ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸಾವಿಗೀಡಾಗಿದ್ದಾರೆ. ತಮಿಳುನಾಡಿನಿಂದ ಪ್ಲೇವುಡ್ ತೆಗೆದು ಕೊಂಡು ಬರುತ್ತಿದ್ದ ಲಾರಿ ಶಿವಪುರ ಬಳಿ ಸ್ಕಿಡ್ ಆಗಿ ಬೈಕ್ ಮೇಲೆ ಉರುಳಿಬಿದ್ದಿದೆ. ಬೈಕ್ನಲ್ಲಿದ್ದ ಇಬ್ಬರು ಸವಾರರು ಮತ್ತು ಲಾರಿ ಚಾಲಕ ದುರ್ಮರಣಹೊಂದಿದ್ದಾರೆ.
ಬ್ರೇಕ್ ನಿಯಂತ್ರಣಕ್ಕೆ ಸಿಗದೇ ಲಾರಿ ಪಲ್ಟಿ:
ಬ್ರೇಕ್ ನಿಯಂತ್ರಣಕ್ಕೆ ಸಿಗದೇ ಲಾರಿ ಪಲ್ಟಿ ಹೊಡೆದಾಗ ಲಾರಿ ಕೆಳಗೆ ಸಿಕ್ಕಿಹಾಕಿಕೊಂಡ ಇಬ್ಬರೂ ಬೈಕ್ ಸವಾರರು ಮೃತಪಟ್ಟಿದ್ದಾರೆ. ಶಿವಪುರದ ಕಾಳಪ್ಪ(60) ಮತ್ತು ಶಿವಪ್ಪ(58) ಮೃತ ಸವಾರರು ಎಂದು ಗುರುತಿಸಲಾಗಿದೆ.
ಕ್ಲೀನರ್ಗೆ ಗಂಭೀರ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುಂಡ್ಲುಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
Published On - 2:50 pm, Wed, 20 November 19