ಪೊಲೀಸ್​ ದರ್ಪ: ಕಳ್ಳ ಎಂದು ಯುವಕನಿಗೆ ಹಿಗ್ಗಾಮಗ್ಗಾ ಥಳಿತ; ಪೊಲೀಸರ ವಿರುದ್ಧ ಯುವಕ ಆರೋಪ

| Updated By: ವಿವೇಕ ಬಿರಾದಾರ

Updated on: Sep 12, 2022 | 4:08 PM

ಕಳ್ಳ ಎಂದು ತಿಳಿದು ಪೊಲೀಸರು ಯುವಕನಿಗೆ ಹಿಗ್ಗಾಮಗ್ಗಾ ಥಳಿತಳಿಸಿರುವ ಆರೋಪ ಕೇಳಿ ಬಂದಿದೆ. ಕೋಣನಪಾಳ್ಯ ಗ್ರಾಮದ ದಿಲೀಪ್ ಹಲ್ಲೆಗೊಳಗಾದ ಯುವಕ.

ಪೊಲೀಸ್​ ದರ್ಪ: ಕಳ್ಳ ಎಂದು ಯುವಕನಿಗೆ ಹಿಗ್ಗಾಮಗ್ಗಾ ಥಳಿತ; ಪೊಲೀಸರ ವಿರುದ್ಧ ಯುವಕ ಆರೋಪ
ಹಲ್ಲೆಗೊಳಗಾದ ಯುವಕ
Follow us on

ಚಾಮರಾಜನಗರ: ಕಳ್ಳ ಎಂದು ತಿಳಿದು ಪೊಲೀಸರು ಯುವಕನಿಗೆ ಹಿಗ್ಗಾಮಗ್ಗಾ ಥಳಿತಳಿಸಿರುವ ಆರೋಪ ಕೇಳಿ ಬಂದಿದೆ. ಕೋಣನಪಾಳ್ಯ ಗ್ರಾಮದ ದಿಲೀಪ್ ಹಲ್ಲೆಗೊಳಗಾದ ಯುವಕ. ಯುವಕ ದಿಲೀಪ್​ರನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಮರಾಜನಗರ ಗ್ರಾಮಾಂತರ ಪೊಲೀಸರು ಚಿನ್ನ ಕಳ್ಳತನ ಆರೋಪದಲ್ಲಿ ನನ್ನನ್ನು ಠಾಣೆಗೆ ಕರೆದೊಯ್ದು ಹಿಗ್ಗಾಮುಗ್ಗಾ ಥಳಿಸಿಸಿದ್ದಾರೆ ಎಂದು ಹಲ್ಲೆಗೊಳಗಾಗದ ಯುವಕ ಆರೋಪಿಸಿದ್ದಾರೆ.

ಪೊಲೀಸರು ಚಿನ್ನ ಕದ್ದಿದ್ದೀಯ ಎಂದು ಠಾಣೆಗೆ ಕರೆದೊಯ್ದರು. ಕಳ್ಳತನ ಮಾಡಿದ ವ್ಯಕ್ತಿ ತರಹ ನೀನು ಶರ್ಟ್ ಹಾಕಿದ್ದೆ. ನೀನೆ ಕಳ್ಳತನ ಮಾಡಿದ್ದಿಯಾ ಎಂದು ಆರು ಮಂದಿ ಪೊಲೀಸರು ಒಟ್ಟಾಗಿ ಹೊಡೆದರು ಎಂದು ಯುವಕ ದಿಲೀಪ್ ಆರೋಪಿಸಿದ್ದಾರೆ.

ನಾನು ಯಾವುದೇ ತಪ್ಪು ಮಾಡಿಲ್ಲ.ಆಗ ತಾನೆ ಕೆಲಸ ಮುಗಿಸಿ ಬಂದಿದ್ದೆ. ಪ್ರಕರಣದ ಗೊತ್ತು ಗುರಿ ಇಲ್ಲದ ನನ್ನ ಮೇಲೆ ದರ್ಪ ತೋರಿದರು. ನನಗೆ ನ್ಯಾಯ ಬೇಕು. ಪೊಲೀಸರ ಹೊಡೆತ ತಾಳದೆ ಮನೆಯಲ್ಲಿ ಚಿನ್ನ ಇದೆ ಕೊಡುತ್ತೇನೆ ಎಂದು ಸುಳ್ಳು ಹೇಳಿದೆ. ಆ ಬಳಿಕ ಪೊಲೀಸರೇ ನನ್ನನ್ನು ಆಸ್ಪತ್ರೆಗೆ ದಾಖಲಿಸಿ ಹೋಗಿದ್ದಾರೆ ಎಂದು ಥಳಿತಕ್ಕೊಳಗಾದ ಯುವಕ ಹೇಳಿದರು.

ಬೆಂಕಿ ಬಿದ್ದು ಆಲೆಮನೆ ಹಾಗು ಟ್ರಾಕ್ಟರ್ ಭಸ್ಮ: ಬೆಂಕಿ ಬಿದ್ದು ಆಲೆಮನೆ ಹಾಗು ಟ್ರಾಕ್ಟರ್ ಭಸ್ಮಗೊಂಡಿರುವ ಘಟನೆ ಚಾಮರಾಜನಗರ ತಾಲೂಕು ಚಿಕ್ಕಮೋಳೆ ಗ್ರಾಮದಲ್ಲಿ  ನಡೆದಿದೆ. ಗ್ರಾಮದ ನಾರಾಯಣಸ್ವಾಮಿ ಎಂಬುವರಿಗೆ ಸೇರಿದ ಆಲೆಮನೆ ಹಾಗು ಟ್ರಾಕ್ಟರ್ ಭಸ್ಮಗೊಂಡಿದ್ದು, 10 ಲಕ್ಷ ರೂಪಾಯಿಗು ಹೆಚ್ಚು ನಷ್ಟವಾಗಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:27 pm, Mon, 12 September 22