. ನಿನ್ನೆ(ಸೆ.05) ಮನೆಯಿಂದ ತೋಟಕ್ಕೆಂದು ಹೋದ ಮಹಿಳೆ ಕಾಣೆಯಾಗಿದ್ದರು. ಇಂದು ಮುಂಜಾನೆ ಅವರದ್ದೇ ತೋಟದ ಪೈಪ್ ಲೈನ್ ಗುಂಡಿಯಲ್ಲಿ ಹೂತ ರೀತಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಎಸ್ಪಿ ಬರುವವರೆಗೂ ಮೃತದೇಹ ಹೊರ ತೆಗೆಯದಂತೆ ಶ್ವೇತ ಕುಟುಂಬಸ್ಥರು ಪಟ್ಟು ಹಿಡಿದಿದ್ದು ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕ್ಕೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಇಂದು ಕೊಲ್ಹಾಪುರ ಬಂದ್: ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ಥಗಿತ
ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು
ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡದಲ್ಲಿ ನಡೆಸಿದೆ. ಧಾರವಾಡ ತಾಲೂಕಿನ ತೇಗೂರು ಗ್ರಾಮ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಘಟನೆ ನಡೆದಿದೆ. ಗಂಗಾಧರ (22) ಹಾಗೂ ನಾಗರಾಜ (22) ಸಾವನ್ನಪ್ಪಿದ ದುರ್ದೈವಿಗಳು. ಮೃತರು ಧಾರವಾಡ ತಾಲೂಕಿನ ಕೋಟೂರು ಗ್ರಾಮದವರು. ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ